ಪಾಂಡವಪುರದಲ್ಲಿ ಮೆಡಿಕಲ್ ಸ್ಟೋರ್ ಬೀಗ ಹೊಡೆದು ಕಳ್ಳತನ ಮಾಡಿ ಪರಾರಿ

ಪಾಂಡವಪುರ: – ಸೆ.5ರಂದು ಪಾಂಡವಪುರ ನಗರದ ಬಾಲಾಜಿ ಮೆಡಿಕಲ್ಸ್ ಸ್ಟೋರ್‌ನಲ್ಲಿ ಕಳ್ಳತನವಾಗಿತ್ತು. ಅದಾದ ನಂತರ ಇದು ಎರಡನೇ ದಿನದಲ್ಲಿ ಸೂರ್ಯ ಮೆಡಿಕಲ್ಸ್ ಸ್ಟೋರ್ ಅಂಗಡಿಯ ಬೀಗ ಮುರಿದು ಸೋಮವಾರ ರಾತ್ರಿ 5 ಸಾವಿರ ರೂ. ನಗದು ಮತ್ತು ದಾಖಲಾತಿಗಳನ್ನು ಕಳವು ಮಾಡಿ ಪರಾರಿಯಾಗಿದ್ದಾರೆ. ನಗರದಜನತೆಯ ಲ್ಲಿ ಆತಂಕ ಹೆಚ್ಚಿಸಿದೆ.

ಭಾನುವಾರ ರಾತ್ರಿ ಸೂರ್ಯ ಮೆಡಿಕಲ್ಸ್ ಸ್ಟೋರ್‌ನ ಬೀಗ ಮುರಿದು ನಂತರ  ಕಳ್ಳರು ಸ್ಟೋರ್‌ನಲ್ಲಿದ್ದ 5 ಸಾವಿರ ರೂ. ದುಡ್ಡು, ದಾಖಲಾತಿಗಳನ್ನು ಕದ್ದಿದ್ದಾರೆ .ಮೆಡಿಕಲ್  ಅಂಗಡಿಯಲ್ಲಿ ಕದ್ದ ದಾಖಲಾತಿಗಳನ್ನು ಕಳ್ಳರು ನಗರದ ಹರಳಹಳ್ಳಿ ಗೇಟ್ ಬಳಿ ದಾಖಲಾತಿಗಳನ್ನು ಸುಟ್ಟು ಹಾಕಿದ್ದಾರೆ.

ಸೋಮವಾರ ಬೆಳಿಗ್ಗೆ ಕಳ್ಳತನ ಈ ವಿಚಾರ ತಿಳಿದ ಪೊಲೀಸರು ಕಳ್ಳತನದ ಸ್ಥಳಕ್ಕೆ , ಶ್ವಾನದಳ, ಬೆರಳಚ್ಚು ತಜ್ಞರು ಬಂದು ಪರಿಶೀಲಿಸಿದ್ದಾರೆ. ಕಳ್ಳರ ಸೆರೆ ಹಿಡಿಯಲು ಪೊಲೀಸರು ಬಲೆ ಬೀಸಿದ್ದಾರೆ. ಘಟನೆ ಸಂಬಂಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *