ಉಸಿರುಗಟ್ಟಿಸಿದ ಸಿಲಿಂಡರ್ ನ ಬೆಲೆ ಏರಿಕೆ ಆಗಸ್ಟ್ 17 ರಿಂದಲೇ ಹೊಸ ದರ ಅನ್ವಯ
ಒಂದು ಕಡೆ ಕೊರೋನಾದ ರಭಸಕ್ಕೆ ಇಡೀ ದೇಶವೇ ತತ್ತರಿಸಿ ಹೋಗುತ್ತಿದೆ. ಇದರಿಂದಾಗಿ ಸಾಕಷ್ಟು ಜನರು ಈಗಾಗಲೇ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಹೀಗಿರುವಾಗ ಅಡಿಗೆ ಅನಿಲ ಬೆಲೆಯಲ್ಲಿ ಮತ್ತೇ 25 ರೂಪಾಯಿ ಹೆಚ್ಚಳವಾಗಿದ್ದು, ಪ್ರತಿ ಸಿಲಿಂಡರ್ ಗೆ 25 ರೂಪಾಯಿ ಹೆಚ್ಚಳವಾಗಿದೆ. ಕೊರೋನಾದ ಸಂಕಷ್ಟದ ಬೆನ್ನಲ್ಲೇ ಕೇವಲ ಒಂದೇ ತಿಂಗಳಲ್ಲಿ ಮತ್ತೆ ಸಿಲಿಂಡರ್ ಬೆಲೆ ಏರಿಕೆ ಕಂಡಿರುವುದು ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಇನ್ನು ಇದರಿಂದಾಗಿ ಇದೀಗ ಸಬ್ಸಿಡಿರಹಿತ 14.2 ಕೆಜಿ ಎಲ್ಪಿಜಿ ಸಿಲಿಂಡರ್ ಬೆಲೆ ದೆಹಲಿಯಲ್ಲಿ 859. 50 ರೂ., ಚೆನ್ನೈನಲ್ಲಿ 875. 50, ಕೊಲ್ಕತ್ತಾದಲ್ಲಿ 886.50 ರೂಪಾಯಿ ಏರಿಕೆಯಾಗಿದ್ದು, ದೇಶದಾದ್ಯಂತ ಇದೇ ಪ್ರಮಾಣದಲ್ಲಿ ಬೆಲೆ ಏರಿಕೆ ಮಾಡಲಾಗಿದೆ.
ಕಳೆದ ಒಂದುವರೆ ತಿಂಗಳ ಹಿಂದಷ್ಟೇ ಆದರೆ ಜುಲೈ 1 ರಂದು ಎಲ್ಪಿಜಿ ಸಿಲಿಂಡರ್ ಬೆಲೆಯನ್ನು 25.50 ಹೆಚ್ಚಿಸಲಾಗಿತ್ತು. ಆದರೆ ಇದೀಗ ಕೇವಲ ಒಂದುವರೆ ತಿಂಗಳ ಅಂತರದಲ್ಲಿ ಮತ್ತೆ ₹25 ಏರಿಸಲಾಗಿದೆ. ಆಗಸ್ಟ್ ,17ರಿಂದಲೇ ಈ ಹೊಸ ದರ ಅನ್ವಯವಾಗಲಿದೆ. ಅಷ್ಟೇ ಅಲ್ಲದೆ ದೇಶದಾದ್ಯಂತ ಪೆಟ್ರೋಲ್ ದರಗಳು ದಾಖಲೆ ಮಟ್ಟದಲ್ಲಿ ಏರಿಕೆ ಆಗುತ್ತಿರುವುದರ ನಡುವೆ ಎಲ್ಪಿಜಿ ಸಿಲಿಂಡರ್ ಬೆಲೆ ಏರಿಕೆ ಕಂಡು ಪೈಪೋಟಿ ನೀಡಲು ಸಿದ್ದವಾದಂತಾಗಿದೆ.
ಹಾಗೆಯೇ ಸ್ಥಳೀಯ ತೆರಿಗೆಗಳಿಂದಾಗಿ ಎಲ್ಪಿಜಿ ಸಿಲಿಂಡರ್ ಗಳ ಬೆಲೆ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಬದಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.