ಆಗಸ್ಟ್ 30 ರಂದು ಜಗನ್ಮೋಹನ ಅರಮನೆಯಲ್ಲಿ ರಾಜ್ಯ ಮಟ್ಟದ ದೇಹದಾರ್ಢ್ಯ ಸ್ಫರ್ಧೆ

ಮೈಸೂರು:-  ಜಿಎಚ್ ಫಿಟ್ನೆಸ್ ಅಂಡ್ ಜಿಮ್, ಮೈಸೂರು ಲಯನ್ಸ್ ಕ್ಲಬ್ ಗೋಲ್ಡನ್ ಸಿಟಿ ಹಾಗೂ ಭುವನ್‌ರಾಜ್ ಫೌಂಡೇಷನ್ ಸಂಯುಕ್ತಾಶ್ರಯದಲ್ಲಿ ಇದೇ ಆ. 30 ರ ಸಂಜೆ 5.30 ನಗರದ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ರಾಷ್ಟಿçÃಯ ಕ್ರೀಡಾ ದಿನಾಚರಣೆ ಅಂಗವಾಗಿ ರಾಜ್ಯ ಮಟ್ಟದ ದೇಹದಾರ್ಢ್ಯ ಸ್ಫರ್ಧೆ ಆಯೋಜಿಸಲಾಗಿದೆ ಎಂದು ಪರಿಸರ ಸ್ನೇಹಿ ತಂಡದ ಅಧ್ಯಕ್ಷ ಲೋಹಿತ್ ತಿಳಿಸಿದರು.

ನಗರದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ಈ ಸ್ಪರ್ಧೆಗೆ ಒಡೆಯರ್ ಕಪ್ ಸ್ಪರ್ಧೆ ಎಂದು ಹೆಸರಿಟ್ಟಿದ್ದು, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕರಾದ ಜಿ.ಟಿ. ದೇವೇಗೌಡ, ಹರೀಶ್‌ಗೌಡ, ಟಿ.ಎಸ್. ಶ್ರೀವತ್ಸ, ಸಿ.ಎನ್. ಮಂಜೇಗೌಡ, ಕವೀಶ್‌ಗೌಡ, ನಾಗರಾಜ್ ವಿ. ಭೈರಿ, ಭುವನ್‌ರಾ, ಎನ್. ಚೇತನ್‌ರಾಜ್ ಇನ್ನಿತರರು ಉದ್ಘಾಟನೆ ವೇಳೆ ಅತಿಥಿಗಳಾಗಿರುವರು.

ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರಿಗೆ ಒಟ್ಟು ನಾಲ್ಕು ವಿಭಾಗಗಳಲ್ಲಿ ಪ್ರತಿಯೊಂದಕ್ಕೂ ಒಂದರಿAದ ಐದನೇ ಸ್ಥಾನದವರೆಗೆ ನಗದು ಬಹುಮಾನ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಸುರೇಶ್‌ಗೋಲ್ಡ್, ಇ. ಹರೀಶ್, ನವೀನ್‌ಚಂದ್ರ ಹಾಗೂ ಲಕ್ಷ್ಮೀಪತಿ ಬಾಲಾಜಿ ಇದ್ದರು.