9 ,10ನೇ ತರಗತಿಗಳ ಆರಂಭಕ್ಕೆ ಮಾರ್ಗಸೂಚಿ ಪ್ರಕಟ, ಕೊರೊನಾ ಸಾಂಕ್ರಾಮಿಕ ರೋಗ ಭೀತಿ ಹಿನ್ನೆಲೆಯಲ್ಲಿ ಕಳೆದ ವರ್ಷದಿಂದಲೇ ಶಿಕ್ಷಣ ಕ್ಷೇತ್ರ ಅಸ್ತವ್ಯಸ್ತಗೊಂಡಿದೆ.

ಈ ಹಿನ್ನೆಲೆಯಲ್ಲಿ ಶಾಲೆಗಳು ಕಳೆದ ವರ್ಷದಿಂದಲೂ ತೆರೆಯ ಬೇಕೋ ಬೇಡವೋ ಎಂಬ ಗೊಂದಲದಲ್ಲಿ ಇವೆ.ಇನ್ನು ಈ ವರ್ಷವೂ ಕೂಡ ಕೊರೋನಾದ ಎರಡನೇ ಅಲೆಗೆ ದೇಶ ತತ್ತರಿಸಿಹೋಗುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿಯೂ ಕೂಡ ಶಾಲೆಗಳು ಸರಿಯಾದ ಸಮಯದಲ್ಲಿ ಆರಂಭವಾಗಿಲ್ಲ.
ಈಗ ಇದೇ ಆಗಸ್ಟ್ ರಿಂದ 9 ಹಾಗೂ ಹತ್ತನೇ ತರಗತಿ ಆರಂಭಿಸಲು ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಶೇಕಡ ಎರಡಕ್ಕಿಂತ ಕಡಿಮೆ ಕೋವಿಡ್ ಪಾಸಿಟಿವಿಟಿ ದರ ಇರುವ ಜಿಲ್ಲೆಗಳಲ್ಲಿ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳು ಭೌತಿಕ ತರಬೇತಿಯನ್ನು ಆರಂಭಿಸುವಂತೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿವೆ. ಹೀಗಾಗಿ ಸೋಮವಾರದಿಂದ ಶುಕ್ರವಾರದ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1.30 ರ ವರೆಗೆ ತರಗತಿಗಳು ನಡೆಯಲಿವೆ. ಹಾಗೂ ಶನಿವಾರ ಬೆಳಗ್ಗೆ 10ರಿಂದ 12: 50ರವೆಗೆ ತರಗತಿಗಳು ನಡೆಯಲಿವೆ. ಈ ತರಗತಿಗಳಲ್ಲಿ 15ರಿಂದ 20 ವಿದ್ಯಾರ್ಥಿ ತಂಡಗಳನ್ನು ರಚಿಸಿ ಶಾಲೆಗಳು ತರಗತಿಯನ್ನು ನಡೆಸಬಹುದಾಗಿದೆ.
ಇನ್ನು ತರಗತಿಗೆ ಹಾಜರಾಗುವ ಮಕ್ಕಳಿಗೆ ಪೋಷಕರಿಂದ ಅನುಮತಿ ಪತ್ರವನ್ನು ಕಡ್ಡಾಯಗೊಳಿಸಲಾಗಿದೆ. ಹಾಗೂ ಪೋಷಕರು ತಮ್ಮ ಮಕ್ಕಳಿಗೆ ಕೊರೊನಾ ಸೋಂಕು ಇಲ್ಲದಿರುವ ಬಗ್ಗೆ ಅನುಮತಿ ಪತ್ರದಲ್ಲಿ ದೃಢೀಕರಿಸಬೇಕು. ಅಲ್ಲದೆ ಶಾಲೆಗೆ ಬರುವ ವಿದ್ಯಾರ್ಥಿಗಳು ತಮ್ಮ ಮನೆಯಿಂದಲೇ ಊಟ, ನೀರು ತರಬೇಕು. ಅಗತ್ಯವಿದ್ದರೆ ಶಾಲೆಗಳಲ್ಲಿ ಕುಡಿಯಲು ಬಿಸಿ ನೀರಿನ ವ್ಯವಸ್ಥೆ ಇರುತ್ತದೆ. ಅಷ್ಟೇ ಅಲ್ಲದೆ ಶಾಲೆಗೆ ಹಾಜರಾಗುವುದು ಅಥವಾ ಆನ್ಲೈನ್ ಕ್ಲಾಸ್ ಗಳನ್ನು ವಿದ್ಯಾರ್ಥಿಗಳು ಇಚ್ಛಿಸಿದ್ದರೆ ತೆಗೆದುಕೊಳ್ಳುವುದು ವಿದ್ಯಾರ್ಥಿಗಳ ಇಚ್ಛೆಗೆ ಬಿಟ್ಟಿದ್ದು.
ಮಧ್ಯಾಹ್ನ 8ನೇ ತರಗತಿ ವಿದ್ಯಾರ್ಥಿಗಳಿಗೆ ಶಿಕ್ಷಕರು ಆನ್ಲೈನ್ ಮೂಲಕ ಬೋಧನೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.