IEEE ಮೈಸೂರು ಉಪವಿಭಾಗದ ಅಧ್ಯಕ್ಷರಾಗಿ ಪರಮೇಶಚಾರಿ ಆಯ್ಕೆ

ಮೈಸೂರು: ಜಿ ಎಸ್ ಎಸ್ ಎಸ್ ಮಹಿಳಾ ತಾಂತ್ರಿಕ ಮಹಾವಿದ್ಯಾಲಯ, ಮೈಸೂರು ಟೆಲಿ ಕಮ್ಯುನಿಕೇಶನ್ ಇಂಜಿಯರಿಂಗ್ ವಿಭಾಗದ ಪ್ರೊಫೆಸರ್ ಹಾಗೂ  ಮುಖ್ಯಸ್ಥ ಡಾ.ಬಿ.ಡಿ.ಪರಮೇಶಚಾರಿರನ್ನು  ಐಇಇಇ ಮೈಸೂರು ವಲಯದ ಅಧ್ಯಕ್ಷರಾಗಿ ಘೋಷಿಸಲಾಯಿತು.

ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಐಇಇಇ ಮೈಸೂರು ಉಪವಿಭಾಗದ ವಾರ್ಷಿಕೋತ್ಸವ ಸಭೆಯಲ್ಲಿ ಪಾಲ್ಗೊಂಡಿದ್ದ ಐಇಇಇ  ಬೆಂಗಳೂರು ವಿಭಾಗದ ನಾಮನಿರ್ದೇಶಿತ ಕಮಿಟಿ ಅಧ್ಯಕ್ಷ ಶ್ರೀ ಪುನೀತ್ ಕುಮಾರ್ ಮಿಶ್ರಾ  ಸಭೆಯಲ್ಲಿ  ಮೈಸೂರು ವಲಯ ಸಬ್ ಸೆಕ್ಷನ್  ಚೇರ್ ನ ಆಗಿ ಅಧಿಕೃತವಾಗಿ ಘೋಷಿಸಿದರು.

ಐಇಇಇ ಮೈಸೂರು ಉಪವಿಭಾಗ 2020 ರಲ್ಲಿ ಉದ್ಘಾಟನೆಯಾಗಿ ರಾಜ್ಯ ಮೂರು ವಲಯಗಳನ್ನು ಹೊಂದಿದ್ದು, ಅಂತಾರಾಷ್ಟ್ರೀಯ ವಿಚಾರಸಂಕಿರಣ, ವಿದ್ಯಾರ್ಥಿ ವೃತ್ತಿಪರ ಚಟುವಟಿಕೆ ನಡೆಸುತ್ತಿದೆ. ಪ್ರಸ್ತುತ ವಿಭಾಗವೂ ಒಂದು ಸಾವಿರಕ್ಕೂ ಹೆಚ್ಚು ಸದಸ್ಯರನ್ನು  ಹಾಗೂ ಹದಿನೈದು ವಿದ್ಯಾರ್ಥಿ ಶಾಖೆಯನ್ನು ಹೊಂದಿದೆ.  ಉಪ ವಿಭಾಗವು ವೃತ್ತಿಪರ ನೆಟ್ ವರ್ಕಿಂಗ್ ಅನ್ನು ಹೆಚ್ಚಿಸುವ ಮತ್ತು ಮಾನವೀಯ ಚಟುವಟಿಕೆಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುತ್ತದೆ. ಜಿಎಸ್ ಎಸ್ ಎಸ್ ಸಂಸ್ಥೆಯ ಕಾರ್ಯದರ್ಶಿ ವನಿಜಾ ಬಿ.ಪಂಡಿತ್, ಬೋರ್ಡ್ ಸದಸ್ಯ ಹಾಗೂ ಸಿಇಒ ಆರ್.ಕೆ.ಭರತ್, ಆಡಳಿತಾಧಿಕಾರಿ ಅನುಪಮ  ಬಿ. ಪಂಡಿತ್, *ಜಿಎಸ್ ಎಸ್ ಎಸ್ ಮಹಿಳಾ ತಾಂತ್ರಿಕ ಮಹಾವಿದ್ಯಾಲಯದ* ಪ್ರಾಂಶುಪಾಲ ಡಾ.ಶಿವಕುಮಾರ್ ಅವರು ನೂತನ ಅಧ್ಯಕ್ಷರಾದ ಪರಮೇಶಚಾರಿರನ್ನು ಅಭಿನಂದಿಸಿದ್ದಾರೆ.

ಡಾ. ಪರಮೇಶಾಚಾರಿ ಬಿ ಡಿ ಅವರು ಐಇಇಇ ಮೈಸೂರು ಉಪವಿಭಾಗದ ಸಂಸ್ಥಾಪಕ ಅಧ್ಯಕ್ಷರು-ಚುನಾಯಿತರು . ಐಇಇಇ ಬೆಂಗಳೂರು ವಿಭಾಗದ ಅಡಿಯಲ್ಲಿ ಐಇಇಇ ಮೈಸೂರು ಉಪವಿಭಾಗವನ್ನು ಸ್ಥಾಪಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಡಾ. ಪರಮೇಶಾಚಾರಿ ಬಿ ಡಿ ಅವರು 18 ವರ್ಷಗಳಿಗಿಂತ ಹೆಚ್ಚು ಬೋಧನೆ ಮತ್ತು ಸಂಶೋಧನಾ ಅನುಭವವನ್ನು ಹೊಂದಿದ್ದಾರೆ. ಅವರು ಬೆಳಗಾವಿಯ ವಿಟಿಯುನಲ್ಲಿ ಸಂಶೋಧನಾ ಮಾರ್ಗದರ್ಶಿಯಾಗಿ ಗುರುತಿಸಲ್ಪಟ್ಟಿದ್ದಾರೆ ಮತ್ತು ಪ್ರಸ್ತುತ ಆರು ಸಂಶೋಧನಾ ವಿದ್ಯಾರ್ಥಿಗಳು ಪಿಎಚ್‌ಡಿ ಮಾಡ್ತಿರುತ್ತಾರೆ. IEEE ಬೆಂಗಳೂರು ವಿಭಾಗಕ್ಕೆ ಅತ್ಯುತ್ತಮ ಕೊಡುಗೆಯನ್ನು ಗುರುತಿಸಿ, IEEE ಬೆಂಗಳೂರು ವಿಭಾಗದ ಅತ್ಯುತ್ತಮ ಸ್ವಯಂಸೇವಕ ಪ್ರಶಸ್ತಿಯನ್ನು ಪಡೆದಿದ್ದಾರೆ. ವರ್ಚುವಲ್ ಬ್ಯೂರೋ ಸ್ಪೀಕರ್ ಕಾರ್ಯಕ್ರಮದಿಂದ ಅವರನ್ನು IEEE ವರ್ಚುವಲ್ ಸ್ಪೀಕರ್ ಆಗಿ ನೇಮಿಸಲಾಗಿದೆ.