ನವದಾಂಪತ್ಯಕ್ಕೆ ಕಾಲಿಟ್ಟ ನಟ ಪವನ್​ ಕುಮಾರ್: ಎಸ್​ ನಾಯರಾಯಣ್​ ಮಗನ ಮದುವೆಗೆ ಯಾವ ಸೆಲೆಬ್ರಿಟಿ ಬಂದಿದ್ದರು ಗೊತ್ತಾ..

ಚೈ-ತ್ರದ ಪ್ರೇಮಾಂಜಲಿ, ಸೂರ್ಯವಂಶ, ಚೆಲುವಿನ ಚಿತ್ತಾರ ಅಂತಹ ಸೂಪರ್ ಚಿತ್ರಗಳನ್ನು ಸ್ಯಾಂಡಲ್ ವುಡ್ ಗೆ ನೀಡಿರುವ ನಿರ್ದೇಶಕ ಎಸ್.ನಾರಾಯಣ್. 3 ದಶಕದಿಂದ ಸ್ಯಾಂಡಲ್ ವುಡ್ ನಲ್ಲಿ ಸಕ್ರಿಯರಾಗಿರುವ ನಿರ್ದೇಶಕ ಎಸ್.ನಾರಾಯಣ್. ಇವರ ಇಬ್ಬರು ಗ0-ಡುಮಕ್ಕಳು ಕೂಡ ಚಿತ್ರರಂಗದಲ್ಲಿ ನಟರಾಗಿ ಗುರುತಿಸಿಕೊಂಡಿದ್ದಾರೆ. ಈಗ ಎಸ್.ನಾರಾಯಣ್ ಅವರ ಎರಡನೇ ಮಗ ಪವನ್

ಕೌಟುಂಬಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ನೂತನ ವಧುವರರಿಗೆ ಶುಭ ಕೋರಲು ರಾಜಕೀಯ ರಂಗದ ಗಣ್ಯವ್ಯಕ್ತಿಗಳು ಮತ್ತು ಸಿನಿರಂಗದ ಸೆಲೆಬ್ರಿಟಿಗಳು ಮದುವೆ ಸಮಾರಂಭಕ್ಕೆ ಬಂದಿದ್ದರು.
ಫೆಬ್ರವರಿಬಿ 21ರಂದು ಬೆಳಗಿನ ಜಾವ 7;30 ರಿಂದ 8:30 ರ ಶುಭಲಗ್ನದಲ್ಲಿ ಪವನ್ ಮತ್ತು ಅಶ್ವಿನಿ ಪತಿ ಪತ್ನಿ ಆಗಿದ್ದಾರೆ. ಮದುವೆ ಸಮಾರಂಭ ಖಾಸಗಿ ಆಗಿ ನಡೆದಿದ್ದು,

ಎಸ್.ನಾರಾಯಣ್ ಅವರ ಸಂಪೂರ್ಣ ಕುಟುಂಬ ಮತ್ತು ಅಶ್ವಿನಿ ಅವರ ಕುಟುಂಬ ಧಾರೆ ಸಮಾರಂಭದಲ್ಲಿ ಪಾಲ್ಗೊಂಡಿತ್ತು. ಫೆಬ್ರವರಿ 21ರ ಬೆಳಗ್ಗೆ 10:30ರ ನಂತರ ರಿಸೆಪ್ಶನ್ ನಡೆದಿದ್ದು, ಆ ಸಂದರ್ಭದಲ್ಲಿ ರಾಜಕೀಯದ ಗಣ್ಯವ್ಯಕ್ತಿಗಳಾದ ಸಿಎಂ ಯಡಿಯೂರಪ್ಪ, ಸಚಿವ ಗೋಪಾಲಯ್ಯ ಸೇರಿದಂತೆ ಹಲವರು ಬಂದು ಹೊಸ ಜೋಡಿಗೆ ಆಶೀರ್ವದಿಸಿದರು.


ಜೊತೆಗೆ ಕನ್ನಡ ಚಿತ್ರರಂಗದಿಂದ ಹಿರಿಯ ಕಲಾವಿದರಾದ ಜಯಮಾಲಾ, ಹೇಮಾ ಚೌಧರಿ, ಪ್ರಮೀಳಾ ಜೋಷಾಯ್, ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ಆದಿತ್ಯ, ನಟ ಶರಣ್, ಶ್ರೀಮುರಳಿ ಹಾಗೂ ಇನ್ನಿತರರು ಭಾಗವಹಿಸಿದ್ದರು. ಹಿರಿಯ ನಟಿಯರಾದ ಸುಧಾರಾಣಿ, ಶ್ರುತಿ, ಮಾಳವಿಕಾ ಅವಿನಾಶ್, ನಟಿ ಅಮೂಲ್ಯ, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಮುಖ್ಯಮಂತ್ರಿ ಚಂದ್ರು, ನಟಿ ಅಮೂಲ್ಯ ಸೇರಿದಂತೆ ಸ್ಯಾಂಡಲ್ ವುಡ್ ನ ಹಲವಾರು ಕಲಾವಿದರು ಪವನ್ ಅಶ್ವಿವಿ ದಂಪತಿ ಮದುವೆಗೆ ಸಾಕ್ಷಿಯಾದರು.
ಎಸ್.ನಾರಾಯಣ್ ಅವರ ಮೊದಲ ಮಗ ಪಂಕಜ್ ಸ್ಯಾಂಡಲ್ ವುಡ್ ನಲ್ಲಿ ನಾಯಕನಾಗಿ ಗುರುತಿಸಿಕೊಂಡಿದ್ದರು, ಎರಡನೇ ಮಗ ಪವನ್ ರತ್ನ ಎಂಬ ಸಿನಿಮಾದಲ್ಲಿ ಹೀರೋ ಆಗಿ ನಟಿಸಿ ಒಂದು ಸಿನಿಮಾವನ್ನು ನಿರ್ದೇಶನ ಕೂಡ ಮಾಡಿದ್ದರು. ಸ್ ನಾರಾಯಣ್ ಪುತ್ರ ಪವನ್ ಅವರಿಗೆ ಒಳ್ಳೇದ್ ಆಗಲಿ! ಪವನ್ ಸ್ ನಾರಾಯಣ್ ಅವರ ಮದುವೆಯ ಸುಂದರ ಕ್ಷಣಗಳನ್ನು ನೀವು ಇಲ್ಲಿ ನೋಡಬಹುದು.

Leave a Reply

Your email address will not be published. Required fields are marked *