ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಪಾಸಿಟಿವ್ ರೇಟ್ ಕಡಿಮೆಯಾಗದ ಕಾರಣದಿಂದ ರಾಜ್ಯದಲ್ಲಿ ಎಲ್ಲ ಜಿಲ್ಲೆಗಳಿಗೆ ಅನ್ ಲಾಕ್ ಭಾಗ್ಯ ಒದಗಿಸಿದ್ದರೂ ಕೂಡ ಕೊಡಗಿನಲ್ಲಿ ಮಾತ್ರ ಲಾಕ್ ಡೌನ್ ಮುಂದುವರೆದಿದೆ.
ಸೋಂಕಿನ ಪ್ರಮಾಣ ಕಡಿಮೆ ಆಗುವವರೆಗೂ ಜಿಲ್ಲೆಯನ್ನು ಅನ್‍ಲಾಕ್ ಮಾಡುವುದು ಬೇಡ ಎಂದು ಶಾಸಕರಾದ ಕೆ.ಜಿ.ಬೋಪಯ್ಯ ಮತ್ತು ಅಪ್ಪಚ್ಚು ರಂಜನ್ ಹೇಳಿದ್ದರು. ಈ ಸಂಬಂಧ ಸರ್ಕಾರ ಕೂಡ ಅನ್ ಲಾಕ್ ನ್ನು ಕೊಡಗಿನಲ್ಲಿ ಜಾರಿ ಮಾಡಿಲ್ಲ. ಹೀಗಾಗಿ ಒಂದು ವಾರಗಳ ಕಾಲ ಅನ್ ಲಾಕ್ ಮುಂದುವರೆಯಲಿದೆ.
ಒಂದು ವೇಳೆ ಅನ್ ಲಾಕ್ ಮಾಡಿದರೆ ಬೇರೆ ಬೇರೆ ಕಾರಣಕ್ಕೆ ಕೊಡಗಿನತ್ತ ಆಗಮಿಸುವವರ ಸಂಖ್ಯೆ ಹೆಚ್ಚಿದ್ದು ಮತ್ತೆ ಕೊರೊನಾ ಹೆಚ್ಚಲು ಕಾರಣವಾಗುವ ಸಾಧ್ಯತೆ ಹೆಚ್ಚಿತ್ತು. ಬೇರೆಡೆಗೆ ಹೋಲಿಸಿದರೆ ಕೊಡಗು ಪುಟ್ಟ ಜಿಲ್ಲೆಯಾಗಿದೆ. ಇಲ್ಲಿ ಕೊರೊನಾ ನಿಯಂತ್ರಣ ಸುಲಭ ಎಂದು ನಂಬಲಾಗಿತ್ತು. ಆದರೆ ಹೊರಗಿನಿಂದ ಬಂದು ಜಿಲ್ಲೆಯಲ್ಲಿ ವಾಸ್ತವ್ಯ ಹೂಡಿದವರಿಂದ ಕೊರೊನಾ ಸಂಖ್ಯೆ ಜಾಸ್ತಿಯಾಗಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಜಿಲ್ಲೆಯಲ್ಲಿ ಕೊರೊನಾ ಸೋಂಕು ತಹಬದಿಗೆ ಬರುವ ತನಕ ಲಾಕ್ ಡೌನ್ ಸರ್ಕಾರ ಮುಂದುವರೆಸಿದೆ.