ಗಾನ ಭಾರತೀ ಆವರಣದಲ್ಲಿ ಡಿ.6ರಂದು ಸ್ತುತಿ ಹೆಗಡೆ ರಂಗಪ್ರವೇಶ

ಮೈಸೂರು:  ನಗರದ ನೃತ್ಯ ಗಿರಿ ಪ್ರದರ್ಶನ ಕಲೆಗಳ ಸಂಶೋಧನಾ ಕೇಂದ್ರ ಡಿ. 6 ರಂದು ಸಂಜೆ 6ಕ್ಕೆ ಮೈಸೂರು ನಗರದ ಗಾನ ಭಾರತೀ ಆವರಣದ ರಮಾ ಗೋವಿಂದ ಕಲಾವೇದಿಕೆಯಲ್ಲಿ ಸ್ತುತಿ ಹೆಗಡೆ ಅವರ ಭರತನಾಟ್ಯ ರಂಗ ಪ್ರವೇಶ ಕಾರ್ಯಕ್ರಮ ಆಯೋಜನೆ ಮಾಡಿದೆ . ಖ್ಯಾತ ವಿದುಷಿ, ಗುರು ಮತ್ತು ನೃತ್ಯ ಗಿರಿ ಸಂಸ್ಥೆ ಕಲಾ ನಿರ್ದೇಶಕಿ ಡಾ. ಕೃಪಾ ಫಡ್ಕೆ ಶಿಷ್ಯೆ ಸ್ತುತಿ ಹೆಗಡೆ ರಂಗಾರೋಹಣಕ್ಕೆ ನಿವೃತ್ತ ಸೇನಾನಿ ಮಹಾಬಲೇಶ್ವರ ಹೆಗಡೆ,  ಖ್ಯಾತ ಪ್ಲಾಸ್ಟಿಕ್ ಸರ್ಜನ್ ಡಾ.  ನಾರಾಯಣ ಹೆಗಡೆ ಮತ್ತು ಹಿರಿಯ ನೃತ್ಯ ನಿರ್ದೇಶಕಿ , ಗುರು ಬೃಂದಾ ಅಯ್ಯಂಗಾರ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ನಾಗೇಂದ್ರ ಹೆಗಡೆ ಹಾಗೂ ರೂಪಾ ಹೆಗಡೆ ಉಪಸ್ಥಿತರಿರಲಿದ್ದಾರೆ.

ಗುರುವಂದನೆ: ಇದೇ ಸಂದರ್ಭ ವಿದುಷಿ ಡಾ. ಕೃಪಾ ಫಡ್ಕೆ ಅವರಿಗೆ ಗುರುವಂದನೆ ಸಮರ್ಪಣೆಯೂ ನೆರವೇರಲಿದೆ.

ಸಂಗೀತ ಸಹಕಾರ:  ಸ್ತುತಿ ಹೆಗಡೆ ರಂಗ ಪ್ರವೇಶಕ್ಕೆ ನಟವಾಂಗದಲ್ಲಿ ಪೂಜಾಸುಗಮ್, ಹಾಡುಗಾರಿಕೆಯಲ್ಲಿ

ವಿದ್ವಾನ್ ದೀಪು ಕರುಣಾಕರನ್, ಮೃದಂಗದಲ್ಲಿ ವಿದ್ವಾನ್ ಶಿವ ಪ್ರಸಾದ್ ಮತ್ತು ಕೊಳಲು ವಾದನದಲ್ಲಿ ವಿದ್ವಾನ್ ಎ.ಪಿ. ಕೃಷ್ಣ ಪ್ರಸಾದ್ ಸಹಕಾರ ನೀಡಲಿದ್ದಾರೆ.

ಬೆಳೆಯುವ ಸಿರಿ:

ಪ್ರತಿಭಾನ್ವಿತ ಕಲಾವಿದೆ ಸ್ತುತಿ ಹೆಗಡೆ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಸಿರಸಿಯ ನಾಗೇಂದ್ರ ಹೆಗಡೆ ಹಾಗೂ ರೂಪಾ ಹೆಗಡೆ ಪುತ್ರಿ. ನಗರದ ಪ್ರಮತಿ ಹಿಲ್ ವ್ಯೆ ಅಕಾಡೆಮಿ ಶಾಲೆಯಲ್ಲಿ 9ನೇ ತರಗತಿ ವಿದ್ಯಾರ್ಥಿನಿ. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಯಲ್ಲಿ ಮುಂಚೂಣಿಯಲ್ಲಿ ಇರುವುದು ಗಮನಾರ್ಹ.