ಮೈಸೂರು :- ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್.ಡಿ.ಆರ್ ಪ್ರೊಡಕ್ಷನ್ ವತಿಯಿಂದ ನಿರ್ಮಾಣಗೊಳ್ಳುತ್ತಿರುವ ಮಾವುತ ಚಿತ್ರ ಮೂಹೂರ್ತ ಸಮಾರಂಭವನ್ನು ಅ.30ರಂದು ಬೆಳಗ್ಗೆ 9:40ಕ್ಕೆ ಮೈಸೂರಿನ ಅಗ್ರಹಾರದ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಆಯೋಜಿಸಲಾಗಿದೆ ಎಂದು ಚಿತ್ರ ನಿರ್ಮಾಪಕ ಟಿ.ಸುರೇಶ್ ಗೋಲ್ಡ್ ತಿಳಿಸಿದರು.
ಶಾಸಕ ಟಿ.ಎಸ್.ಶ್ರೀವತ್ಸ ಕ್ಯಾಮರಾಗೆ ಚಾಲನೆ ನೀಡಲಿದ್ದಾರೆ , ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕ ಎ.ಮಂಜು, ಶಿಲ್ಪಿ ಅರುಣ್ ಯೋಗಿರಾಜ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಕ್ಲಾಪಿಂಗ್ ಮಾಡಲಿದ್ದಾರೆ. ಮೊದಲ ದೃಶ್ಯವನ್ನು ಸಾಹಸ ನಿರ್ದೇಶಕ ಥ್ರಿಲರ್ ಮಂಜು ನಿರ್ದೇಶನ ಮಾಡಲಿದ್ದಾರೆ
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಶಾಸಕ ಕೆ.ಹರೀಶ್ ಗೌಡ, ಇಳೈ ಆಳ್ವಾರ್ ಸ್ವಾಮೀಜಿ, ಶಾಸಕ ಮಂಥರ್‌ಗೌಡ, ಸುಗಮ ಸಂಗೀತ ಪರಿಷತ್ ಅಧ್ಯಕ್ಷ ಡಾ.ನಾಗರಾಜ್ ವಿ.ಭೈರಿ ಸೇರಿದಂತೆ ಮತ್ತಿತರರ ಗಣ್ಯರು ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಮಾವುತ ಚಿತ್ರದ ನಿರ್ದೇಶಕ ರವಿಶಂಕರ್ ನಾಗ್ ಮಾತನಾಡಿ, ಚಿತ್ರದಲ್ಲಿ ಆನೆಗಳ ಜತೆಯಲ್ಲಿ ಜೀವನ ನಡೆಸುತ್ತಿರುವ ಮಾವುತರು ಹಾಗೂ ಆನೆ ನಡುವಿನ ಬಾಂಧವ್ಯ ಹಾಗೂ ಕಾಡಿನ ಜೀವನ ಹಾಡಿಗಳಲ್ಲಿ ಬದುಕುತ್ತಿರುವ ಅಲ್ಲಿನ ಕಷ್ಟ ಸುಖವನ್ನು ತೋರಿಸಲಾಗುತ್ತದೆ ವಿವರವಾಗಿ ಚಿತ್ರದಲ್ಲಿ ಮೂಡಿಬರುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ನಟ ಲಕ್ಷ್ಮೀಪತಿ ಬಾಲಜಿ, ಮೈಸೂರು ಮಂಜುಳ, ಲಯನ್ ಪ್ರಮೀಳಾ, ಚಿತ್ರನಿರ್ಮಾಪಕ ಪಾರ್ಥಸಾರಥಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.