ಎಚ್.ಡಿ.ಕೋಟೆ: ಇನ್ನೇನೂ ಮದುಮಗ ತನ್ನ ಹೊಸ ಜೀವನದ ಕನಸು ಕಣುತ್ತಾ ಮಧುವೆ ಮನೆಯಲ್ಲಿ ಹೇಗೆಗೋ ಇರಬೇಕೆಂದು ತನ್ನ ಬಟ್ಟೆಯನ್ನು ಖರೀದಿ ಮಾಡಿ ಮಧ್ಯಾಹ್ನ ಸ್ವ ಗ್ರಾಮಕ್ಕೆ ವಾಪಸ್ಸಾಗುವ ಸಮಾಯದಲ್ಲಿ ತಾಲ್ಲೂಕಿನ ಮೈಸೂರು-ಮಾನಂದವಾಡಿ ಮುಖ್ಯ ರಸ್ತೆಯ ಪುರ ಗ್ರಾಮದ ಕೆರೆ ತಿರುವಿನಲ್ಲಿ ಈ ಅಫಘಾತ ನಡೆದಿದೆ, ಹಂಪಾಪುರ ಕಡೆಯಿಂದ ಜಯಪುರ ಕಡೆ ಹೋಗುತ್ತಿದ್ದ ಟಾಟಾ ಏಸ್ ಗೂಡ್ಸ್ ವಾಹನ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ನೆಲಕ್ಕೆ ಬಿದ್ದ ಲೋಕೇಶನ ತಲೆಗೆ ತೀವ್ರವಾದ ಪೆಟ್ಟಾಗಿದ್ದು , ತುಂಬಾ ರಕ್ತಸ್ರಾವವಾಗಿ ಸ್ಥಳದಲ್ಲಿಯೆ ಮದುಮಗ ಸಾವನ್ನಪ್ಪಿದ್ದಾನೆ.. ಇನ್ನೋಬ್ಬ ಸವಾರ ಶಂಕರನಿಗೂ ಅತಿ ಹೆಚ್ಚು ಗಾಯಗಳಾಗಿದ್ದು, ಅಲ್ಲೇ ಇದ್ದ ಗ್ರಾಮಸ್ಥರಿಂದ ಶಂಕರನ್ನನ್ನೂ ಅಂಬುಲೇನ್ಸ್ನಲ್ಲಿ ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮರಣ ಹೊಂದಿದ ಲೋಕೇಶ್ ಎಂಬುವವರಿಗೆ ಗುರವಾರ ಹುಣಸೂರು ತಾಲ್ಲೂಕಿನ ಹುಡುಗಿ ಜೊತೆ ಮದುವೆ ನಿಶ್ಚಯವಾಗಿತ್ತು ಎನ್ನಲಾಗಿದೆ. ಮದುವೆಯ ತಯಾರಿಯಲ್ಲಿದ್ದ ಲೋಕೇಶ್ ತನ್ನ ಮದುವೆಗೆ ಹೊಸ ಬಟ್ಟೆ ಖರೀದಿ ಮಾಡಲು ಹೋಗಿ ಈ ಅಫಘಾತ ನಡೆದಿದೆ. ಸಾವಿನ ಸುದ್ದಿ ತಿಳಿದು ಕುಟುಂಬಸ್ಥರು ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಘಟನೆ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಎಚ್.ಡಿ.ಕೋಟೆ ಪೋಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಎಚ್.ಡಿ.ಕೋಟೆ ಶವಗಾರಕ್ಕೆ ಸಾಗಿಸಿದ್ದಾರೆ.
ಎಚ್.ಡಿ.ಕೋಟೆ ಪೋಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಗೂಡ್ಸ್ ವಾಹನವನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.