ಕನ್ನಡದಲ್ಲಿ ಟೇಕ್ವಾಂಡೋ ಕ್ರೀಡೆ ಬಗ್ಗೆ ಹೊಸ ಸಿನಿಮಾ, ಮಗಳಿಗಾಗಿ ‘ಟೇಕ್ವಾಂಡೋ ಗರ್ಲ್’ ಸಿನಿಮಾಕ್ಕೆ ಹಣ ಹಾಕಿದ ಅಮ್ಮ
ಇವತ್ತಿನ ಸಮಾಜದಲ್ಲಿ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಹಾಗೂ ಅತ್ಯಾಚಾರದಂತಹ ಘಟನೆಗಳು ನಿರಂತರವಾಗಿ ನಡೆಯುತ್ತಲೇ ಇದೆ ಇದಕೆಲ್ಲ ಕಡಿವಾಣ ಹಾಕುವುದು ಬಹಳ ಅಗತ್ಯ. ಹೆಣ್ಣು ಮಕ್ಕಳು ಸ್ಟ್ರಾಂಗ್ ಆಗಬೇಕು. ಕರಾಟೆ , ಸೆಲ್ಫ್ ಡಿಫೆನ್ಸ್ ಮಾಡಿಕೊಳ್ಳುವಂತಹ ಟೇಕ್ವಾಂಡೋ ಸಮರ ಕಲೆಯನ್ನ ಮಕ್ಕಳು ಕಲಿಯಬೇಕಾಗಿರುವುದು ಅನಿವಾರ್ಯವಾಗಿದೆ.

ಇದರಿಂದ ಹೆಣ್ಣು ಮಕ್ಕಳು ತಮ್ಮನ ತಾವು ರಕ್ಷಿಸಿಕೊಳ್ಳುವುದಕ್ಕೆ ಒಂದು ದಾರಿ ಆಗುತ್ತದೆ. ಅಂತದ್ದೇ ಒಂದು ಸಮರಭ್ಯಾಸ ಕಲೆಯ ಚಿತ್ರವಾದ “ಟೇಕ್ವಾಂಡೋ ಗರ್ಲ್” ಎಂಬ ಚಿತ್ರ ಇದೇ ಆಗಸ್ಟ್ 30ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ನಂತರ ಮಾತನಾಡಿದ ಇಷ್ಟು ಚಿಕ್ಕ ವಯಸ್ಸಿನಲ್ಲೇ ಇಷ್ಟೊಂದು ಶ್ರಮ ಪಟ್ಟು ಇದನ್ನು ಮಾಡಿರುವ ಋತುಸ್ಪರ್ಶಗೆ ಉಜ್ವಲ ಭವಿಷ್ಯವಿದೆ. ಸೆಲ್ಫ ಡಿಫೆನ್ಸ್ ಮೂಲಕ ತಮ್ಮನ್ನು ರಕ್ಷಿಸಿಕೊಂಡಾಗ ಮಾತ್ರ ಸಮಾಜದಲ್ಲಿ ಬದುಕಲು ಸಾಧ್ಯ. ಇಂತಹ ಕಥೆಯನ್ನು ಅವಲಂಭಿಸಿದ ಚಿತ್ರಗಳು ಹೆಚ್ಚಾಗಿ ಬರಬೇಕು.

ಆತ್ರೇಯ ಕ್ರಿಯೇಶನ್ಸ್ ನಿರ್ಮಾಣದ ಡಾ. ಸುಮಿತ ಪ್ರವೀಣ್ ನಿರ್ಮಿಸಿರುವ ಟೇಕ್ವಾಂಡೋ ಗರ್ಲ್ ಚಿತ್ರಕ್ಕೆ ರವೀಂದ್ರವಂಶಿರವರ ನಿರ್ದೇಶನವಿದ್ದು ಕನ್ನಡ ಚಿತ್ರರಂಗದ ಟೇಕ್ವಾಂಡೋ ಗರ್ಲ್ ಆಗಿ ಋತುಸ್ಪರ್ಶ ಪ್ರಪ್ರಥಮ ಬಾರಿಗೆ ಮುಖ್ಯ ಪಾತ್ರದಲ್ಲಿ ನಾಯಕನಟಿಯಾಗಿ ಅಭಿನಯಿಸಿದ್ದಾರೆ. ಸುಮಾರು ಈ ಸಿನಿಮಾದಲ್ಲಿ 200 ಮಕ್ಕಳಿಗೆ ಅವಕಾಶ ಕಲ್ಪಿಸಿ ಸಾಮಾಜಿಕ ಕಳಕಳಿಯಿರುವ ಈ ಚಿತ್ರವನ್ನು ರಾಜ್ಯದ ಎಲ್ಲಾ ಶಾಲಾಮಕ್ಕಳಿಗೂ ತೋರಿಸಬೇಕೆಂಬುದು ನಿರ್ಮಾಪಕರ ಮನದಾಳದ ಮಹದಾಸೆಯಾಗಿದೆ. ಮುಖ್ಯ ಪಾತ್ರದಲ್ಲಿರವ ಮಗಳು ಋತುಸ್ಪರ್ಶ ಸುಮಾರು ಎಂಟು ವರ್ಷಗಳಿಂದ ಟೇಕ್ವಾಂಡೋ ಸಮರ ಕಲೆಯನ್ನು ಕಲಿತು ಐದು ಬಾರಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಬ್ಲಾಕ್ಬೆಲ್ಟ್ ಪಡೆದಿರುತ್ತಾರೆ. ಅಂತರಾಷ್ಟ್ರೀಯ ನೃತ್ಯಗಾರ್ತಿಯು ಆಗಿರುವ ಈ ಅಪ್ಪಟ ದೇಸಿ ಕಲಾ ಪ್ರತಿಭೆಯ ಮೊದಲ ಚಿತ್ರವಾಗಿದೆ. ವಿಯಟ್ನಾಂ ನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಈ ಚಿತ್ರವು ಆಯ್ಕೆಯಾಗಿದ್ದು ಅತ್ಯುತ್ತಮ ಬಾಲ ಕಲಾವಿದೆ ಪ್ರಶಸ್ತಿಗೆ ಋತು ಸ್ಪರ್ಶ ಆಯ್ಕೆಯಾಗಿದ್ದಾರೆ. ಈಗಾಗಲೇ ಕನ್ನಡದ ಬಾಲನಟಿಯಾಗಿ ಕಾಂಗೋ, ಬಾಲ್ಯ ಅತ್ಯಮೂಲ್ಯ, ಗಂಗೆಗೌರಿ, ತಾರಕೇಶ್ವರ ಚಿತ್ರದಲ್ಲಿ ಅಭಿನಯಿಸಿದ್ದಾಳೆ. 30 ದಿನಗಳ ಕಾಲ ಚಿತ್ರೀಕರಣ ನಡೆದಿದ್ದು ಮಾಸ್ಟರ್ ವಿಫರವಿ ರವರು ಸಮರಕಲೆಯನ್ನು ಹೇಳಿಕೊಟ್ಟಿದ್ದಾರೆ. ಚಿತ್ರದಲ್ಲಿ 2 ಹಾಡುಗಳಿದ್ದು ಬೆಂಗಳೂರು ನಗರದ ರಾಜಾಜಿನಗರ, ಜಾಲಹಳ್ಳಿ, ಸಹಕಾರನಗರದಲ್ಲಿ ಚಿತ್ರೀಕರಣ ನಡೆಸಲಾಗಿದೆ. ಚಿತ್ರವು ಇದೇ ಆಗಸ್ಟ್ 30 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ಈ ಚಿತ್ರ ತಂಡದಲ್ಲಿ ನಿರ್ಮಾಪಕರು ರವೀಂದ್ರ ವೆಂಶಿ, ರಚನೆ ಮತ್ತು ನಿರ್ದೇಶನ ಡಾ. ಸುಮಿತ ಪ್ರವೀಣ್, ಸಹ ನಿರ್ಮಾಪಕರು ಪ್ರವೀಣ್ ಸಿ. ಬಾನು, ಸಂಗೀತ : ತ್ಯಾಗರಾಜ ಎಂ.ಎಸ್. ಸಾಹಿತ್ಯ : ಮನೋಜ್ ಕುಮಾರ್ ಸಿ. ಸಂಕಲನ : ಸಿ. ರವಿಚಂದ್ರನ್, ಛಾಯಾಗ್ರಹಣ : ಪ್ರಮೋದ್ ಭಾರತೀಯ. ಸಮರಕಲೆ : ಮಾಸ್ಟರ್ ವಿಫ ರವಿ, ಸಹ ನಿರ್ದೇಶನ : ಅನಿಲ್ ಯುವಸೂರ್ಯ, ಸೂರಿ ಧ್ವನಿಗ್ರಹಣ : ಕೃಷ್ಣಮೂರ್ತಿ ತಾರಾಗಣ : ಋತು ಸ್ಪರ್ಶ, ಡಾ. ಸುಮಿತ ಪ್ರವೀಣ್, ಪ್ರವೀಣ್ ಸಿ. ಬಾನು, ಪಲ್ಲವಿ ರಾವ್, ಸಹನಶ್ರೀ, ವಿಫ ರವಿ, ಸ್ವಾತಿ ಶಿವಮೊಗ್ಗ, ರೇಖಾ ಕೂಡ್ಲಿಗಿ ಮುಂತಾದವರು ಇದ್ದಾರೆ.