ಸುಧರ್ಮಾ ಸಂಪಾದಕರಾದ ಕೆವಿ.ಸಂಪತ್ ಕುಮಾರ್ ರವರಿಗೆ ಭಾವಚಿತ್ರ ಹಿಡಿದು ಸಂತಾಪ ಸಲ್ಲಿಸಿ ಮೈಸೂರು ಯುವ ಬಳಗ

ಭಾರತಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿ ಭಾಜನರಾಗಿರುವ ವಿಶ್ವದ ಏಕೈಕ ಸಂಸ್ಕೃತ ಪತ್ರಿಕೆ ಸುಧರ್ಮಾ ಸಂಪಾದಕರಾದ ಕೆವಿ.ಸಂಪತ್ ಕುಮಾರ್ ರವರು ನಿಧನಗೊಂಡ ಹಿನ್ನಲೆಯಲ್ಲಿ ಮೈಸೂರು ಯುವ ಬಳಗ ವತಿಯಿಂದ ಸಂಸ್ಕೃತ ಪಾಠಶಾಲೆಯ ಮುಂಭಾಗ ಸಂಪತ್ ಕುಮಾರ್ ರವರ ಭಾವಚಿತ್ರ ಹಿಡಿದು ಭಾವಪೂರ್ಣ ಶ್ರದ್ದಾಂಜಲಿ ಸಂತಾಪ ಸೂಚಿಸಿದರು,

ಇದೇ ಸಂಧರ್ಭದಲ್ಲಿ ನಗರಪಾಲಿಕೆ ಸದಸ್ಯರಾದ ಕೆಜೆ ರಮೇಶ್ ರವರು ಮಾತನಾಡಿ ಕಳೆದ ನಾಲ್ಕು ದಶಕಗಳಿಂದ ಸುಧರ್ಮಾ ಪತ್ರಿಕೆ ಮುನ್ನಡೆಸಿದ್ದ ಸಂಪತ್ ಕುಮಾರ್ ರವರು ಸಂಸ್ಕೃತ ಭಾಷೆ ಉಳಿವಿಗೆ ಶ್ರಮಿಸಿದ್ದರು ಇವರ ಸಂಸ್ಕೃತ ಸೇವೆ ಗುರುತಿಸಿ ಕೇಂದ್ರ ಸರ್ಕಾರ ಪದ್ಮಶ್ರೀ ನೀಡಿ ಗೌರವಿಸಿತ್ತು.
ಕಳೆದ 4 ದಶಕಗಳ ಕಾಲ ಪತ್ರಿಕೋದ್ಯಮದಲ್ಲಿ ತೊಡಗಿದ್ದ ಸಂಪತ್ ಕುಮಾರ್ ನಿಧನ ಅಘಾತ ತಂದಿದೆ. ಭಾರತೀಯ ಸಂಸ್ಕೃತಿ ಪರಂಪರೆಯನ್ನ ಸುಧರ್ಮ ಪತ್ರಿಕೆಯ ಮೂಲಕ ವಿದೇಶಗಳಲ್ಲಿ ಅರಿವು ಮೂಡಿಸುತ್ತಿದ್ದರು. ಸಂಪತ್ ಕುಮಾರ್ ರವರು ತಮ್ಮ ವೃತ್ತಿಯಲ್ಲಿ‌ ನಿರತರಾಗಿದ್ದಾಗಲೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದರು,
ಇದೇ ಸಂದರ್ಭದಲ್ಲಿ ನಗರ ಪಾಲಿಕಾ ಸದಸ್ಯರಾದ ಕೆ ಜೆ ರಮೇಶ್ ,ಮಾಜಿ ನಗರ ಪಾಲಿಕೆ ಸದಸ್ಯರಾದ ಎಂ ಡಿ ಪಾರ್ಥಸಾರಥಿ , ಕೇಬಲ್ ಮಹೇಶ್ ವಿಕ್ರಂ ಅಯ್ಯಂಗಾರ್ , ಅಜಯ್ ಶಾಸ್ತ್ರಿ ,ನವೀನ್, ಪ್ರಮೋದ್ ಗೌಡ ,ವಿಘ್ನೇಶ್ವರ್ ಭಟ್ ,ಪರೀಕ್ಷಿತ್ ರಾಜ್ ಅರಸ್,ಹರೀಶ್ ನಾಯ್ಡು, ಸುಚೀಂದ್ರ, ಚಕ್ರಪಾಣಿ ,ಶರತ್ ಚಂದ್ರ ,ಕೃಷ್ಣೇಗೌಡ ಹಾಗೂ ಇನ್ನಿತರರು ಹಾಜರಿದ್ದರು

Leave a Reply

Your email address will not be published. Required fields are marked *