ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ರಾಧಿಕಾ ಪಂಡಿತ್ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಐರಾ, ಯಥರ್ವ್ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಇಂದು ಎಲ್ಲೆಡೆ ಕೃಷ್ಣ ಜನ್ಮಾಷ್ಟಮಿ ಆಚರಣೆ ಮಾಡಲಾಗುತ್ತಿದೆ.

ಮಕ್ಕಳಿಗೆ ಕೃಷ್ಣನ ಅಲಂಕಾರ ಮಾಡಿ ತಂದೆ-ತಾಯಂದಿರು ಸಂಭ್ರಮಿಸುತ್ತಿದ್ದಾರೆ. ಈ ಬಾರಿ ಮಕ್ಕಳ ಹಳೆಯ ಫೋಟೋಗಳನ್ನು ಹಂಕಿಕೊಂಡು ಕಳೆದ ವರ್ಷದ ನೆನೆಪುಗಳನ್ನು ಮೆಲಕು ಹಾಕಿದ್ದಾರೆ. ಇನ್‍ಸ್ಟಾಗ್ರಾಮ್ ಸ್ಟೋರಿಯಲ್ಲಿ ಕೃಷ್ಣನ ವೇಷ ತೊಟ್ಟಿರುವ ಐರಾಳನ್ನು ರಾಧಿಕಾ ಮತ್ತು ಅವರು ತಂದೆ ಎತ್ತಕೊಂಡಿರುವುದು ಮತ್ತು ಐರಾಳಿಗೆ ಕೃಷ್ಣನ ಅಲಂಕಾರವನ್ನು ಮಾಡುತ್ತಿರುವ ಮುದ್ದಾದ ಫೋಟೋವನ್ನು ಹಂಚಿಕೊಂಡಿದ್ದಾರೆ.

ದೇಶಾದ್ಯಂತ ಜನರು ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಬಹಳ ಸಡಗರದಿಂದ ಆಚರಿಸುತ್ತಿದ್ದಾರೆ. ಈ ನಡುವೆ ಸ್ಯಾಂಡಲ್‍ವುಡ್ ತಾರೆಯರು ಅವರ ಮಕ್ಕಳಿಗೆ ಕೃಷ್ಣನ ವೇಷ ತೊಟ್ಟು ಸಂಬ್ರಮಿಸುತ್ತಿದ್ದಾರೆ.