ಮೈಸೂರು-25 ಮೈಸೂರಿನ ರಾಮಸ್ವಾಮಿ ವೃತ ಬಳಿ ಇಂದು ಭಾರತೀಯ ಒಲಂಪಿಕ್ಸ್ ಕ್ರೀಡಾ ಪಟುಗಳ ಪೋಸ್ಟರ್ ಹಿಡಿದು ಸಾಂಕೇತಿಕವಾಗಿ ಸೈಕಲ್ ಜಾಥ ಹಿರಿಯ ಕಿರಿಯ ಕ್ರೀಡಾ ಅಂತರಾಷ್ಟ್ರೀಯ ಕ್ರೀಡಾಪಟುಗಳು.ಭಾಗವಹಿಸಿದರು.ಭಾರತೀಯರು.ಟೋಕಿಯೊದಲ್ಲಿ ನೆಡೆಯುವ ಕ್ರೀಡೆಯಲ್ಲಿ ಸುವರ್ಣ ಪದಕ ಗೆದ್ದು.ಬರಲಿ ಎಂದು ಮೈಸೂರಿನ ಸುವರ್ಣ ಬೆಳಕು ಫೌಂಡೇಶನ್ ವತಿಯಿಂದ. ಹಿರಿಯ ಕಿರಿಯ ಕ್ರೀಡಾಪಟುಗಳು ಹಾಗೂ ಅಂಗವಿಕಲ ಕ್ರೀಡಾಪಟುಗಳು ಸೈಕಲ್ ಚಲಿಸುವ ಮೂಲಕ ಎಲ್ಲರ ಗಮನ ಸೆಳೆದರು.

ನಂತರ ಮಾತನಾಡಿದ ಯುವಮುಖಂಡ ವಿಕಾಸ್ ಶಾಸ್ತ್ರಿ ಅಪಾಯಕಾರಿ ಕೊರೊನಾ ವೈರಸ್ ಮಹಾಮಾರಿಯ ಕರೋನ ನಡುವೆ ಹಲವು ನಿಬರ್ಂಧನೆಗಳ ನಡುವೆ ಜುಲೈ 23ರಂದು ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟ ಆರಂಭಗೊಂಡಿದೆ. ಆದರೆ, ಕ್ರೀಡಾಕೂಟದ ಮೊದಲ ದಿನವಾದ ನಿನ್ನೆ ಭಾರತಕ್ಕೆ ಯಾವುದೇ ಯಶಸ್ಸು ಲಭಿಸಿರಲಿಲ್ಲ. ಆದರೆ ಶನಿವಾರ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತ ತನ್ನ ಖಾತೆ ತೆರೆದಿದೆ ಇದು ಬಹಳ ಖುಷಿಯಾದ ಸಂಗತಿ ಮುಂದಿನ ದಿನಗಳಲ್ಲಿ ಯುವಪೀಳಿಗೆ ಇನ್ನಷ್ಟು ಪದಕಗಳನ್ನು ತಂದು ದೇಶಕ್ಕೆ ಕೀರ್ತಿ ತರಬೇಕೆಂಬುದು ನಮ್ಮ ಆಶಯ.ಈ ಜಾಥದ ಮುಖ್ಯ ಉದ್ದೇಶ ನಮ್ಮ ಕ್ರೀಡಾ ಪಟುಗಳ ಜೊತೆ ನಾವಿದ್ದೇವೆ ಎಂಬ ಸಂದೇಶದೊಡನೆ ಯುವಪೀಳಿಗೆಯನ್ನು ಬಡಿದೆಬ್ಬಿಸುವುದು ಎಂದರು
ಇದೆ ಸಂದರ್ಭದಲ್ಲಿ ಮಾತನಾಡಿದ ಸುವರ್ಣ ಬೆಳಕು ಫೌಂಡೇಶನ್ ಅಧ್ಯಕ್ಷ ಮಹೇಶ್ ನಾಯಕ್ ಕೋವಿಡ್ ಕಾಲದಲ್ಲಿ ನಡೆಯುತ್ತಿರುವ ಟೋಕಿಯೊ ಒಲಿಂಪಿಕ್ಸ್‍ನಲ್ಲಿ ನಮ್ಮ ಭಾರತೀಯ ಕ್ರೀಡಾ ಪಟುಗಳು ಗೆಲ್ಲುವ ನಿರೀಕ್ಷೆ ಇದೆ.ಒಲಿಂಪಿಕ್ಸ್‍ನಲ್ಲಿ ನಮ್ಮ ಕ್ರೀಡಾಪಟುಗಳು ಈ ಬಾರಿ ಸರ್ಕಾರದಿಂದ ಉತ್ತಮ ಬೆಂಬಲ ನೀಡಿದೆ. ಹೀಗಾಗಿ ಅವರ ಹುಮ್ಮಸ್ಸು ಹೆಚ್ಚಿದೆ’ ಎಂದರು.ಶೂಟಿಂಗ್, ಕುಸ್ತಿ, ಬ್ಯಾಡ್ಮಿಂಟನ್ ಜಿಮ್ನಾಸ್ಟಿಕ್,ಮುಂತಾದ ಕ್ರೀಡೆಗಳಲ್ಲಿ ಪದಕ ಗೆಲ್ಲುವ ಸಾಧ್ಯತೆಗಳು ಹೆಚ್ಚು ಇವೆ. ಮುಂದಿನ ದಿನಗಳಲಲ್ಲಿ ನಮ್ಮ ಭಾರತೀಯ ಕ್ರೀಡಾ ಪಟುಗಳು ಮೊದಲ ಸ್ಥಾನದ ಪಟ್ಟಕೆ ಬರುವಂತೆ ಮುಂದಿನ ಪೀಳಿಗೆಯ ಯುವಕರ ಹೆಚ್ಚು ಕ್ರೀಡಾ ಆಸಕ್ತಿ ತೋರಿದರೆ ಮುಂದಿನ ಒಲಂಪಿಕ್ಸ್ ನಲ್ಲಿ ಪ್ರಥಮ ಪಟ್ಟಿಯಲ್ಲಿ ಪಡೆಯುವಲ್ಲಿ ಸಂಶಯವಿಲ್ಲಿ ಅದರಿಂದ್ದ ಸರ್ಕಾರ ದಿಂದ ಕ್ರೀಡಾಪಟುಗಳಿಗೆ ಪ್ರೋತ್ಸಹ ನೀಡಬೇಕು ಎಂದು ಹೇಳಿದರು.
ಇದೇ ಸಂಧರ್ಭದಲ್ಲಿ ವಿ.ಕೆ.ಎಸ್ ಫೌಂಡೇಶನ್ ಪಧಾದಿಕಾರಿಗಳಾದ ಅರುಣ ಪಾಟೀಲ್, ಜಿಮ್ನಾಸ್ಟಿಕ್ ಆರಾದ್ಯ, ಜೋಶಿ, ಅಕ್ಷಯತೇಜಸ್ ಪ್ರದೀಪ್ ಗಗನ್. ಕ್ರೀಡಾಕೂಟದಲ್ಲಿ ಮಂಜುನಾಥ.ಬಿ.ಆರ್ (ಚಿ. ಮ.ಬಿ.ಆರ್,) ರಮೇಶ್,ಹರೀಶ್, ರವಿ. ಟಿ.ಎಸ್. ರಾಘವೇಂದ್ರ ,ಮತ್ತಿತ್ತರು ಹಾಜರಿದ್ದರು,