2019ರಲ್ಲಿ ವರುಣನ ಆರ್ಭಟಕ್ಕೆ ಸರಸ್ವತಿಪುರಂ ಬಳಿ ಇರುವ ಅಗ್ನಿಶಾಮಕ ಠಾಣೆ ಕಟ್ಟಡದ ಮುಂಭಾಗದ ಸ್ವಾಗತ ಕಮಾನು ಧರೆಗುರುಳಿದಿತ್ತು,ಠಾಣೆಯ ಕಟ್ಟಡ ಶಿಥಿಲಗೊಂಡಿದ್ದರಿಂದ ಈ ಘಟನೆ ನಡೆದಿತ್ತು ಅದೃಷ್ಟವಶಾತ್ ಕಟ್ಟಡ ಕೆಳಗೆ ಯಾರೂ ಇಲ್ಲದ್ದರಿಂದ ಯಾವುದೇ ಸಾವು ನೋವು ಸಂಭವಿಸಿರಲಿಲ್ಲ. ಸರಸ್ವತಿಪುರಂ ಬಳಿ ಇರುವ ಈ ಅಗ್ನಿಶಾಮಕ ಠಾಣೆ ಪಾರಂಪರಿಕ ಕಟ್ಟಡ. 100 ವರ್ಷದ ಇತಿಹಾಸ ಕಟ್ಟಡಕ್ಕಿದೆ ಇದಕ್ಕೆ ಕಾಯಕಲ್ಪ ಕಲ್ಪಿಸಲು ಅಧಿಕಾರಿಗಳೊಂದಿಗೆ ಇಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭೇಟಿ ನೀಡಿ ಪರೀಶಿಲನೆ ನಡೆಸಿದರು,




