🐏ಮೇಷ
ಆರ್ಥಿಕ ಸ್ಥಿತಿಯಲ್ಲಿ ಏರುಪೇರುಗಳು ಕಂಡುಬಂದರೂ ನಿಶ್ಚಿತ ಆದಾಯಕ್ಕೆ ಕೊರತೆ ಇಲ್ಲ. ಆತ್ಮೀಯರ ಸಹಕಾರದಿಂದ ಕಾರ್ಯಸಿದ್ಧಿ ಹೊಂದುವಿರಿ. ಚಿನ್ನಾಭರಣಗಳನ್ನು ಖರೀದಿಸಿ ನೆಮ್ಮದಿ ಹೊಂದುವಿರಿ.
🐄ವೃಷಭ
ಅವಿವಾಹಿತರಿಗೆ ವಿವಾಹ ಭಾಗ್ಯ. ವೃತ್ತಿರಂಗದಲ್ಲಿ ಕ್ರಿಯಾಶೀಲತೆಯಿಂದ ಯಶಸ್ಸು. ಸಾಮಾಜಿಕ ಕ್ಷೇತ್ರದಲ್ಲಿ ಜನಮನ್ನಣೆಯ ಅನುಭವ ನಿಮ್ಮದಾಗಲಿದೆ. ಅಪೇಕ್ಷಿತರಿಗೆ ಸಂತಾನ ಪ್ರಾಪ್ತಿ ಯೋಗವಿದೆ.
👫ಮಿಥುನ
ವೃತ್ತಿರಂಗದಲ್ಲಿ ನಿರೀಕ್ಷಿತ ಯಶಸ್ಸು. ಉದ್ಯೋಗಸ್ಥರಿಗೆ, ರಾಜಕಾರಣಿಗಳಿಗೆ ಬಡ್ತಿ ಅಥವಾ ಉನ್ನತ ಸ್ಥಾನಮಾನ ದೊರಕುವ ಲಕ್ಷಣ. ಗುತ್ತಿಗೆದಾರರಿಗೆ ಹಣಕಾಸಿನ ಹರಿವು ಉತ್ತಮವಾಗಿರುವುದು.
🦞ಕಟಕ
ಸಾಹಸ ಮತ್ತು ಕ್ರೀಡಾ ಕ್ಷೇತ್ರದಲ್ಲಿರುವವರಿಗೆ ಉತ್ತಮ ಅವಕಾಶ. ವಿದ್ಯಾರ್ಥಿಗಳಿಗೆ ಹೊಸ ಉತ್ಸಾಹ. ಪ್ರಾಪ್ತ ವಯಸ್ಕರಿಗೆ ಸಂಬಂಧಗಳು ಕೂಡಿಬರಲಿವೆ. ಗೃಹ ಸಂತೋಷ ಕಂಡುಬರುವುದು.
🦁ಸಿಂಹ
ವಾಹನ ಖರೀದಿ ಯೋಗ. ಕೈಗೆತ್ತಿ ಕೊಂಡ ಕೆಲಸ ಕಾರ್ಯಗಳು ಪ್ರಯತ್ನದಿಂದಾಗಿ ಯಶಸ್ವಿಯಾಗಲಿವೆ. ಸಾಂಸಾರಿಕ ಸುಖ, ಶಾಂತಿ ಅನುಭವಿಸಲಿದ್ದೀರಿ. ಆದಾಯದಲ್ಲಿ ವೃದ್ಧಿಯನ್ನು ಕಾಣುವಿರಿ.
💃ಕನ್ಯಾ
ಅಭಿವೃದ್ಧಿಗೆ ಪೂರಕವಾದ ಅನೇಕ ಅವಕಾಶಗಳು ಕೂಡಿಬರಲಿವೆ. ಪ್ರಮಾಣಿಕ ಪ್ರಯತ್ನದಿಂದ ಕಾರ್ಯ ಸಾಫಲ್ಯವಾಗಲಿದೆ. ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು. ಸಾಂಸಾರಿಕ ನೆಮ್ಮದಿ.
⚖ತುಲಾ
ಕೆಲಸ ಕಾರ್ಯಗಳಲ್ಲಿ ಹಿನ್ನಡೆಯಿಂದಾಗಿ ನಿರಾಸೆ ತಾಳುವುದು ಸರಿಯಲ್ಲ. ಅನಿಶ್ಚಿತತೆಯಿಂದಾಗಿ ತೊಂದರೆಗಳು ಎದುರಾಗುವ ಸಾಧ್ಯತೆ. ಆತ್ಮ ವಿಶ್ವಾಸದಿಂದ ಮುನ್ನುಗ್ಗುವುದರಿಂದ ಪ್ರಗತಿಯ ದಾರಿ ಕಾಣಲಿದೆ.
🦀ವೃಶ್ಚಿಕ
ಸ್ವಲ್ಪಮಟ್ಟಿನ ಆರ್ಥಿಕ ತೊಂದರೆಗಳು ಎದುರಾಗುವ ಸಾಧ್ಯತೆ ಇದ್ದರೂ, ಆತಂಕಕ್ಕೆ ಕಾರಣ ಇಲ್ಲ. ನಿರೀಕ್ಷಿತ ಮೂಲಗಳಿಂದ ಆದಾಯವು ನಿರಂತರ ಹರಿದುಬರಲಿದೆ. ಮಕ್ಕಳ ವಿದ್ಯಾಭ್ಯಾಸದಲ್ಲಿನ ಪ್ರಗತಿ.
🏹ಧನು
ಸರ್ಕಾರಿ ಉದ್ಯೋಗಿಗಳಿಗೆ ವರ್ಗಾವಣೆ ಅಥವಾ ಸ್ಥಾನ ಪಲ್ಲಟ ಸಾಧ್ಯತೆ. ಉದ್ಯೋಗ ಕ್ಷೇತ್ರದಲ್ಲಿ ಸ್ವಲ್ಪಮಟ್ಟಿನ ಕಿರಿಕಿರಿ. ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಲು ನಿಮಗೆ ಕಾಲವು ಪಕ್ವವಾಗಿರುವುದು.
🐊ಮಕರ
ಸದಾಚಾರದಿಂದ ತೆಗೆದುಕೊಂಡ ನಿರ್ಧಾರಗಳು ಸರಿಯಾಗಿದ್ದು ಯಶಸ್ಸನ್ನು ಕಂಡುಕೊಳ್ಳಲಿದ್ದೀರಿ. ಕೀಳರಿಮೆಯಿಂದ ಹೊರಬಂದು ಆತ್ಮವಿಶ್ವಾಸದಿಂದ ಮುಂದಡಿ ಇಡುವುದು ಅವಶ್ಯಕ. ಪ್ರೇಮ ಪ್ರಕರಣಗಳು ಸಿದ್ಧಿಸಲಿವೆ.
🥛ಕುಂಭ
ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಉತ್ತಮವಾದ ಕಾಲ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಹೆಚ್ಚಿನ ಪ್ರಗತಿ. ಮಹಿಳಾ ರಾಜಕಾರಣಿಗಳಿಗೆ ಸ್ಥಾನಮಾನಗಳು ದೊರೆಯುವ ಸಾಧ್ಯತೆ ಕಂಡುಬರುತ್ತಿದೆ.
🐟ಮೀನ
ಸಮಾಧಾನದಿಂದ ವ್ಯವಹರಿಸುವುದರಿಂದ ಕೆಲಸಕಾರ್ಯಗಳು ಸುಗಮವಾಗಿ ಸಾಗಲಿವೆ. ಗೃಹ ನಿರ್ಮಾಣ ಕಾರ್ಯದಲ್ಲಿ ಸ್ವಲ್ಪಮಟ್ಟಿನ ಹಿನ್ನಡೆ. ಶುಭ ಕಾರ್ಯಗಳಿಗಾಗಿ ಹಿರಿಯರೊಂದಿಗೆ ಚರ್ಚೆ.
ಗುರೂಜಿ. ಹನುಮಂತರಾವ್ 9686487402