ಕೊಲೆ ಪ್ರಕರಣದ ಎರಡನೇ ಆರೋಪಿ, ನಟ ದರ್ಶನ್ ಅವರನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಇತ್ತೀಚೆಗೆ ಚಿಕ್ಕಣ್ಣ ಭೇಟಿ ಆಗಿದ್ದರು. ಭೇಟಿಯಾದ ಮಾಹಿತಿ ಸಿಕ್ಕಿದ ಬೆನ್ನಲ್ಲೇ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ತನಿಖಾಧಿಕಾರಿಗಳಿಗೆ ಹೇಳಿದ್ದರು. ಗುರುವಾರ ವಿಚಾರಣೆಗೆ ಬರುವಂತೆ ನೋಟಿಸ್ ಜಾರಿ ಮಾಡಿದ್ದರು.
ಚಿಕ್ಕಣ್ಣ ಅವರನ್ನು ಈ ಪ್ರಕರಣದಲ್ಲಿ ಸಾಕ್ಷಿದಾರರನ್ನಾಗಿ ಪರಿಗಣಿಸಿ ನ್ಯಾಯಾಧೀಶರ ಎದುರು ಸಿಆರ್ಪಿಸಿ ಕಲಂ 164ರ ಅಡಿ ಹೇಳಿಕೆ ದಾಖಲಿಸಲಾಗಿತ್ತು. ಆದರೆ, ಸಾಕ್ಷಿದಾರರಾಗಿದ್ದ ಚಿಕ್ಕಣ್ಣ ಅವರು ಆರೋಪಿಯನ್ನು ಭೇಟಿ ಮಾಡಿದ್ದರು ಎಂದು ಪೊಲೀಸರು ಹೇಳಿದರು ಕೃತ್ಯಕ್ಕೂ ಮುನ್ನ ಆರೋಪಿ ವಿನಯ್ ಅವರ ಒಡೆತನದ ರಾಜರಾಜೇಶ್ವರಿ ನಗರದ ಸೋನಿ ಬ್ರೂಕ್ ರೆಸ್ಟೋರೆಂಟ್ನಲ್ಲಿ ಆರೋಪಿಗಳು ಪಾರ್ಟಿ ನಡೆಸಿದ್ದರು. ಆ ಪಾರ್ಟಿಯಲ್ಲಿ ದರ್ಶನ್, ಪವಿತ್ರಾಗೌಡ ಜತೆಗೆ ನಟ ಚಿಕ್ಕಣ್ಣ ಕಾಣಿಸಿಕೊಂಡಿದ್ದರು. ಚಿಕ್ಕಣ್ಣ ಅವರನ್ನೂ ಕರೆದೊಯ್ದು ಸ್ಥಳ ಮಹಜರು ನಡೆಸಿದ್ದ ಪೊಲೀಸರು,.
ದರ್ಶನ್ ಭೇಟಿ ವೇಳೆ ಏನೇನು ಮಾತುಕತೆ ನಡೆಯಿತು? ಅವರು ನಿಮಗೇನಾದರೂ ಆಮಿಷ ಒಡ್ಡಿದ್ದಾರೆಯೇ? ಅಥವಾ ಬೆದರಿಕೆ ಹಾಕಿದರೆ’ ಎಂದು ಪೊಲೀಸರು ಪ್ರಶ್ನೆ ಕೇಳಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ.
ಈ ಪ್ರಕರಣದಲ್ಲಿ ನ್ಯಾಯಾಧೀಶರ ಎದುರು ನಿಮ್ಮ ಹೇಳಿಕೆ ದಾಖಲಿಸಲಾಗಿದೆ. ಹೇಳಿಕೆ ತಿರುಚಿದರೆ ತಪ್ಪಾಗಲಿದೆ ಎಂಬುದಾಗಿ ಪೊಲೀಸರು ನಟನಿಗೆ ಎಚ್ಚರಿಕೆ ನೀಡಿದ್ದಾರೆ’ ಎಂದು ಗೊತ್ತಾಗಿದೆ. ಆರೋಪಿಯನ್ನು ಭೇಟಿಯಾಗಬಾರದು ಎಂಬ ವಿಚಾರ ನನಗೆ ಗೊತ್ತಿರಲಿಲ್ಲ ಎಂಬುದಾಗಿ ತನಿಖಾಧಿಕಾರಿಗಳಿಗೆ ಚಿಕ್ಕಣ್ಣ ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಮತ್ತೆ ವಿಚಾರಣೆಗೆ ಬರುವಂತೆ ಸೂಚನೆ ನೀಡಿಲ್ಲ. ನಾನು ಸಾಕ್ಷಿದಾರರ ಆಗಿರುವುದರಿಂದ ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದು ಚಿಕ್ಕಣ್ಣ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು