ಹುಚ್ಚಗಣಿ ಗ್ರಾಮದ ಆದಿಶಕ್ತಿ ಮಹದೇವಮ್ಮ ದೇವಸ್ಥಾನದ ಜಾಗಕ್ಕೆ ಸಂಸದ ಪ್ರತಾಪ್ ಸಿಂಹ ಭೇಟಿ

ಜಿಲ್ಲಾಡಾಳಿತದಿಂದ ಅಕ್ರಮವಾಗಿ ಒಡೆದುಹಾಕಿದ ಹುಚ್ಚಗಣಿ ಗ್ರಾಮದ ಆದಿಶಕ್ತಿ ಮಹದೇವಮ್ಮ ದೇವಸ್ಥಾನದ ಜಾಗಕ್ಕೆ ಸಂಸದ ಪ್ರತಾಪ್ ಸಿಂಹ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.

ನಂತರ ರಸ್ತೆಯಿಂದ ಅನತಿ ದೂರದಲ್ಲಿದ್ದರೂ ದೇವಸ್ಥಾನ ಕೆಡವಿರುವ ಅಧಿಕಾರಿಗಳ ಕ್ರಮಕ್ಕೆ ಆಶ್ಚರ್ಯ ಪಟ್ಟು ಆಕ್ರೋಷ ವ್ಯಕ್ತಪಡಿಸಿದರು.

ಗ್ರಾಮಸ್ಥರ ತಮಗಾದ ನೋವು-ದುಃಖವನ್ನು ಸಂಸದರ ಬಳಿ ತೋಡಿಕೊಂಡರು, ಸಂಸದರು ಭರವಸೆಯ ಮಾತುಗಳನ್ನಾಡಿ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಸರಿಯಾಗಿ ಅರ್ಥೈಸಿಕೊಳ್ಳದ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳುತ್ತೇವೆ ಮತ್ತು ದೇವಸ್ಥಾನ ಪುನರ್ನಿರ್ಮಾಣಕ್ಕೆ ಕಂಕಣಬದ್ದವಾಗಿರುವುದಾಗಿ ತಿಳಿಸಿದರು.

ಸಂಸದರೊಂದಿಗೆ ಹಿಂದೂಪರ ಸಂಘಟನೆಗಳ ಒಕ್ಕೂಟದ ಮುಖಂಡರಾದ ಮೈ.ಕಾ.ಪ್ರೇಮ್ ಕುಮಾರ್, ರಾಕೇಶ್ ಭಟ್, ಸಂದೇಶ್ ಪವಾರ್ ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಿದರು

Leave a Reply

Your email address will not be published. Required fields are marked *