ಒಂದು ಕಾಲದಲ್ಲಿ ಅತಿ ಹೆಚ್ಚು ಯೋಗ ತರಬೇತುದಾರರನ್ನು ಜಗತ್ತಿಗೆ ಕಳುಹಿಸಿದ್ದು ನಮ್ಮ ಮೈಸೂರು ಮೈಸೂರನ್ನು ಸಿಟಿ ಆಫ್ ಯೋಗ ಎಂದು ಕರೆಯಲಾಗುತ್ತದೆ ಎಂದು ಸಂಸದ ಪ್ರತಾಪ್ ಸಿಂಹ ಅವರು ಹೇಳಿದರು.

ಭಾರತ ಸರ್ಕಾರದ ಆಯುಷ್ ಮಂತ್ರಾಲಯ, ಆಯುಷ್ ಇಲಾಖೆಯ ಆಡಳಿತ ವ್ಯಾಪ್ತಿಗೆ ಬರುವ ಜಿಲ್ಲಾ ಆಯುಷ್ ಕಚೇರಿ, ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ, ಸರ್ಕಾರಿ ಯೋಗ ಮಹಾವಿದ್ಯಾಲಯ, ವೇದವ್ಯಾಸ ಯೋಗ ಪ್ರತಿಷ್ಠಾನ ಜೆಎಸ್ಎಸ್ ವಿದ್ಯಾಪೀಠ ಹಾಗೂ ಯೋಗ ಫೆಡರೇಶನ್ ಆಫ್ ಮೈಸೂರು ಇವರ ಸಂಯುಕ್ತಾಶ್ರಯದಲ್ಲಿ ಇಂದು ಹಮ್ಮಿಕೊಂಡಿದ್ದ ಯೋಗೋತ್ಸವ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿ ಅವರು ಮಾತನಾಡಿದರು.
ಜನರಲ್ಲಿ ಯೋಗದ ಬಗ್ಗೆ ಅರಿವನ್ನು ಮೂಡಿಸಿ ಯೋಗದಿಂದ ಎಷ್ಟು ಪ್ರಯೋಜನಗಳಿವೆ ಎನ್ನುವುದನ್ನು ಮನವರಿಕೆ ಮಾಡಿಕೊಡುವುದರ ಮೂಲಕ ನಮ್ಮ ಯುವಕರಿಗೆ ಯೋಗದ ಬಗ್ಗೆ ತಿಳಿಸುವ ಕೆಲಸವನ್ನು ನರೇಂದ್ರ ಮೋದಿ ಅವರು ಮಾಡಿದರು ಎಂದು ಹೇಳಿದರು.

ಹಾಗೆಯೇ 2015ರಲ್ಲಿ ರೆಸ್ಯುಲೇಶನ್ಗೆ 177 ರಾಷ್ಟ್ರಗಳು ಬೆಂಬಲ ವ್ಯಕ್ತಪಡಿಸಿದರು 2019ರಲ್ಲಿ 197 ರಾಷ್ಟ್ರಗಳಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಿದರು ಇದು ಒಂದು ದಾಖಲೆಯಾಯಿತು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮೂಡ್ ಅಧ್ಯಕ್ಷರಾದ ರಾಜೀವ್, ಮಹಾನಗರಪಾಲಿಕೆಯ ಮಹಾಪೌರರಾದ ಸುನಂದಾ ಪಾಲನೇತ್ರ, ಡಾ. ಕೆ. ರಾಘವೇಂದ್ರ ಪೈ, ಡಾ. ಚಂದ್ರಶೇಖರ್, ಡಾ.ಎಂ.ವಿ ಶ್ರೀಧರ್, ಡಾ.ಸೀತಾಲಕ್ಷ್ಮಿ, ಶ್ರೀಹರಿ ದ್ವಾರಕನಾಥ, ಶಶಿಕುಮಾರ್, ಗೋಪಾಲಕೃಷ್ಣ, ಡಾ. ಪಿ.ಎನ್. ಗಣೇಶ್ ಕುಮಾರ್, ಡಾ. ಬಿ. ಪಿ. ಮೂರ್ತಿ, ಹಲವಾರು ಸಂಘ ಸಂಸ್ಥೆಗಳು ಭಾಗಿಯಾಗಿದ್ದವು.