ಮಡಿಕೇರಿ: ದಕ್ಷಿಣ ಭಾರತದ ನಂದಿನಿ ನಾಗರಾಜ್ ಪ್ರಸ್ತುತ ಪಡಿಸಿದ ಮಿಸ್ಟರ್, ಮಿಸ್ ಮತ್ತು ಮಿಸಸ್ ಇಂಡಿಯಾ ಐ ಎಮ್ ಪವರ್ ಪುಲ್- 2021 ಸ್ಪರ್ಧೆಯಲ್ಲಿ ಕೊಡಗಿನ ಬೆಡಗಿಯರು ಪ್ರಶಸ್ತಿ ಗೆದ್ದಿದ್ದಾರೆ.
ಶೆರಾಟನ್ ಗ್ರ್ಯಾಂಡ್ ದಿ ಬ್ರಿಡ್ಜ್ ಗೇಟ್‌ವೇ ನಲ್ಲಿ ನಡೆದ ಸ್ಪರ್ಧೆಯಲ್ಲಿ ಕೊನಿಯಂಡ ಕಾವ್ಯ ಮಿಸಸ್ ಸೌತ್ ಇಂಡಿಯಾ ಕರ್ವಿ ಆಗಿ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅಕ್ಟೋಬರ್ ನಲ್ಲಿ ರಾಜಸ್ಥಾನದ ಜೈಪುರದಲ್ಲಿ ರಾಷ್ಟ್ರಮಟ್ಟದ ಸ್ಪರ್ಧೆ ನಡೆಯಲಿದೆ. ಕಾವ್ಯ ಅವರು ಸೌತ್ ಇಂಡಿಯಾ ಆಟಿಟ್ಯೂಡ್ ಎಂಬ ಉಪಶೀರ್ಷಿಕೆಯನ್ನು ಕೂಡ ಪಡೆದುಕೊಂಡರು.
ವಿಜಯ್ ಬಲ್ಯಂಡ ಅವರು ತೀರ್ಪುಗಾರರ ವಿಶೇಷ ಮೆಚ್ಚುಗೆಯನ್ನು ಪಡೆದು ಕೂರ್ಗ್ ಸ್ಕಾಟ್ಲ್ಯಾಂಡ್ ಕ್ವೀನ್ ಎಂಬ ಕಿರೀಟವನ್ನು ಮುಡಿಗೇರಿಸಿಕೊಂಡರು. ಅಲ್ಲದೆ ಇನ್ನರ್ ಬ್ಯೂಟಿ ಎಂಬ ಬಿರುದನ್ನು ಕೂಡ ಪಡೆದರು. ಕಲ್ಪನಾ ಚನ್ನಪಂಡ ಅವರು ಮಿಸಸ್ ಸೌತ್ ಇಂಡಿಯಾ ಅಟ್ರಾಕ್ಟಿವ್ ಪ್ರಶಸ್ತಿ ಗೆದ್ದರು.
ಮಿಸ್ ಸೌತ್ ಇಂಡಿಯಾ ಬೆಸ್ಟ್ ಸ್ಮೈಲ್ ಮತ್ತು ಮಿಸ್ ಸೌತ್ ಇಂಡಿಯಾ ಬೆಸ್ಟ್ ಬಾಡಿ ಸ್ಪರ್ಧೆಯಲ್ಲಿ ಮಿಸ್ ಕುಪ್ಪನಮಾಡ ಭೂಮಿಕ ಎರಡು ಪ್ರಶಸ್ತಿಗಳನ್ನು ಪಡೆದುಕೊಂಡರು.
ಈ ಸ್ಪರ್ಧೆಗಳ ಸಹ ಪ್ರಾಯೋಜಕರಾಗಿದ್ದ ಕೊಡಗಿನ ಪಿ ಆಂಡ್ ಜಿ ಕ್ರಿಯೇ ನ್ಸ್ ನ ಬಾಳೆಯಡ ಪ್ರತೀಶ್ ಪೂವಯ್ಯ ಅವರ ಮಾರ್ಗದರ್ಶನದಲ್ಲಿ ಸ್ಪರ್ಧಿಗಳು ಭಾಗವಹಿಸಿದ್ದರು.