ಹೌದು.. ಡಾ. ಕವನ ಎಂಬ ಯುವತಿ ಒಬ್ಬರು ಸತತ 21ವರ್ಷಗಳಿಂದ ಅಂದರೆ ತಮ್ಮ 9ನೇ ವಯಸ್ಸಿನಿಂದಲೇ ಭರತನಾಟ್ಯವನ್ನು ಕಲಿಯುತ್ತಾ ಭರತ ನಾಟ್ಯ ಶಾಸ್ತ್ರದಲ್ಲಿ ಜೂನಿಯರ್ ಹಾಗೂ ಸೀನಿಯರ್ ದರ್ಜೆಗೆ ಪರೀಕ್ಷೆಗಳನ್ನು ಪೂರ್ಣಗೊಳಿಸಿದ್ದಾರೆ.
ಹೀಗಾಗಿ ನೃತ್ಯಕಲೆಯಲ್ಲಿ ಸಾಕಷ್ಟು ಸಾಧನೆಯನ್ನು ಮಾಡುವ ಕನಸಿನ ಹೊಂದಿದ್ದಾರೆ.
ಅವಂಮಾಮಲ್ಲಪುರಂ ನೃತ್ಯೋತ್ಸವ, ಮಹಾಮಸ್ತಕಾಭಿಷೇಕ, ಗಿರಿಜಾ ಕಲ್ಯಾಣ, ಅಂತರ್ರಾಷ್ಟ್ರೀಯ ಸಭಾ, ಬೆಂಗಳೂರು ದೂರದರ್ಶನ ಸೇರಿದಂತೆ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಅಸಂಖ್ಯಾತ ಪ್ರದರ್ಶನ ನೀಡಿದ್ದಾರೆ.
ಇಷ್ಟೆಲ್ಲಾ ಸಾಧನೆಯನ್ನು ಮಾಡಿರುವ ಕವನ ಅವರು ತಮ್ಮ ಶಾಲಾ ಕಾಲೇಜುಗಳಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಸಂಯೋಜಕಿಯಾಗಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ.

ಅಷ್ಟೇ ಅಲ್ಲದೆ ಭರತನಾಟ್ಯದ ಜೊತೆಗೆ ಜಾನಪದ ಪ್ರಕಾರಗಳ ಪ್ರಯೋಗದ ಮೂಲಕವೂ ತಮ್ಮ ಪ್ರತಿಭೆಯನ್ನು ಸಾಬೀತು ಪಡಿಸಿದ್ದಾರೆ.
ಇನ್ನು ದಾವಣಗೆರೆಯ ಜೆಜೆಎಂ ವೈದ್ಯಕೀಯ ಕಾಲೇಜಿನಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ಡಿಎನ್ಬಿ ಪದವಿ ಗಳಿಸಿರುವ ಕವನ ಅವರು ಪ್ರಸ್ತುತ ಬೆಂಗಳೂರಿನ ಕಾರ್ಪೊರೇಟ್ ಆಸ್ಪತ್ರೆಯಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದಾರೆ.
ನೃತ್ಯ, ಶಿಕ್ಷಣ ಕ್ಷೇತ್ರದಲ್ಲಿ ಅಷ್ಟೇ ಅಲ್ಲದೆ ಕ್ರೀಡೆಯಲ್ಲೂ ಡಾಕ್ಟರ್ ಕವನ ಅವರು ಸೈ ಎನಿಸಿಕೊಂಡಿದ್ದಾರೆ. ತ್ರೋಬಾಲ್ ಹಾಗೂ ಟೇಬಲ್ ಟೆನಿಸ್ ಕ್ರೀಡೆಯಲ್ಲಿ ಕೂಡ ಸದಾ ಮುಂದಿರುತ್ತಾರೆ.
ಇಷ್ಟಕ್ಕೆ ಮುಗಿಯದ ಕವನ ಅವರ ವಿವಿಧ ಕ್ಷೇತ್ರದ ಸಾಧನೆ ಚಿತ್ರಕಲೆಯಲ್ಲೂ ಸಹ ಕವನ ಅವರು ಅತೀವ ಆಸಕ್ತಿ ಹೊಂದಿದ್ದು, ಚಿತ್ರಕಲಾ ಕ್ಷೇತ್ರದಲ್ಲಿ ಏನನ್ನಾದರೂ ಸಾಧಿಸಬೇಕೆಂದು ಆಸೆಯನ್ನಿಟ್ಟುಕೊಂಡಿದ್ದಾರೆ.

ಇನ್ನು ಸದಾ ಆರೋಗ್ಯದ ಬಗ್ಗೆ ಕಾಳಜಿ ಹೊಂದಿರುವ ಇವರು ತಮ್ಮ ದೇಹವನ್ನು ಸದೃಢವಾಗಿ ಇಟ್ಟುಕೊಳ್ಳುವ ಸಲುವಾಗಿ ತಾವೇ ಆರೋಗ್ಯಕರವಾದ ಮತ್ತು ರುಚಿಕರವಾದ ಆಹಾರಗಳನ್ನು ಕೂಡ ಪಾಲಿಸುತ್ತಾ ಬಂದಿದ್ದಾರೆ.
ಇಷ್ಟೆಲ್ಲಾ ಪರಿಪೂರ್ಣತೆ ಹೊಂದಿರುವ ಒಬ್ಬ ವಿದ್ಯಾರ್ಥಿನಿ ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಷ್ಟೆಲ್ಲಾ ಸಾಧನೆ ಮಾಡುವ ಮೂಲಕ ಎಲ್ಲರ ಮನವನ್ನು ಗೆಲ್ಲುವುದರ ಜೊತೆಗೆ ಒಬ್ಬ ಸಮರ್ಥ ವೈದ್ಯೆ ಆಗಿದ್ದಾರೆ ಎಂದರೆ ಅತಿಯ ಅತಿಶಯೋಕ್ತಿಯಾಗಲಾರದು.