ಮೋದಿಯಿಂದ ಮುಖರ್ಜಿ ಕನಸು ನನಸು!

ಮೈಸೂರು: ಜಮ್ಮು ಮತ್ತು ಕಾಶ್ಮೀರದ ರಾಜ್ಯದಲ್ಲಿ ಪ್ರತ್ಯೇಕವಾಗಿದ್ದ ಅರ್ಟಿಕಲ್ 370 ರದ್ದುಗೊಳಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ದಿವಂಗತ ಶ್ಯಾಮ್ ಪ್ರಸಾದ್ ಮುಖರ್ಜಿಯವರು ಕನಸನ್ನು ನನಸು ಮಾಡಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷರಾದ ಮಂಜುಳಾ ಸೋಮಶೇಖರ್   ತಿಳಿಸಿದರು.

ಬಿಜೆಪಿ ಚಾಮುಂಡೇಶ್ವರಿ ಕ್ಷೇತ್ರದ ರೈತ ಮೋರ್ಚಾ ವತಿಯಿಂದ ಬೀರಿಹುಂಡಿ ಶಕ್ತಿಕೇಂದ್ರ ರಲ್ಲಿ ವೃಕ್ಷ ರೋಹಣ ಗಿಡ ನೆಡುವ ಮೂಲಕ  ಜನಸಂಘದ ಸಂಸ್ಥಾಪಕ ದಿವಂಗತ ಶ್ಯಾಮ್ ಪ್ರಸಾದ್ ಮುಖರ್ಜಿ  ಬಲಿದಾನ ದಿವಸ್ ಆಚರಿಸಿ ಅವರು ಮಾತನಾಡಿ, ಒಂದು ದೇಶ ಒಂದೇ ಧ್ವಜ ಎಂಬ ಆಶಯವನ್ನು ಹೊಂದಿದ್ದ ಧೀಮಂತ ನಾಯಕ ಶ್ಯಾಮ್ ಪ್ರಸಾದ್ ಮುಖರ್ಜಿಯವರು ಭಾರತ ದೇಶದಲ್ಲಿ ಅಪಾರ ಕನಸು ಹೊಂದಿದ್ದು ಈ ಎಲ್ಲ ಧ್ಯೇಯೋದ್ದೇಶಗಳನ್ನು ನರೇಂದ್ರ ಮೋದಿಯವರು ಈಡೇರಿಸುವ ಮೂಲಕ ಶ್ಯಾಮ್ ಪ್ರಸಾದ್ ಮುಖರ್ಜಿಯವರ ಕನಸನ್ನು ನನಸು ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಚಾಮುಂಡೇಶ್ವರಿ ಕ್ಷೇತ್ರದ ಅಧ್ಯಕ್ಷರಾದ ಗೆಜ್ಜಗಳ್ಳಿಮಹೇಶ್  ಮಾತನಾಡಿ, ಯಾವುದೇ ಸೌಲಭ್ಯಗಳಿಲ್ಲದ ಸಮಯದಲ್ಲಿ  ಶ್ಯಾಮ್ ಪ್ರಸಾದ್ ಮುಖರ್ಜಿಯವರು ಪಕ್ಷ ಕಟ್ಟಿದ ರೀತಿ ಮತ್ತು ಅವರ ಕನಸುಗಳು ಈಡೇರಿದ ವರ್ಷ ಇದಾಗಿದ್ದು,. ನಮ್ಮಂತಹ ಸಾಮಾನ್ಯ ಕಾರ್ಯಕರ್ತರಿಗೆ ಪ್ರಾತಃ ಸ್ಮರಣೀಯರು ಎಂದರು.

ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಮಂಜುಳಾ ಸೋಮಶೇಖರ್, ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಹೇಮಂತ್ ಕುಮಾರ್ ಗೌಡ, ಬಿಜೆಪಿ ಮುಖಂಡರಾದ ಗೋಪಾಲ್ ರಾವ್, ಚಾಮುಂಡೇಶ್ವರಿ ಕ್ಷೇತ್ರದ ಅಧ್ಯಕ್ಷರಾದ  ಗೆಜ್ಜಗಳ್ಳಿ  ಮಹೇಶ್,   ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಮಲವಾಡಿ, ಜಿಲ್ಲಾ ಮಾಧ್ಯಮ ಪ್ರಮುಖ್ ರಾಜ್ ಕುಮಾರ್, ಕಾರ್ಯದರ್ಶಿ ವೇದರಾಜ್, ರೈತ ಮೋರ್ಚಾ ಅಧ್ಯಕ್ಷರಾದ ನಂಜುಂಡಸ್ವಾಮಿ, ಶಕ್ತಿ ಕೇಂದ್ರದ ಅಧ್ಯಕ್ಷರಾದ ಸೋಮಶೇಖರ್, ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ನಾರಾಯಣ, ಉಪಾಧ್ಯಕ್ಷರಾದ ಶ್ರೀನಿವಾಸ್ ಕಾರ್ಯದರ್ಶಿ ವೀರಭದ್ರ, ವಕೀಲರಾದ ಕುಮಾರ್, ಗೋಪಾಲ್ ಗೌಡ, ರವಿ ,ಕೃಷ್ಣ ಮಾದೇಗೌಡ, ಮೋಹನ್, ಮಾದೇವ್ ಮುಂತಾದವರು ಇದ್ದರು.

Leave a Reply

Your email address will not be published. Required fields are marked *