ಬೆಂಗಳೂರು- ಹಿರಿಯ ಕಲಾವಿದೆ ಲೀಲಾವತಿ ಅವರು ಸ್ನಾನದ ಮನೆಯಲ್ಲಿ ಜಾರಿ ಬಿದ್ದಿದ್ದಾರೆ. ಸೋಂಟದ ಮೂಳೆಗೆ ತೀವ್ರ ಗಾಯವಾಗಿರುವ ಲೀಲಾವತಿ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಂಗಳೂರು ನಾರ್ತ್ ನ ಸೋಲದೇವನಹಳ್ಳಿಯ ತಮ್ಮ ತೋಟದ ಮನೆಯಲ್ಲಿ ಲೀಲಾವತಿ ಅವರು ಬಿದ್ದಿದ್ದಾರೆ. ನಿನ್ನೆ ಸಂಜೆ ಸ್ನಾನದ ಮನಯೆಲ್ಲಿ ಕಾಲು ಜಾರಿ ಬಿದ್ದರು. ಸೋಂಟ ನೋವಿನಿಂದ ನರಳುತ್ತಿದ್ದ ತಾಯಿಯನ್ನು ಪುತ್ರ ವಿನೋದ್ ರಾಜ್ ನೆಲಮಂಗಲದ ಬಳಿಯ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದಾರೆ.
ಬೆನ್ನಿಗೆ ಬೆಂಬಲವಾಗಿ ಪಟ್ಟಿ ಹಾಕಲಾಗಿದೆ. ಮನೆಯಲ್ಲೆ ಇನ್ನು ಒಂದು ತಿಂಗಳ ಕಾಲ ಚಿಕಿತ್ಸೆ ಪಡೆಯಬೇಕು, ಹಾಗೆಯ ಅವರು ಎದ್ದು ಓಡಾಡದಂತೆ ವಿಶ್ರಾಂತಿಯಲ್ಲಿರಬೇಕು ಎಂದು ವೈದ್ಯರು ಹೇಳಿದ್ದಾರೆ.