ಮೈಸೂರು ಮಹಾಪೌರ ಶಿವಕುಮಾರ್ ಅವರ ತಾಯಿ ಸಿದ್ದಮ್ಮ ನಿಧನ

ಮೈಸೂರು: ಮೈಸೂರು ಮಹಾಪೌರ ಶಿವಕುಮಾರ್ ಅವರ ತಾಯಿ ಸಿದ್ದಮ್ಮ ಅವರು ನಿಧನರಾಗಿದ್ದಾರೆ. ಮೃತರಿಗೆ 9೦ ರ‍್ಷ ವಯಸ್ಸಾಗಿತ್ತು. ಮಹಾಪೌರ ಶಿವಕುಮಾರ್, ನಗರಪಾಲಿಕೆ ನಿವೃತ್ತ ಇಂಜಿನಿಯರ್ ಶ್ರೀಕಂಠ ಸೇರಿ ಇಬ್ಬರು ಪುತ್ರರು, ಮೂವರು ಪುತ್ರಿಯರು, ಮೊಮ್ಮಕ್ಕಳನ್ನು ಆಗಲಿದ್ದಾರೆ.

ಕುವೆಂಪುನಗರದಲ್ಲಿ ಇರುವ ಮಹಾಪೌರರ ನಿವಾಸದಲ್ಲಿ ಇದ್ದ ಸಿದ್ದಮ್ಮ ಅವರಿಗೆ ಕೆಲದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ಚಿಕಿತ್ಸೆಗಾಗಿ ಅಪೋಲೋ ಆಸ್ಪತ್ರೆಯಲ್ಲಿ ದಾಖಲಿಸಿದರೂ ಶನಿವಾರ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಕುವೆಂಪುನಗರದಲ್ಲಿ ಮೃತರ ಪ್ರರ‍್ಥಿವ ಶರೀರದ ಅಂತಿಮರ‍್ಶನಕ್ಕೆ ಇಡಲಾಗಿದ್ದು, ಭಾನುವಾರ ಮಧ್ಯಾಹ್ನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.