ರಾಜ್ಯದಲ್ಲಿ ತಗ್ಗುತ್ತಿರುವ ಕೊರೊನಾ ಸೋಂಕು

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ತಗ್ಗುತ್ತಿರುವುದು ಕಂಡು ಬಂದಿದ್ದು, ಗುರುವಾರ ಒಟ್ಟು 1,990 ಕೊರೊನಾ ಪ್ರಕರ ಪತ್ತೆಯಾಗುವುದರೊಂದಿಗೆ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 28,76,587 ಕ್ಕೆ ಏರಿಕೆ ಕಂಡಿದೆ.

ಈ ನಡುವೆ ಬುಧವಾರ 2,537ಮಂದಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದು, ಒಟ್ಟಾರೆ ಇದುವರೆಗೆ ಗುಣಮುಖರಾದವರ ಸಂಖ್ಯೆ 28,06,933ಕ್ಕೇರಿದೆ.  ಸದ್ಯ 33,642 ಕ್ಕೆ ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿದಿದೆ. ಇದೆಲ್ಲದರ ನಡುವೆ ಚಿಕಿತ್ಸೆ ಫಲಕಾರಿಯಾಗದೆ ರಾಜ್ಯದಲ್ಲಿ 45 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.

ಒಟ್ಟಾರೆ ರಾಜ್ಯದ ಜಿಲ್ಲೆಗಳಲ್ಲಿ ಎಷ್ಟೆಷ್ಟು ಪ್ರಕರಣಗಳು ದಾಖಲಾಗಿವೆ ಎಂಬುದನ್ನು ನೋಡುವುದಾದರೆ, ಬಾಗಲಕೋಟೆ 04, ಬಳ್ಳಾರಿ 16, ಬೆಳಗಾವಿ 140, ಬೆಂಗಳೂರು ಗ್ರಾಮಾಂತರ 40, ಬೆಂಗಳೂರು ನಗರ 400, ಬೀದರ್ 02, ಚಾಮರಾಜನಗರ 41. ಚಿಕ್ಕಬಳ್ಳಾಪುರ 23, ಚಿಕ್ಕಮಗಳೂರು 94, ಚಿತ್ರದುರ್ಗ 04, ದಕ್ಷಿಣಕನ್ನಡ 219, ದಾವಣಗೆರೆ 20, ಧಾರವಾಡ 18, ಗದಗ 07, ಹಾಸನ 175, ಹಾವೇರಿ 10, ಕಲಬುರಗಿ 14, ಕೊಡಗು 42, ಕೋಲಾರ 40, ಕೊಪ್ಪಳ 10, ಮಂಡ್ಯ 69, ಮೈಸೂರು 211. ರಾಯಚೂರು 01, ರಾಮನಗರ 17, ಶಿವಮೊಗ್ಗ 99,  ತುಮಕೂರು 78, ಉಡುಪಿ 120, ಉತ್ತರಕನ್ನಡ 69, ವಿಜಯಪುರ 07, ಆದರೆ  ಯಾದಗಿರಿಯಲ್ಲಿ ಯಾವುದೇ ಸೋಂಕು ಪತ್ತೆಯಾಗಿಲ್ಲ.

Leave a Reply

Your email address will not be published. Required fields are marked *