ಮಾವುತರು ಹಾಗೂ ಕಾವಾಡಿಗಳಿಗೆ ಸಂಸದರಾದ ಯದುವೀರ್ ಶ್ರೀಕೃಷ್ಣದತ್ತ ಚಾಮರಾಜ ಒಡೆಯರ್ ಸಮ್ಮುಖದಲ್ಲಿ ಊಟ ಬಡಿಸಿಸುವ ಕಾರ್ಯಕ್ರಮ

ಮೈಸೂರಿನ ಹೆಲ್ಪಿಂಗ್ ಹ್ಯಾಂಡ್ಸ್ ಜೈನ್ ಯೂತ್ ಆರ್ಗನೈಸೇಶನ್ ನ ವತಿಯಿಂದ ಇಂದು ಮೈಸೂರು ಅರಮನೆ ಆವರಣದಲ್ಲಿ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಆನೆಗಳ ಮಾವುತರು ಹಾಗೂ ಕಾವಾಡಿಗಳಿಗೆ,ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಂಸದರಾದ ಯದುವೀರ್ ಶ್ರೀಕೃಷ್ಣದತ್ತ ಚಾಮರಾಜ ಒಡೆಯರ್ ಸಮ್ಮುಖದಲ್ಲಿ ಊಟ ಬಡಿಸಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತ್ತು.

ಬಳಿಕ ಸಂಸ್ಥೆಯ ಅಧ್ಯಕ್ಷರಾದ ಮಹಾವೀರ್ ಖಾಬಿಯಾ ರವರು ಮಾತನಾಡಿ ಭವಿಷ್ಯದಲ್ಲಿ ಮಾವುತರು ಮತ್ತು ಕಾವಾಡಿಗಳು ಪ್ರತಿವರ್ಷವೂ ದಸರಾ ಮಹೋತ್ಸವದಲ್ಲಿ ಮೈಸೂರಿಗೆ ಆಗಮಿಸುವರು ಅವರಿಗೆ ನಮ್ಮ ಸಂಸ್ಥೆಯ ವತಿಯಿಂದ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡು ನಮಗೂ ಒಂದು ಅಳಿಲು ಸೇವೆ ಮಾಡಲು ಅವಕಾಶ ಒದಗಿಸಿದ್ದಾರೆ ಅಂತೆಯೇ ಮುಂದಿನ ದಿನಗಳಲ್ಲಿ ಮಾವುತರ ಮತ್ತು ಕಾವಾಡಿಗಳ ಮಕ್ಕಳಿಗೆ ದೈನಂದಿನ ಅಗತ್ಯ ವಸ್ತುಗಳನ್ನು ಮತ್ತು ಅಧ್ಯಯನ ಸಾಮಗ್ರಿಗಳನ್ನು ಒದಗಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಹೆಲ್ಪಿಂಗ್ ಹ್ಯಾಂಡ್ಸ್ ಜೈನ್ ಯುವ ಸಂಘಟನೆಯ ಅಧ್ಯಕ್ಷರಾದ ಮಹಾವೀರ ಖಾಬಿಯಾ, ಖಜಾಂಚಿ ರಾಜನ್ ಬಾಗ್ಮಾರ್, ಮನೋಹರ್ ಸಂಖಲಾ, ಸಂಪತ್ ಬಾಗ್ಮಾರ್,ಪ್ರಕಾಶ್ ಗಾಂಧಿ,ಜಂಬು ಲೋಧಾ, ಗೌತಮ್ ಗಾಂಧಿ,ಮಹಿಳಾ ವಿಭಾಗದ ಬಿಂದು ಯು. ಬಾಗ್ಮಾರ್,ಡೋಲಿ ಗಾಂಧಿ, ಆಶಾ ಬಾಗ್ಮಾರ್,ಖುಷ್ಬೂ, ರವರು ಸೇರಿದಂತೆ ಮೊದಲಾದವರು ಉಪಸ್ಥಿತರಿದರು