ಮೈಸೂರು: ಮಕ್ಕಳು ಕೋವಿಡ್ ನಿಯಮಗಳನ್ನು ಪಾಲನೆ ಮಾಡಿ ಎರಡು ದಿನಗಳ ಕಾಲ ನಡೆಯುವ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಧೈರ್ಯವಾಗಿ ಎದುರಿಸಬೇಕು ಎಂದು ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕರಾದ ಗಿರೀಶ್ ಹೇಳಿದರು
ಜೀವದಾರಾ ಪದವೀಧರರ ಘಟಕದ ವತಿಯಿಂದ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಲಕ್ಷ್ಮಿಪುರಂನ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಹೊಯ್ಸಳ ಕರ್ನಾಟಕ ಆವರಣದಲ್ಲಿ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಮಾಸ್ಕ್ ಸ್ಯಾನಿಟೈಸರ್ ಗುಲಾಬಿ ಪೆನ್ನು ವಿತರಿಸಿ ಮಾತನಾಡಿದ ಅವರು, ಸರ್ಕಾರ ಪರೀಕ್ಷೆಯನ್ನು ಎರಡು ದಿನಕ್ಕೆ ಸೀಮಿತ ಮಾಡಿ ಮಕ್ಕಳಿಗೆ ಯಾವುದೇ ಗೊಂದಲ ಇಲ್ಲದಂತೆ ಪರೀಕ್ಷೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ
ಕೋವಿಡ್ ನಿಂದ ಈ ಬಾರಿ ಶಾಲೆಗಳೇ ನಡೆದಿಲ್ಲ. ಆನ್ ಲೈನ್ ಮೂಲಕವೇ ಅತಿಹೆಚ್ಚು ತರಗತಿಗಳನ್ನು ನಡೆದಿದ್ದು ಪರೀಕ್ಷೆ ಬರೆಯುವ ಎಲ್ಲ ಮಕ್ಕಳನ್ನು ಉತ್ತೀರ್ಣ ಮಾಡುವುದಾಗಿ ಸರ್ಕಾರ ತಿಳಿಸುವುದರಿಂದ ಯಾವ ವಿದ್ಯಾರ್ಥಿ ಕೂಡ ಧೈರ್ಯಗೆಡದೆ ಪರೀಕ್ಷೆ ಬರೆಯಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕರಾದ ಗಿರೀಶ್, ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷರಾದ ಕೆ ಆರ್ ಸತ್ಯನಾರಾಯಣ್, ಖಜಾಂಜಿ ಜಯಸಿಂಹ, ಸಹ ಕಾರ್ಯದರ್ಶಿ ರಂಗನಾಥ್, ಕೇಬಲ್ ಮಹೇಶ್, ವಿನಯ್ ಕಣಗಾಲ್ ಹಾಗೂ ಶಿಕ್ಷಕರು ಹಾಜರಿದ್ದರು