ಮೈಸೂರಿನ ಸಾಂಸ್ಕೃತಿಕ ವೇಳಾಪಟ್ಟಿಯಲ್ಲಿ ಮುಖ್ಯವಾದ ಮೈಸೂರು ಲಿಟೆರೇಚರ್ ಫ಼ೆಸ್ಟಿವಲ್ ಅಥವಾ ಮೈಸೂರು ಸಾಹಿತ್ಯ ಸಂಭ್ರಮದ ಆರನೇ ವರ್ಷದ ಕಾರ್ಯಕ್ರಮಗಳನ್ನು ಮೈಸೂರು ಲಿಟೆರರಿ ಫ಼ೋರಮ್ ಚಾರಿಟಬಲ್ ಟ್ರಸ್ಟ್ ಮತ್ತು ಮೈಸೂರು ಬುಕ್ ಕ್ಲಬ್ಸ್ ಗಳ ವತಿಯಿಂದ ದಿನಾಂಕ ಜುಲೈ 23, 2022 ( ಮದ್ಯಾಹ್ನ 1 ಗಂಟೆಯಿಂದ ಸಂಜೆ 5 ಗಂಟೆಯವರೆಗೆ) ಮತ್ತು ಜುಲೈ 24,2022( ಬೆಳಗ್ಗೆ 9 ಗಂಟೆಯಿಂದ ಸಂಜೆ 7 ಗಂಟೆಯವರೆಗೆ) ಹಮ್ಮಿಕೊಳ್ಳಲಾಗಿದೆ. 23 ರಂದು ಸಂಜೆ 7 ಗಂಟೆಗೆ ಗ್ರ್ಯಾಮ್ಮೀ ಪ್ರಶಸ್ತಿಗಳನ್ನು ಪಡೆದಿರುವ ರಿಕ್ಕಿ ಖೇಜ್ ಅವರು ಸಂಗೀತ ಸಂಜೆ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಸರ್ವರಿಗೂ ಸುಸ್ವಾಗತ.

ಮೈಸೂರಿನ ಸದರ್ನ್ ಸ್ಟಾರ್ ಹೋಟೆಲಿನಲ್ಲಿ ಸಾಹಿತ್ಯ ಸಂಭ್ರಮದ ಆರನೇ ಆವೃತ್ತಿಯನ್ನು ಮೈಸೂರು ಲಿಟೆರರಿ ಫ಼ೋರಮ್ ಚಾರಿಟಬಲ್ ಟ್ರಸ್ಟ್ ಮತ್ತು ಮೈಸೂರು ಬುಕ್ ಕ್ಲಬ್ಸ್ ಗಳ ವತಿಯಿಂದ ದಿನಾಂಕ್ ಜುಲೈ 23,24,2022 ರಂದು ಆಯೋಜಿಸಲಾಗಿದೆ.
ಈ ವರ್ಷದ ಸಾಹಿತ್ಯ ಸಂಭ್ರಮದಲ್ಲಿ ಸಾಹಿತ್ಯ, ಸಿನೆಮಾ, ಯಕ್ಷಗಾನ, ಪತ್ರಿಕೋದ್ಯಮ, ಕ್ರಿಕೆಟ್, ನಾಟಕ, ಅಧಿಕಾರವರ್ಗ, ವನ್ಯಜೀವಿ, ಜೀವನಕಲೆ ಮತ್ತು ಸಮುದಾಯಕ್ಕಾಗಿ ಸಾಮರ್ಥ್ಯದ ಬೆಳವಣಿಗೆ ಇತ್ಯಾದಿ ಹಲವಾರು ವಿವಿಧ ಕ್ಷೇತ್ರಗಳಿಂದ ಬಂದ ಅಮೋಘ ಸಾಧಕರುಗಳಿದ್ದಾರೆ.
ಜುಲೈ 23.2022ರ ಮಧ್ಯಾಹ್ನ 2 ಗಂಟೆಗೆ ಮೈಸೂರಿನ ಸದರ್ನ್ ಸ್ಟಾರ್ ಹೋಟೆಲಿನಲ್ಲಿ ಡಾ. ಪ್ರಮೋದಾದೇವಿ ಒಡೆಯರ್ ಅವರ ಅಮೃತಹಸ್ತದಿಂದ ಈ ಕಾರ್ಯಕ್ರಮದ ಉದ್ಘಾಟನೆಯಾಗುತ್ತದೆ. ಈ ಕಾರ್ಯಕ್ರಮಕ್ಕೆ 2022 ರ ಅಂತರರಾಷ್ಟ್ರೀಯ ಬುಕರ್ ಪ್ರೈಜ಼್ ವಿಜೇತರಾದ ಗೀತಾಂಜಲಿ ಶ್ರೀ ಅವರು ಮುಖ್ಯ ಭಾಷಣಕಾರರಾಗಿರುತ್ತಾರೆ. ಗ್ರ್ಯಾಮ್ಮೀ ಪ್ರಶಸ್ತಿಗಳನ್ನು ಪಡೆದಿರುವ ರಿಕ್ಕಿ ಖೇಜ್ ಅವರು ಮುಖ್ಯ ಅತಿಥಿಗಳಾಗಿರುತ್ತಾರೆ. “ದ ಬುಕ್ ಲೀಫ಼್” ಎಂಬ ನಮ್ಮ ಸುದ್ದಿಪತ್ರಿಕೆಯನ್ನು ಲೇಖಕರೂ ಔದ್ಯಮಿಯೂ ಆದ ಅರೂಣ್ ರಾಮನ್ ಅವರು ಬಿಡುಗಡೆ ಮಾಡುತ್ತಾರೆ.
ಈ ಸಾಹಿತ್ಯ ಸಂಭ್ರಮಕ್ಕೆ ಅಭಿಜ್ಞಾ ಹೆಗಡೆ ತಂಡದವರು ಪ್ರಸ್ತುತ ಪಡಿಸುವ “ಹರಿಣಾಭಿಸರಣ” ಎಂಬ ಯಕ್ಷಗಾನ ಪ್ರಸಂಗದ ಮೂಲಕ ಚಾಲನೆ ದೊರಕುವುದು. ಧರ್ಮೇಂದ್ರ ಕುಮಾರ್, ರಂಜನಿ ರಾಘವನ್, ಡಾ. ಅಕ್ಕೈ ಪದ್ಮಶಾಲಿ, ಮೊಹುವಾ ಚಿನ್ನಪ್ಪ, ಡಾ. ಡಿ.ವಿ. ಗುರುಪ್ರಸಾದ್, ಗಜಾನನ ಶರ್ಮ ಮತ್ತು ಗುರುರಾಜ ಕರ್ಜಗಿ ಮುಂತಾದ ಗಣ್ಯ ಲೇಖಕರು, ಕಲಾವಿದರು ಮತ್ತು ಭಾಷಣಕಾರರು ಚರ್ಚೆ ಮತ್ತು ಸಂವಹನಗಳನ್ನು ನಡೆಸಿಕೊಡಲಿದ್ದಾರೆ. ತಮ್ಮ ಪತಿ ದಿವಂಗತ ಯು.ಆರ್.ಅನಂತಮೂರ್ತಿಯವರ ಬಗೆಗಿನ ಪುಸ್ತಕವನ್ನು ಎಸ್ತರ್ ಅನಂತಮೂರ್ತಿಯವರು ಬಿಡುಗಡೆ ಮಾಡಲಿದ್ದಾರೆ.
ಈ ಬಾರಿಯ ಮೈಸೂರು ಲಿಟೆರೇಚರ್ ಫ಼ೆಸ್ಟಿವಲ್ ಅಥವಾ ಮೈಸೂರು ಸಾಹಿತ್ಯ ಸಂಭ್ರಮದಲ್ಲಿ ರಾಜದೀಪ್ ಸರ್ದೆಸಾಯಿ, ಚಾರು ಶರ್ಮ, ನಿಧಿನ್ ಓಲಿಕ್ಕಾರ, ಕೃಷ್ಣಮುರ್ತಿ ಶ್ರೀಕಾಂತ್, ಸಾಗರಿಕ ಘೋಶ್, ಸುಗರ ಶ್ರೀನಿವಾಸ ರಾಜು,ಡಾ. ಸಂಜಯ್ ಗುಬ್ಬಿ, ಪಮೇಲಾ ಗಾಲೆ ಮಲ್ಹೋತ್ರ, ರಿಂಕಿ ರಾಯ್ ಭಟ್ಟಾಚಾರ್ಯ, ಡಾ. ಕೃಶ್ಣ ರಾವ್, ಡಾ.ಎಚ್.ಎಸ್.ಚಂಪಾ, ಶಂಕರ್ ಬೆಳ್ಳೂರ್, ಪದ್ಮಾವತಿ ರಾವ್ ಮತ್ತು ಡಾ. ಆರ್. ಬಾಲಸುಬ್ರಹ್ಮಣ್ಯಮ್ ಮುಂತಾದ ವಿಶಿಷ್ಟ ಲೇಖಕರು ಮತ್ತು ಭಾಷಣಕಾರರ ಹೆಸರುಗಳ ಉಜ್ವಲ ತಾರಾಮಂಡಲವೇ ಇದೆ. ಉದಯೋನ್ಮುಖ ಯುವ ಲೇಖಕರಾದ ಅನಿರುಧ್ ಸೆಟ್ಟಿಯವರಿದ್ದಾರೆ. ಅಲ್ಲದೆ ನಮ್ಮ ಚರ್ಚಾಗೋಷ್ಟಿಗಳಲ್ಲಿ ಸ್ಥಳೀಯರಾದ ಮೈಸೂರಿನ ಮೈಥಿಲಿ ರಾವ್, ಡಾ. ಎನ್.ಎಸ್. ವಿಶ್ವನಾಥ್, ಸೀತಾ ಭಾಸ್ಕರ್, ಡಾ. ಪ್ರಸನ್ನ ಸಂತೆಕಡೂರ್, ಡಾ. ಪೃಥ್ವಿ ದತ್ತ ಮತ್ತು ಸಿ. ನಾಗಣ್ಣನವರುಗಳು ಭಾಗವಹಿಸಲಿದ್ದಾರೆ.
ಮುಂದಿನ ಪೀಳಿಗೆಗೆ ಪುಸ್ತಕ ಓದುವುದನ್ನು ಅಭ್ಯಾಸ ಮಾಡಿಸುವುದು ನಮ್ಮ ಗುರಿಯಾದುದರಿಂದ ನಮ್ಮ ಮಕ್ಕಳ ಗೋಷ್ಠಿ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಯೋಗ ಮತ್ತು ಪ್ರಕೃತಿಯ ಬಗ್ಗೆ ಪರಿಚಯ ಮಾಡಿಕೊಡುವುದು ಮತ್ತು ಕತೆಗಳನ್ನು ಹೇಳುವುದಕ್ಕಾಗಿ ರೂಪಾ ಪೈ. ಯಾಮಿನಿ ಮುತ್ತಣ್ಣ, ಮನಿಷಾ ದಾಸಪ್ಪ ಮತ್ತು ನಮ್ಮ ಮೈಸೂರಿನವರೇ ಆದ ಸ್ನೇಕ್ ಶಾಮ್ ರವರನ್ನು ಕೂಡಿದ ಆಸಕ್ತಿಕರ ತಂಡವಿದೆ.
“ಕನಸು ಕಾಣುವುದೆಂದರೆ ರೆಕ್ಕೆಗಳನ್ನು ಪಡೆದುಕೊಂಡಂತೆ”. ಮೈಸೂರು ಸಾಹಿತ್ಯ ಸಂಭ್ರಮದಲ್ಲಿ ನಾವು ಕನಸು ಕಾಣುವುದೆಂದರೆ ಪುಟಗಳನ್ನು ತಿರುಗಿಸುತ್ತಾ ಧ್ಯೇಯಗಳನ್ನು ನಿರ್ಧರಿಸುವುದು ಎಂದು ನಂಬುತ್ತೇವೆ. ಕಳೆದೆರಡು ವರ್ಷಗಳ ನಿರಾಶಾದಾಯಕ ಸ್ಥಿತಿಯಲ್ಲಿಯೂ ಸಹ ನಾವು ನಮ್ಮ ಧ್ಯೇಯಗಳನ್ನು ಸಾಧಿಸುವ ಕನಸುಗಳನ್ನು ಕಾಪಿಟ್ಟುಕೊಂಡಿದ್ದೇವೆ. ಮತ್ತೊಂದು ಬಾರಿ ಸತತವಾಗಿ ಆರನೇ ವರ್ಷ ಮೈಸೂರು ಲಿಟೆರರಿ ಫ಼ೋರಮ್ ಚಾರಿಟಬಲ್ ಟ್ರಸ್ಟ್ ಮತ್ತು ಮೈಸೂರು ಬುಕ್ ಕ್ಲಬ್ಸ್-೨೦೧೫ ಗಳ ಸ್ಥಾಪಕ ಟ್ರಸ್ಟೀ ಆದ ಶ್ರೀಮತಿ ಶುಭಾ ಸಂಜಯ್ ಅರಸ್ ಅವರು ಮೈಸೂರು ಲಿಟೆರೇಚರ್ ಫ಼ೆಸ್ಟಿವಲ್ ಅಥವಾ ಮೈಸೂರು ಸಾಹಿತ್ಯ ಸಂಭ್ರಮದ ಚರ್ಚಾಗೋಷ್ಟಿಗಳನ್ನು ನಿರ್ವಹಿಸಲಿದ್ದಾರೆ.