ಮೇಷ ರಾಶಿ
ಸಭಾ ಗೋಷ್ಠಿಗಳು ನಿಮಗೆ ಧನಾತ್ಮಕ ಚಿಂತನೆಯನ್ನು ತಂದುಕೊಡಲಿದೆ. ಕೆಲಸದಲ್ಲಿ ಉತ್ತಮ ಜ್ಞಾನದಿಂದ ಸಕಾರಾತ್ಮಕ ಫಲಿತಾಂಶವನ್ನು ಕಾಣುವಿರಿ. ನಿಮ್ಮ ಶ್ರಮದಾಯಕ ಕೆಲಸ ಅಚ್ಚುಕಟ್ಟಾಗಿ ನಡೆಯುತ್ತದೆ. ಶ್ರಮಕ್ಕೆ ಪ್ರತಿಫಲ ದೊರೆಯದೆ ಹತಾಶರಾಗುವ ಸಾಧ್ಯತೆ ಇದೆ. ಅಪರಿಚಿತ ವ್ಯಕ್ತಿಗಳೊಡನೆ ಆದಷ್ಟು ಅಂತರ ಕಾಯ್ದುಕೊಳ್ಳುವುದು ಒಳಿತು.
ವೃಷಭ ರಾಶಿ
ಕಲಿಯುವ ಆಸಕ್ತಿ ನಿಮ್ಮಲ್ಲಿ ಹೆಚ್ಚಾಗುತ್ತದೆ. ದೊಡ್ಡಮಟ್ಟದ ಹುದ್ದೆಯನ್ನು ಪಡೆಯಲು ನೀವು ಕಾರ್ಯಪ್ರವೃತ್ತರಾಗುವಿರಿ. ಹಲವರು ಈ ದಿನ ಉತ್ತಮ ಸಲಹೆಗಳನ್ನು ನೀಡಲಿದ್ದಾರೆ. ಸಾಮಾಜಿಕ ಕ್ಷೇತ್ರದಲ್ಲಿ ಮಿಂಚುವ ಸಾಧ್ಯತೆ ಕಾಣಬಹುದು. ಮಾಡುವ ಕೆಲಸದಲ್ಲಿ ಉತ್ತಮ ಪ್ರತಿಫಲ ಕಂಡುಬರುತ್ತದೆ.
ಮಿಥುನ ರಾಶಿ
ಕುಟುಂಬದಲ್ಲಿನ ಅನುಮಾನಸ್ಪದ ವಿಚಾರಗಳನ್ನು ಆದಷ್ಟು ತೆಗೆದುಹಾಕುವುದು ಒಳ್ಳೆಯದು. ಮಕ್ಕಳ ಮೇಲೆ ನೀವು ನಿಮ್ಮ ಚಿಂತನೆಗಳನ್ನು ಹೊರಿಸಬೇಡಿ ಅವರ ಅನುಕೂಲಕ್ಕೆ ವಿಷಯವನ್ನು ಆಯ್ದುಕೊಳ್ಳಲು ಬಿಟ್ಟುಬಿಡುವುದು ಸೂಕ್ತ. ಹೊಸ ವ್ಯವಹಾರ ಜ್ಞಾನವನ್ನು ಪಡೆಯುವ ಸಾಧ್ಯತೆ ಕಾಣಬಹುದು.
ಕರ್ಕಾಟಕ ರಾಶಿ
ನಿಮ್ಮ ಯೋಜನೆಗಳಿಗೆ ನಂಬಿಕಸ್ಥರು ಸಮಸ್ಯೆ ನೀಡಬಹುದು. ಜಮೀನು ಮಾರಾಟದಲ್ಲಿ ಉತ್ತಮ ಫಲಿತಾಂಶ ಕಂಡು ಬರಲಿದೆ. ಆರ್ಥಿಕ ವ್ಯವಹಾರಗಳು ಸುಗಮವಾಗಿ ನಡೆಯುವ ಸಾಧ್ಯತೆಗಳು ಕಂಡು ಬರುತ್ತದೆ.
ಗಣ್ಯರ ಭೇಟಿಯಾಗಲಿದ್ದೀರಿ. ಕುಟುಂಬದಲ್ಲಿ ಅನುಮಾನದ ವಾತಾವರಣ ಸೃಷ್ಟಿಯಾಗಲಿದೆ.
ಸಿಂಹ ರಾಶಿ
ನಿಮ್ಮ ಕಾರ್ಯಗಳಲ್ಲಿ ಮರೆವು ಆವರಿಸಬಹುದಾಗಿದೆ, ಇದರಿಂದ ಕೆಲಸದಲ್ಲಿ ಹಾನಿಯಾಗುವ ಸಾಧ್ಯತೆ ಕಂಡುಬರುತ್ತದೆ ಎಚ್ಚರವಿರಲಿ. ಆಲಕ್ಷತನದಿಂದ ದೊಡ್ಡ ಮಟ್ಟದ ಯೋಜನೆ ಕೈ ತಪ್ಪಿ ಹೋಗ ಬಹುದಾದ ಸಾಧ್ಯತೆಯಿದೆ. ದೈಹಿಕ ಮತ್ತು ಮಾನಸಿಕ ಸಮತೋಲನವನ್ನು ಕಾಪಾಡಿಕೊಳ್ಳುವುದು ಮುಖ್ಯ.
ಕನ್ಯಾ ರಾಶಿ
ಕೆಲಸದಲ್ಲಿ ಏಕಾಗ್ರತೆಯನ್ನು ರೂಡಿಸಿಕೊಳ್ಳಿ. ಭವಿಷ್ಯದ ಬೆಳವಣಿಗೆಗಾಗಿ ತಯಾರಿ ನಡೆಸುವುದು ಈ ದಿನ ಕಾಣಬಹುದು. ಆರ್ಥಿಕ ಸಹಾಯ ದೊರೆಯುವ ನಿರೀಕ್ಷೆ ಕಂಡುಬರುತ್ತದೆ. ಜಮೀನು ಮಾರಾಟ ಪ್ರಕ್ರಿಯೆ ಉತ್ತಮವಾಗಿ ನಡೆಯಲಿದೆ. ಸಾಲದ ವ್ಯಾಪಾರಗಳನ್ನು ಆದಷ್ಟು ತಡೆಗಟ್ಟುವುದು ಸೂಕ್ತ.
ತುಲಾ ರಾಶಿ
ಕೆಲಸದಲ್ಲಿ ಪ್ರಯತ್ನಶೀಲತೆ ಬಹುಮುಖ್ಯ. ಒಮ್ಮೆ ನೀವು ವಿಫಲ ಪಲಿತಾಂಶ ಅನುಭವಿಸಿದ್ದರೂ ಸಹ ಬಿಡದೆ ಸತತ ಪ್ರಯತ್ನ ಮಾಡುವುದರಿಂದ ನಿಮ್ಮ ಕನಸು ನನಸಾಗುವುದು. ಯೋಜಿತ ಮಾರ್ಗ ಬಹುಕಷ್ಟವಾಗಿದೆ ಆದರೂ ಸಹ ನಿಮ್ಮ ಆಕಾಂಕ್ಷೆಯಂತೆ ನಡೆಯುತ್ತದೆ. ಗುರಿಯ ಹಾದಿಯಲ್ಲಿ ಮನಸ್ಸನ್ನು ಬದಲಾವಣೆ ಮಾಡಿಕೊಳ್ಳಬೇಡಿ.
ವೃಶ್ಚಿಕ ರಾಶಿ
ಕುಟುಂಬದ ಹಿತಾಸಕ್ತಿಯನ್ನು ಕಡೆಗಣಿಸದೆ ಬೇಕು-ಬೇಡಗಳನ್ನು ಪೂರೈಸುವ ವ್ಯವಸ್ಥೆ ಮಾಡುವುದು ಒಳ್ಳೆಯದು. ಆದಾಯದಲ್ಲಿ ಬೆಳವಣಿಗೆ ಕಂಡುಬರಲಿದೆ. ಖರ್ಚುಗಳ ಮೇಲೆ ನಿಗಾ ಇಡುವುದು ಸೂಕ್ತ. ಹಿರಿಯರ ಮಾತಿಗೆ ಬೆಲೆ ಕೊಟ್ಟು ಅವರ ಯೋಗಕ್ಷೇಮವನ್ನು ನೋಡಿಕೊಳ್ಳಿ.
ಧನಸ್ಸು ರಾಶಿ
ಉದ್ಯೋಗದಲ್ಲಿ ಹೇರಳ ಅವಕಾಶಗಳು ಕಂಡುಬರಲಿದೆ. ನಿಮ್ಮ ವ್ಯವಹಾರದಲ್ಲಿ ಪೈಪೋಟಿ ಗಳನ್ನು ನಿರೀಕ್ಷಿಸಬಹುದಾಗಿದೆ. ಕುಟುಂಬದಲ್ಲಿ ಸಂತಸದ ವಾತಾವರಣ ಇರುತ್ತದೆ. ಮಕ್ಕಳು ನಿಮ್ಮ ಕೆಲಸಗಳಿಗೆ ಸಹಾಯ ಮಾಡಲಿದ್ದಾರೆ. ಆದಾಯ ಗಳಿಕೆಯಲ್ಲಿ ಸ್ಥಿರತೆ ಕಂಡುಬರುತ್ತದೆ
ಮಕರ ರಾಶಿ
ನಿಮ್ಮ ವಿಚಾರಗಳನ್ನು ಪ್ರಸ್ತುತಪಡಿಸಿ ಕಾರ್ಯಸಾಧನೆ ಮಾಡಿಕೊಳ್ಳುತ್ತೀರಿ. ಕೆಲವರು ನಿಮ್ಮನ್ನು ಹೊಗಳಬಹುದು ಅಥವಾ ನಿಮಗೆ ಆಮಿಷ ತೋರಬಹುದು ಇವುಗಳು ಅವರ ಬದ್ಧತೆಗಾಗಿ ಎಂಬುದನ್ನು ತಿಳಿದುಕೊಳ್ಳ ಬೇಕಾಗಿದೆ. ಹಣಗಳಿಕೆಯ ಬಯಕೆಯಿಂದ ತಪ್ಪು ದಾರಿ ಹಿಡಿಯುವುದು ಬೇಡ. ಆದಷ್ಟು ಬುದ್ಧಿವಂತಿಕೆಯ ವಿಚಾರಗಳನ್ನು ಮಾಡಿ ಸರಿಯಾದ ಮಾರ್ಗದಲ್ಲಿ ನಡೆಯಿರಿ. ಅನಿರೀಕ್ಷಿತವಾಗಿ ದೂರದ ಪ್ರಯಾಣ ಎದುರಾಗಲಿದೆ.
ಕುಂಭ ರಾಶಿ
ಪತ್ನಿಯಲ್ಲಿ ಚೈತನ್ಯ ಲವಲವಿಕೆ ಹೆಚ್ಚಾಗಿ ಕಂಡುಬರಲಿದೆ. ಮನೆಯಲ್ಲಿ ಶುಭಕಾರ್ಯ ನಡೆಯುವ ಸೂಚನೆಗಳು ಕಾಣಬಹುದು. ವ್ಯವಹಾರದಲ್ಲಿ ನಿಮ್ಮ ದೃಷ್ಟಿಕೋನ ಸರಿಪಡಿಸಿಕೊಳ್ಳಿ. ಮುಂದಿನ ಭವಿಷ್ಯಕ್ಕಾಗಿ ಯೋಜನೆಯನ್ನು ಪ್ರಾರಂಭಿಸುವುದು ಒಳಿತು. ಯೋಜನೆಗಾಗಿ ಹಣ ಖರ್ಚು ಮಾಡಲು ಮೀನಾಮೇಶ ಎಣಿಸುವ ನಿಮ್ಮ ಯೋಚನೆಯನ್ನು ಸರಿಪಡಿಸಿಕೊಳ್ಳ ಬೇಕಾಗಿದೆ.
ಮೀನ ರಾಶಿ
ದೂರದ ಸಂಬಂಧಿಗಳು ನಿಮ್ಮನ್ನು ಕಾಣಲು ಬರಬಹುದು. ನಿಮ್ಮಿಂದ ಸಹಾಯ ಅಪೇಕ್ಷಿಸಿ ಕೆಲವರು ಕೇಳಿ ಕೊಳ್ಳಬಹುದು. ಈ ದಿನ ನೀವು ಯಾರಿಗೂ ಸಾಲ ನೀಡುವ ವಿಚಾರಕ್ಕೆ ಹೋಗದಿರಿಇದರಿಂದ ಮುಂದೆ ಸಮಸ್ಯೆ ಅನುಭವಿಸಬೇಕಾಗುವುದು.
ನಿಮ್ಮ ಸಮಸ್ಯೆಗಳು ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಪರಿಹಾರ ನಿಶ್ಚಿತ.
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಆರೋಗ್ಯ, ಪ್ರೇಮ ವಿಚಾರ, ದಾಂಪತ್ಯ ಕಲಹ, ಜನವಶ, ಮನವಶ, ಧನವಶ ಇಷ್ಟಾರ್ಥಸಿದ್ಧಿಗಳು ಹೀಗೆ ಹತ್ತು-ಹಲವು ಗುಪ್ತ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
9686487402