ರಂಗೋತ್ಸವಗಳ ಮೂಲಕ ಜನರ ಮನಸ್ಸನ್ನು ಬೆಸೆಯುವ ಕೆಲಸವನ್ನು ನಿರಂತರದ  ಕಲಾವಿದರು ಮಾಡುತ್ತಿದ್ದಾರೆ: ವನ್ಯಜೀವಿ ಛಾಯಾಗ್ರಾಹಕ ಲೋಕೇಶ್ ಮೊಸಳೆ

ರಂಗ ವಸಂತ – 2022, ನಿರಂತರ ರಂಗ ಉತ್ಸವ 14 ರಿಂದ 15 ರವರೆಗೆ ಕಲಾಮಂದಿರದ ಕಿರು ರಂಗಮಂದಿರದಲ್ಲಿ ನಿರಂತರ ಫೌಂಡೇಶನ್ ಆಯೋಜಿಸಲಾಗಿದ್ದ ಸಮಾರೋಪ  ಸಮಾರಂಭದಲ್ಲಿ

‘ರಂಗ ವಸಂತ’ ಸಮಾರೋಪಗೊಂಡಿತು   ರಂಗೋತ್ಸವದಲ್ಲಿ  ಮಾತನಾಡಿದ ಪತ್ರಕರ್ತ ಹಾಗೂ ವನ್ಯಜೀವಿ ಛಾಯಾಗ್ರಾಹಕ ಲೋಕೇಶ್ ಮೊಸಳೆಯವರು  ನಿರಂತರ ಬದಲಾವಣೆಗಳಿಗೆ ಹೊಂದಿಕೊಳ್ಳುವುದರೊಂದಿಗೆ, ಪರಂಪರೆಯ ಸೊಗಡನ್ನೂ ಮರೆಯದೆ, ಪ್ರಚಲಿತ ಸನ್ನಿವೇಶಗಳೊಟ್ಟಿಗೆ ರಂಗಭೂಮಿಯನ್ನು ಮಾಧ್ಯಮವನ್ನಾಗಿಸಿಕೊಂಡು ಮುಖಾಮುಖಿಯಾಗುತ್ತಿದೆ. ಮನುಷ್ಯನ ಇರುವಿಕೆಯ ಅನೇಕ ರಂಗಗಳು ಆಗಾಗ ಜಡತ್ವದ ಮೊರೆ ಹೋಗುವ ಸಂದರ್ಭಗಳು ಎದುರಾಗುತ್ತಿವೆ. ಈ ಜಡತ್ವದ ನಿವಾರಣೆಗೆ, ಅದರೊಂದಿಗೆ ಸದಾ ಒಡನಾಟದಲ್ಲಿರುವ ಮನುಷ್ಯನನ್ನು ಸಂವೇದನೀಯಗೊಳಿಸಬೇಕು. ಈ ಕೆಲಸ ರಂಗಭೂಮಿಯಿಂದ ಬಹುಪಾಲು ಸಾಧ್ಯ. ಆದ್ದರಿಂದ ಈ ಕಾರ್ಯಕ್ಕೋಸ್ಕರ ರಂಗಭೂಮಿಯನ್ನು ಪರಿಣಾಮಕಾರಿಯಾಗಿ ನಿರಂತರ ಬಳಸಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಹಲವು ಯಶಸ್ವಿ ಹಾಗೂ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇಂದು ಪ್ರಪಂಚದಾಂತ್ಯ ನಾವು ಸಂಘರ್ಷ ಹಾಗೂ ಗೊಂದಲದ ಬದುಕನ್ನು ಬದುಕುತ್ತಾ ಇದ್ದೆವೆ ಎಂದರೆ ತಪ್ಪಾಗಲಾರದು. ಎಲ್ಲಿ ನೋಡಿದರೂ ಸಂಘರ್ಷ, ಒಂದು ಕುಟುಂಬದ ಒಳಗೆ ಹೊರಗೆ, ಒಂದು ರಾಜ್ಯ, ಒಂದು ಇಲಾಖೆ, ದೇಶ, ಪ್ರಪಂಚದಾದ್ಯಂತ ಈ  ಸಂಘರ್ಷಕ್ಕೆ, ಗೊಂದಲಕ್ಕೆ ನಮ್ಮನ್ನು ದೂಡಲಾಗಿದೆ. ಇಂತಹ ಸಂದರ್ಭಗಳಲ್ಲಿ ರಂಗೋತ್ಸವಗಳ ಮೂಲಕ ಜನರ ಮನಸ್ಸನ್ನು ಬೆಸೆಯುವ ಕೆಲಸವನ್ನು ನಿರಂತರದ  ಕಲಾವಿದರು ಮಾಡುತ್ತಿದ್ದಾರೆ. ಇಂತಹ ಪ್ರಯತ್ನದಲ್ಲಿ ನಿರಂತರ ಫೌಂಡೇಶನ್ ಕಳೆದ ಮೂವತ್ತು ವರ್ಷಗಳಿಂದ ರಂಗಭೂಮಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆ ಮೂಲಕ ಮನಸ್ಸು ಮನಸ್ಸುಗಳನ್ನು ಬೆಸೆಯುವ ಕೆಲಸ ಮಾಡುತ್ತಿದ್ದಾರೆ. ಹಾಗೆಯೇ ಅವರ ರಂಗ ಪ್ರಯಾಣದಲ್ಲಿ ನಿರಂತರವಾದ ಹುಡುಕಾಟವಿದೆ. ಕತ್ತಲೆಯಿಂದ ಬೆಳಕನ್ನು ಹುಡುಕುವುದು, ಅನ್ಯಾಯದ ಪ್ರಪಂಚದಲ್ಲಿ  ನ್ಯಾಯವನ್ನು ಹುಡುಕುವಂತ ಪ್ರಯತ್ನವಿದೆ. ಜನರ ಮನಸ್ಸನ್ನು ಜಾಗೃತಗೊಳಿಸಲು ಮತ್ತು ಎಲ್ಲರೂ ಸ್ವಸ್ಥವಾಗಿ ಬದುಕುವಂತಹ ಸಮಾಜ ನಿರ್ಮಾಣ  ಮಾಡಲು ನಮ್ಮಲ್ಲಿರುವ ಅಂತಹಃ ಶಕ್ತಿ ಜಾಗೃತವಾಗಬೇಕಿದೆ. ಉತ್ತಮವಾದ ನ್ಯಾಯಯುತ ಸಮಾಜ ನಿರ್ಮಾಣ ಮಾಡುವ ದಿಸೆಯಲ್ಲಿ ನಾವೆಲ್ಲರೂ ಕೈಜೋಡಿಸೋಣ ಎಂದರು.

ಸಮಾರೋಪ ಕಾರ್ಯಕ್ರಮದ ಆಶಯ ನುಡಿಗಳನ್ನಾಡಿದ ನಿರಂತರದ ಶ್ರೀನಿವಾಸ್ ಪಾಲಹಳ್ಳಿ ರವರುರಂಗಭೂಮಿಯಲ್ಲಿ  ಪ್ರೇಕ್ಷಕರು ಸೇರೋದೆ ಮುಖ್ಯ. ರಂಗಭೂಮಿಯನ್ನು ಪೋಷಿಸುವಂತವರು, ಉಳಿಸಿ, ಪೊರೆಯುವಂತವರು ಪ್ರೇಕ್ಷಕರೆ ಆಗಿರುತ್ತಾರೆ. ರಂಗ ವಸಂತ ಹಿನ್ನಲೆಯಲ್ಲಿ ರಂಗಭೂಮಿಯಲ್ಲಿ ಕೆಲಸ ಮಾಡುವ, ಬದ್ಧತೆಯಿಂದ ಮತ್ತು ತಮ್ಮ ಸಂವೇದನೆಯಾಗಿ ರಂಗಭೂಮಿಯನ್ನು ನೋಡುತ್ತಿರುವ ಜಗತ್ತಿನ ಎಲ್ಲಾ ಕಲಾವಿದರಿಗೂ ಮತ್ತು ನಮ್ಮೆಲ್ಲರಿಗೂ ಇಂದು ಹಬ್ಬವೂ ಹೌದು, ಸಡಗರವೂ ಹೌದು, ಹೆಮ್ಮೆಯೂ ಹೌದು ಹಾಗೆ ಆತಂಕ ಕೂಡ. ಈ ಆತಂಕವನ್ನು ಕಡಿಮೆ ಮಾಡಬೇಕಾದರೆ ನಮ್ಮ ಸಂವೇದನೆಗಳನ್ನು ಜಾಗೃತಗೊಳಿಸಿಕೊಳ್ಳಬೇಕಿದೆ. ಒಬ್ಬರನ್ನೊಬ್ಬರು ಒಪ್ಪದೇ ಇರುವಂತಹ ಈ ಸಂಧರ್ಭದಲ್ಲಿ ಸಾಂಸ್ಕೃತಿಕವಾಗಿ ನಮ್ಮ ಸಂವೇದನೆಯನ್ನು ಕಟ್ಟಿಕೊಳ್ಳಬೇಕಿದೆ ಎಂದರು.

ಹಸಿರು ಫೌಂಡೇಶನ್ ಹೊನವಳ್ಳಿ ಗಂಗಾಧರ್ ಮಾತನಾಡಿ ನಿರಂತರ ಕಳೆದ ಹಲವಾರು ವರ್ಷಗಳಿಂದ ಅವಿರತವಾಗಿ, ಯಶಸ್ವಿಯಾಗಿ ಸಾಂಸ್ಕೃತಿಕ ನಗರಿ ಮೈಸೂರಿನ ಜನತೆಗೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ನೀಡುವುದರ ಜೊತೆಗೆ ಸಮಾಜಕ್ಕೆ ಸಂದೇಶ ನೀಡುವಂತಹ ಕಾರ್ಯಕ್ರಮಗಳ ರೂಪಿಸುತ್ತಿದ್ದಾರೆ. ಈ ಎರಡು ದಿನಗಳ ರಂಗೋತ್ಸವ ಯಶಸ್ವಿಯಾಗಿ ನಡೆದಿದೆ. ನಾನು ಸಹ ಪಾಲ್ಗೊಂಡು ಒಳ್ಳೆಯ ನಾಟಕಗಳನ್ನು ನೋಡಿದ್ದೇನೆ. ಹೀಗೆ ಇವರ ರಂಗ ಕಾಯಕ ಅವಿರತವಾಗಿ ನಡೆಯುತ್ತಿರಲಿ ಎಂದು ಆಶಿಸಿದರು.

ಇದೇ ಸಂಧರ್ಭದಲ್ಲಿ ಮೈಸೂರಿನ ಹಿರಿಯ ರಂಗಕರ್ಮಿಗಳು, ಸಾಹಿತಿಗಳು, ಕಲಾವಿದರು, ಪತ್ರಿಕಾ ಮಿತ್ರರು, ಹಾಗೂ ಪ್ರೇಕ್ಷಕರು ಈ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಸಭಾ ಕಾರ್ಯಕ್ರಮದ ನಂತರ ಜಯರಾಮ್ ರಾಯಪುರವರು ರಚಿಸಿದ ಪ್ರಸಾದ್ ಕುಂದೂರು ನಿರ್ದೇಶನದ ‘ವಾರಸುದಾರ’    ನಾಟಕವನ್ನು ಪ್ರದರ್ಶಿಸಲಾಯಿತು,

ಶ್ರೀ ಗುರು ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ಪಂಚಮುಖಿ ಆರಾಧಕರು

ಪಂ, ಸಮರ್ಥ್ ಜೋಷಿ

ನಂಬರ್ 1 ವಶೀಕರಣ ಸ್ಪೆಷಲಿಸ್ಟ್

 ಸ್ತ್ರೀ  ಮತ್ತು ಪುರುಷ ವಶೀಕರಣ ಮಾಡಿಕೊಡುತ್ತಾರೆ ಸಂಪರ್ಕಿಸಿ 9448077525

 ನಂಬರ್ ಒನ್ ವಶೀಕರಣ ಸ್ಪೆಷಲಿಸ್ಟ್  ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ  ಧನವಶ ವ್ಯಾಪಾರ ಅಭಿವೃದ್ಧಿ ಅತ್ತೆ ಸೋಸೆ  ಪ್ರೀತಿ-ಪ್ರೇಮ ಕಲಹ ಮನೆಯಲ್ಲಿ ಅಶಾಂತಿ ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ಕೇವಲ ಮೂರೇ ದಿನಗಳಲ್ಲಿ ಕೇರಳಿಯ ಅದರಣ ತ್ರಿಕೂಟ ಸಂಗಮ ವೇದಗಳ ನಾಗಾಸಾಧು ಮೂಲಕ ಮತ್ತು ಉಚ್ಚಂಗಿ ದೇವಿಯ ಪೂಜಾಫಲ ಮೂಲಕ ನಿಮ್ಮ ಸಮಸ್ಯೆಗಳು ಎಷ್ಟೇ ಇರಲಿ ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಸಿದ್ಧ ಮೊಬೈಲ್ .9448077525