ಸಂದಿಗ್ಧತೆಯ ರಾಜಕೀಯ ವ್ಯವಸ್ಥೆಗೆ ಸಮಾಜಮುಖಿ ನಾಯಕತ್ವ ಅನಿವಾರ್ಯ

ಅತ್ಯಂತ ಶ್ರೇಷ್ಠ ಸಮಾಜವಾದಿಗಳಾದ ರಾಮ್ ಮನೋಹರ್ ಲೋಹಿಯಾ, ಜಯಪ್ರಕಾಶ್ ನಾರಾಯಣ್ , ರೈತ ನಾಯಕ ಪ್ರೊಫೆಸರ್ ನಂಜುಂಡಸ್ವಾಮಿ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ಸುಮಾರು 45 ವರ್ಷಗಳಿಂದ ಗಟ್ಟಿಯಾಗಿ ನಂಬಿರುವ ಹಾಗೂ ನೈತಿಕ ರಾಜಕಾರಣಕ್ಕೆ ನಮ್ಮೊಂದಿಗಿನ ಶ್ರೇಷ್ಠ ಉದಾರಣೆ ಶ್ರೀ ಸಿದ್ದರಾಮಯ್ಯ ಅಂತವರು ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿರುವುದು ಸಮಾಜಕ್ಕೆ ಅನಿವಾರ್ಯ.

ಕಾರಣ ಇತ್ತೀಚಿನ ವರ್ಷಗಳಲ್ಲಿ ಮಾರುಕಟ್ಟೆ ಹಾಗೂ ದಲ್ಲಾಳಿ ರಾಜಕಾರಣ ಕದಂಬ ಬಾವುಗಳ ರೀತಿ ಬೆಳೆಯುತ್ತಿರುವ ಸಂದರ್ಭದಲ್ಲಿ, ಜೊತೆಗೆ ಚುನಾವಣಾ ವ್ಯವಸ್ಥೆ ಹಾಗೂ ಮತದಾರ ಕೂಡ ದಿನದಿಂದ ದಿನಕ್ಕೆ ಮಲಿನವಾಗುತ್ತಿರುವ ಹೊಸ್ತಿಲಲ್ಲಿ ಆಶಾಭಾವನೆ ಹುಟ್ಟಿಸುವಂತಹ ಸಮಾಜಮುಖಿ ರಾಜಕೀಯದ ವ್ಯವಸ್ಥೆಯ ಅನಿವಾರ್ಯತೆ ಈ ದೇಶಕ್ಕೆ ಇದೆ.
ಹಾಗೆಯೇ ರಾಜ್ಯದಲ್ಲಿ ರೈತ ಸಂಘಟನೆ,
ದಲಿತ ಸಂಘರ್ಷ ಸಮಿತಿ ಹಾಗೂ ಇನ್ನಿತರ ಸಮಾಜಮುಖಿ ಸಾರ್ವಜನಿಕ ಸಂಘಟನೆಗಳು ಕಾಂಗ್ರೆಸ್ ಪಕ್ಷದ ಸಂವಿಧಾನದತ್ತ ಸಿದ್ಧಾಂತವನ್ನು ಸಂಪೂರ್ಣವಾಗಿ ನಂಬಿ ಬೆಂಬಲ ನೀಡಿವೆ. ಇದು ಕೇವಲ ಕಾಂಗ್ರೆಸ್ ಪಕ್ಷದ ಗೆಲುವಲ್ಲ ಇದು ಪ್ರಜಾಸತ್ಯಯ ಸಾರ್ವಭೌಮತ್ವದ ಗೆಲುವು.

ಡಾ ಬಿ ಜೆ. ವಿಜಯ್ ಕುಮಾರ್
ಅಧ್ಯಕ್ಷರು -ಮೈಸೂರು ಜಿಲ್ಲಾ ಕಾಂಗ್ರೆಸ್