ಮಹೇಂದ್ರ ಹೊಸ ವೀರೋ ಲಘು ಪಿಕಪ್ ವಾಹನ ಮಾರುಕಟ್ಟೆಗೆ ಬಿಡುಗಡೆ ಮಹೇಂದ್ರ ಅಂಡ್ ಮಹೇಂದ್ರ ಕಂಪನಿಯಿಂದ ತಯಾರಿಸಲ್ಪಟ್ಟಿರುವ ಬಹು ನಿರೀಕ್ಷಿತ ಸ್ಮಾಲ್ ಪಿಕಪ್ ವೀರೋ ವಾಹನವನ್ನು ಹಿನ್ಕಲ್ ನ ಇಂಡಿಯಾ ಗ್ಯಾರೇಜ್ ಶೋರೂಮ್ನಲ್ಲಿ ಮೈಸೂರಿನ ಸರಕು ಸಾಗಾಣಿಕ ಮಾರುಕಟ್ಟೆಗೆ ಪರಿಚಯಿಸಿ ಬಿಡುಗಡೆ ಮಾಡಲಾಯಿತು ಹೊಸ ವಿನ್ಯಾಸದೊಂದಿಗೆ ಮಹೇಂದ್ರ ವಾಹನ ಪ್ರಸ್ತುತ ಬೇಡಿಕೆಗೆ ಅನುಸಾರವಾಗಿ ಅಭಿವೃದ್ಧಿ ಪಡಿಸಿ ತಯಾರಾಗಿದೆ 80 HP ಡೀಸೆಲ್ ಇಂಜಿನ್ ಹಾಗೂ 90 HP ಸಿ ಎನ್ ಜಿ ಇಂಜಿನ್ ವಾಹನಗಳ ಆಯ್ಕೆಗೆ ಲಭ್ಯವಿದೆ. 9 ಅಡಿ ಮತ್ತು 10 ಅಡಿ ಉದ್ದದ ಲೋಡ್ ಬಾಡಿ ಆಯ್ಕೆಯೊಂದಿಗೆ ಹೊಸ ಜಿಪಿಎಸ್ ತಂತ್ರಜ್ಞಾನ ಅಳವಡಿಸಲಾಗಿದೆ, ಇದೇ ಪ್ರಪ್ರಥಮ ಬಾರಿಗೆ ಲಘು ಗೂಡ್ಸ್ ವಾಹನ ಶ್ರೇಣಿಯಲ್ಲಿ ಸುರಕ್ಷಿತವಾಗಿ ಏರ್ ಬ್ಯಾಗನ್ನು ವಾಹನದಲ್ಲಿ ಪರಿಚಯಿಸಲಾಗಿದೆ ಇತರ ಜೊತೆಗೆ ಟಾಪ್ ಎಂಡ್ ಮಾದರಿಯಲ್ಲಿ ಹೀಟರ್ ಪವರ್ ವಿಂಡೋಸ್ 25 ಇಂಚು ಇಂಫಾರ್ಮೇಷನ್ ಮೆಂಟ್ ಜೊತೆಗೆ ಆಂಡ್ರಾಯ್ಡ್ ಆಂಡ್ರಯ್ಡ್ ಲಕ್ಸುರಿ ಸೀಟ್ಸ್ ಸ್ಟ್ಯಾಂಡರ್ಡ್ 2+1 ಅಸನದ ಸಾಮರ್ಥ್ಯ ನೀಡಲಾಗಿದೆ 7.99 ಲಕ್ಷದಿಂದ ಆರಂಭವಾಗಲಿದೆ
ಕಾರ್ಯಕ್ರಮದಲ್ಲಿ ಸಂಸ್ಥೆಯ ಮ್ಯಾನೇಜರ್ ಆದ ಕಾಂತರಾಜ್ ಕೆವಿ, ಹಾಗೂ ಆರ್‌ಟಿಓ ಸೂಪರ್ಟೆಂಡೆಂಟ್ ಕೆ.ಆಶ್ವಿನಿ, ಸಿದ್ದರಾಜು, ಆರ್‌ಟಿಓ ಇನ್ಸ್ಪೆಕ್ಟರ್ ಅನಂತನರಂಜು, ಸೇಲ್ಸ್ ಮ್ಯಾನೇಜರ್ ಮುರಳಿ, ವಿಜಯಕಾಂತ್ ಸರ್ವಿಸ್ ಮ್ಯಾನೇಜರ್ ಮುಂತಾದರು ಹಾಜರಿದ್ದರು