ಗುಂಡ್ಲುಪೇಟೆ : ಜಿಂಕೆಗೆ ತಿಂಡಿ ತಿನಿಸುಗಳನ್ನು ಕೊಡುತ್ತಿರುವ ಛಾಯಾಚಿತ್ರಗಳ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವವರ ಪತ್ತೆ ಹಚ್ಚಿ ಸೂಕ್ತ ಎಚ್ಚರಿಕೆ ನೀಡಿ ದಂಡ ವಿಧಿಸಿರುವ ಘಟನೆ ಬಂಡೀಪುರ ವಲಯದಲ್ಲಿ ನಡೆದಿದೆ
ಬೆಳಿಗ್ಗೆ ಸಮಯ 11ರ ಸಮಯದಲ್ಲಿ ಬಂಡೀಪುರ ದಿಂದ ಊಟಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿ ಯ ಬಂಡೀಪುರ ವಲಯಕ್ಕೆ ಬರುವ ರಸ್ತೆಯಲ್ಲಿ ಪ್ರವಾಸಿಗರೊಬ್ಬರು ಟ್ಯಾಕ್ಸಿ ಯಲ್ಲಿ ಪ್ರಯಾಣಿಸುತ್ತಿದ್ದಾಗ ಜಿಂಕೆ ಯೊಂದಕ್ಕೆ ತಿಂಡಿ ತಿನಿಸುಗಳನ್ನು ಕೊಡುತ್ತಿರುವ ಛಾಯಾಚಿತ್ರವು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.

ಈ ಸಂಬಂಧ ಬಂಡೀಪುರ ವಲಯದ ಸಿಬ್ಬಂದಿಗಳು ಪ್ರವಾಸಿಗರನ್ನು ಪತ್ತೆಹಚ್ಚಿ ವಿಚಾರಣೆ ನಡೆಸಿ ಸೂಕ್ತ ಎಚ್ಚರಿಕೆ ನೀಡುವುದಲ್ಲದೆ ದಂಡವನ್ನು ವಿಧಿಸಿರುತ್ತಾರೆ. ಇವರು ವಾಖ್ಹರ್ ಅಹಮದ್ ಮಾಧ್ಯಮದ ವರದಿಗಾರರು ಎನ್ ಡಿ ಟಿವಿ ನವದೆಹಲಿ ವಾಹನ ಸಂಖ್ಯೆ ಕೆಎ 3 ಎಜಿ 9602 ಎಂದು ತಿಳಿದು ಬಂದಿರುತ್ತದೆ ಎಂದು ಗುಂಡ್ಲುಪೇಟೆ ಉಪ ವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪರಮೇಶ್ ತಿಳಿಸಿದ್ದಾರೆ.