ಹಸುಗೂಸಿಗೆ ಚಿತ್ರಹಿಂಸೆ ನೀಡಿದ ಕ್ರೂರಿ ತಾಯಿಯ ಬಂಧನ:

ಪುಟ್ಟ ಮಗುವಿಗೆ ತಾಯಿಯ ಚಿತ್ರಹಿಂಸೆ ವೀಡಿಯೋ ವೈರಲ್, ಮಹಿಳೆಯ ಬಂಧನ

ಇನ್ನೂ ಮಾತೂ ಬರದ ಮಗುವೆಂಬುದನ್ನೂ ಮರೆತು ಚಪ್ಪಲಿಯಿಂದ ಹೊಡೆದು, ಗಲ್ಲದ ಮೇಲೆ ರಕ್ತ ಬರುವಂತೆ ಬಾಯಿಗೆ  ಗುದ್ದಿ ತಾನೇ ಮೋಬೈಲ್ ನಲ್ಲಿ ವೀಡಿಯೋ ಚಿತ್ರೀಕರಿಸಿದ್ದ ಆ ತಾಯಿಯ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿತ್ತು.

ತನ್ನ ಹದಿನೆಂಟು ತಿಂಗಳ ಮಗನನ್ನು ಕ್ರೂರವಾಗಿ ಥಳಿಸಿದ 22 ವರ್ಷದ ಮಹಿಳೆಯನ್ನು ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಭಾನುವಾರ ತಮಿಳುನಾಡು ಪೋಲಿಸರು ಬಂಧಿಸಿದ್ದಾರೆ.

ಬಂಧಿತ ಮಹಿಳೆ ತುಳಸಿಗೆ ವಡಿವಾಜಗನ್ ಎಂಬಾತನೊಂದಿಗೆ 5 ವರ್ಷಗಳ ಹಿಂದೆ ಮದುವೆಯಾಗಿದ್ದು, ತಮಿಳುನಾಡಿನಲ್ಲಿ ವಾಸಿಸುತ್ತಿದ್ದರು. ಅವರಿಗೆ ಗೋಕುಲ್(4) ಮತ್ತು ಪ್ರದೀಪ್(2) ಇಬ್ಬರು ಮಕ್ಕಳು.

ಪ್ರಿಯಕರನಿಗಾಗಿ ಮಗುವಿಗೆ ಹಿಂಸೆ

ಪತಿಯೊಂದಿಗೆ ಜಗಳವಾಡಿದ್ದ ತುಳಸಿ 40 ದಿನಗಳ ಹಿಂದೆ ಆಂಧ್ರಪ್ರದೇಶದ ತನ್ನ ತವರು ಮನೆ ಸೇರಿದ್ದಳು. ಇದಕ್ಕೂ ಮುಂಚೆಯೇ ತನ್ನ ಪ್ರಿಯಕರನಿಗಾಗಿ ಮಗುವಿಗೆ ಹಿಂಸೆ ನೀಡುವುದನ್ನು ತುಳಸಿ ಶುರು ಮಾಡಿದ್ದಳು. ಹೀಗೆ ಹಿಂಸಿಸುವ ದೃಶ್ಯವನ್ನು ಫೆಬ್ರವರಿಯಲ್ಲಿ ತಾನೇ ಮೊಬೈಲಿನಲ್ಲಿ ರೆಕಾರ್ಡ್ ಮಾಡಿದ್ದಳು.

ಫೆಬ್ರವರಿಯಲ್ಲಿ ರೆಕಾರ್ಡ್ ಆಗಿರುವ ಈ ವೀಡಿಯೋಗಳು ಹೇಗೋ ಸಂಬಂಧಿಕರ ಕಣ್ಣಿಗೆ ಬಿದ್ದು ಆಕೆಯ ಪತಿಗೆ ವಿಷಯ ಮುಟ್ಟಿಸಿದ್ದರಿಂದ ಆ ಮಹಿಳೆಯ ಅಮಾನವೀಯ ಕೃತ್ಯ ಬಯಲಾಗಿದೆ.

ವೀಡಿಯೋಗಳಲ್ಲಿ ಕಂಡುಬಂದಂತೆ ಮಹಿಳೆ ತನ್ನ ಮಗುವಿನ ಬೆನ್ನ ಮೇಲೆ ಬಾಸುಂಡೆ ಬರುವಂತೆ ಬಾರಿಸಿದ್ದು, ಮಗು ನೋವಿನಿಂದ ಕಿರುಚುತ್ತಿದ್ದರೂ ಬಿಡದೆ ಬಾಯಿ ಮತ್ತು ಮೂಗಿನಿಂದ ರಕ್ತ ಬರುವಂತೆ ಗಲ್ಲದ ಮೇಲೆ ಗುದ್ದಿದ್ದಾಳೆ.

Leave a Reply

Your email address will not be published. Required fields are marked *