ಅರಮನೆಯ “ಧ್ವನಿ ಮತ್ತು ಬೆಳಕು” ಕಾರ್ಯಕ್ರಮ ಜುಲೈ 25ರಿಂದ ಪುನರಾರಂಭ


ಮೈಸೂರು, ಜುಲೈ 24 :- ಮೈಸೂರು ಅರಮನೆ ಮಂಡಳಿಯ ವತಿಯಿಂದ ಕೋವಿಡ್-19 ಹರಡುವಿಕೆಯ ಕಾರಣದಿಂದ ರದ್ದುಪಡಿಸಲಾಗಿದ್ದ “ಧ್ವನಿ ಮತ್ತು ಬೆಳಕು” ಕಾರ್ಯಕ್ರಮವನ್ನು ಜುಲೈ 25ರ ಭಾನುವಾರದಿಂದ ಪುನರಾರಂಭಿಸಲಾಗುವುದು ಎಂದು ಅರಮನೆ ಮಂಡಳಿಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಜುಲೈ 25ರಿಂದ ಪ್ರತಿ ಭಾನುವಾರ ಮತ್ತು ಸಾರ್ವತ್ರಿಕ ರಜಾ ದಿನಗಳಂದು ಸಂಜೆ 7ರಿಂದ 8ರವರೆಗೆ ಮೈಸೂರು ಅರಮನೆ ದೀಪಾಲಂಕಾರ ಹಾಗೂ ಜುಲೈ 26ರಿಂದ “ಧ್ವನಿ ಮತ್ತು ಬೆಳಕು” ಕಾರ್ಯಕ್ರಮವನ್ನು ಸೋಮವಾರದಿಂದ ಶುಕ್ರವಾರದ ವರೆಗೆ ಸಂಜೆ 7ರಿಂದ 8ರವರೆಗೆ ಹಾಗೂ ಶನಿವಾರ ಸಂಜೆ 7ಗಂಟೆಯಿAದ 9.15ರವರೆಗೆ ಹಿಂದಿನAತೆ ಪುನರಾಭಿಸಲಾಗಿದೆ ಎಂದು ಅರಮನೆ ಮಂಡಳಿಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *