ಪಾಲಹಳ್ಳಿಯಲ್ಲಿ ಮೊಸಳೆ ಹಿಡಿಯಲು ಬೊನ್ ಇಟ್ಟ ಅರಣ್ಯ ಇಲಾಖೆ

ಪಾಲಹಳ್ಳಿ :-ಶ್ರೀರಂಗಪಟ್ಟಣ ತಾಲೂಕಿನ ರಂಗನತಿಟ್ಟು ಸಮೀಪದ ವಿರಿಜಾ ನಾಲೆಯಲ್ಲಿ ಪ್ರತ್ಯಕ್ಷವಾಗಿ ಎರಡು ಮೇಕೆಗಳನ್ನು ಕೊಂದ ಮೊಸಳೆಯ ಸೆರೆಗೆ ಇದೀಗ ಅರಣ್ಯ ಇಲಾಖೆ ಅಧಿಕಾರಿಗಳು ಬೋನ್ ಇರಿಸಿದ್ದಾರೆ . ಪಾಲಹಳ್ಳಿ ಸಮೀಪದ ವಿರಿಜಾ ನಾಲೆಯಲ್ಲಿ ಇತ್ತೀಚೆಗೆ ಮೊಸಳೆ ಎರಡು | ಮೇಕೆಗಳನ್ನು ತಿಂದು ಆತಂಕ ಮೂಡಿಸಿತ್ತು . ಇದರಿಂದ ರೈತರು ಅರಣ್ಯ ಇಲಾಖೆಗೆ ದೂರು ನೀಡಿದ ಮೇರೆಗೆ ಅರಣ್ಯ ಇಲಾಖೆ ಮೊಸಳೆ ಸೆರೆ ಹಿಡಿಯಲು ಮೊದಲು ಬಲೆಯ ಮೂಲಕ ಪ್ರಯತ್ನಿಸಿದರಾದರು ಬಲೆಯನ್ನು ಕಡಿದು ಮೊಸಳೆ ಪರಾರಿಯಾಗಿತ್ತು . ಇದೀಗ ನಾಲೆ ಸಮೀಪದ ಜಮೀನಿನಲ್ಲಿ ಬೋನ್ ಇರಿಸಿ , ಅದರಲ್ಲಿ ಕೋಳಿ ಮಾಂಸ ಇರಿಸಿ ಮೊಸಳೆ ಸೆರೆಗೆ ಮುಂದಾಗಿದ್ದಾರೆ

Leave a Reply

Your email address will not be published. Required fields are marked *