ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಗೆ ಹಂಚಿಕೆಯಾಗಿರುವ ನಿವೇಶನಕ್ಕೂ ಯಾವುದೇ ಸಂಬಂಧವಿಲ್ಲ : ರಾಜ್ಯ ಹಿಂದುಳಿದ ವರ್ಗಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮು

ಮೈಸೂರು:-ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಲ್ಲಿ ನಡೆಯುತ್ತಿರುವ ಸಮಸ್ಯೆಗಳ ಕುರಿತು ಸಭೆಯಲ್ಲಿ ಚರ್ಚಿಸಲು ಮುಡಾ ಅಧ್ಯಕ್ಷ ಕೆ.ಮರಿಗೌಡ ಟಿಪ್ಪಣಿ ಬರೆದಿದ್ದಾರೆ ಹೊರತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಗೆ ಹಂಚಿಕೆಯಾಗಿರುವ ನಿವೇಶನಕ್ಕೂ ಯಾವುದೇ ಸಂಬಂಧವಿಲ್ಲ ಎಂದು ರಾಜ್ಯ ಹಿಂದುಳಿದ ವರ್ಗಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮು ತಿಳಿಸಿದರು.


ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಡಾದಲ್ಲಿ 50:50 ಅನುಪಾತದಲ್ಲಿ ಹಂಚಿಕೆ ಮಾಡುತ್ತಿರುವ ನಿವೇಶನ, ಪ್ರೋತ್ಸಾಹಕ ನಿವೇಶನ ಹಾಗೂ ಸರ್ವೆ ನಂ57 ಮತ್ತು 77ರ ಜಮೀನಿನಲ್ಲಿ ನಿವೇಶನ ಹಂಚಿಕೆಯನ್ನು ತಡೆ ಹಿಡಿಯಬೇಕೆಂದು ಶಾಸಕ ಕೆ.ಹರೀಶ್ ಗೌಡ ದೂರು ನೀಡಿದ್ದು, ಮೈಸೂರಿನ ಕಸಬಾ ಹೋಬಳಿಯ ಸರ್ವೆ ನಂ.೮೬ರ ಜಮೀನಿಗೆ ೫೦:೫೦ರಡಿ ನಿವೇಶನ ಹಂಚಿಕೆಯೂ ಕಾನೂನು ಬಾಹಿರವಾಗಿದೆ ಎಂದು ಗಂಗರಾಜು ದೂರು ನೀಡಿದ ಹಿನ್ನೆಲೆಯಲ್ಲಿ ಈ ವಿಷಯಗಳನ್ನು ಪ್ರಾಧಿಕಾರದ ಸಭೆಗೆ ಮಂಡಿಸಿ, ಸಭೆ ತೀರ್ಮಾನವನ್ನು ಸರ್ಕಾರದಿಂದ ಅನುಮೋದನೆ ಸಲ್ಲಿಸಿ, ಸರ್ಕಾರದ ನಿರ್ದೇಶನದಂತೆ ಕ್ರಮ ವಹಿಸಲು ಮರಿಗೌಡರು ಟಿಪ್ಪಣಿ ಬರೆದಿದ್ದಾರೆ ಎಂದರು.


ಮರಿಗೌಡರು ಬರೆದಿರುವ ಟಿಪ್ಪಣಿಯಿಂದ ಅಧಿಕಾರಿಗಳು ರಾಜಕಾರಣಿಗಳ ಹಿತಾಸಕ್ತಿ ಕಾಯಲು ಬಿಜೆಪಿ ಮತ್ತು ಜೆಡಿಎಸ್ ನಾಯಕ ಅಕ್ರಮಗಳು ಹೊರಬರಬಾರದೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ವಿಚಾರವನ್ನು ಮುಂದಿಟ್ಟುಕೊಂಡು. ಮರಿಗೌಡರನ್ನು ಕಳ್ಳನಾಯಕನಾಗಿ ಬಿಂಬಿಸುತ್ತಿದ್ದಾರೆ. ಮರಿಗೌಡರು ಕಳೆದ 40 ವರ್ಷಗಳಿಂದ ಸಿದ್ದರಾಮಯ್ಯ ಅವರ ಪರವಾಗಿದ್ದು, ರಾಮನಿಗೆ ಭಂಟನಂತೆ ಇದ್ದಾರೆ ಎಂದು ತಿಳಿಸಿದರು.
ಇಂತಹವರ ವಿರುದ್ಧ ಮಾವನಹಳ್ಳಿ ಸಿದ್ದೇಗೌಡ ಇಲ್ಲ ಸಲ್ಲದ ಆರೋಪ ಮಾಡುತ್ತಿರುವುದು ಸರಿಯಲ್ಲ. ಪ್ರಾಮಾಣಿಕ ರಾಜಕಾರಣ ಮಾಡಿದರೆ, ಚುನಾವಣೆಯಲ್ಲಿ ಗೆಲ್ಲಬಹುದಾಗಿತ್ತು. ಆದರೆ, ಸಿದ್ದೇಗೌಡ ಬುಕ್ಕಿಂಗ್ ಗಿರಾಕಿಯಾಗಿದ್ದು, ಚುನಾವಣೆಯ ಹಿಂದಿನ ದಿನ ಎಷ್ಟಕ್ಕೆ ಬುಕ್ಕಿಂಗ್ ಆಗಿದ್ದಾರೆ ಎಂಬುದು ಗೊತ್ತಿದೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಪಕ್ಷದ ಸದಸ್ಯನೇ ಆಗಿರದ ಇರುವವನನ್ನು ಸಿದ್ದರಾಮಯ್ಯ ಕರೆದು ಟಿಕೆಟ್ ನೀಡಿದರು. ಚುನಾವಣೆ ಎರಡು ದಿನ ಇರುವಾಗ ಫೋನ್ ಸ್ವೀಚ್ ಆಫ್ ಮಾಡಿಕೊಂಡಿದ್ದಾರೆ. ಬೂತ್‌ನಲ್ಲಿ ಕಾರ್ಯಕರ್ತರ ಖರ್ಚು ವೆಚ್ಚಕ್ಕೆ ಹಣವಿಲ್ಲದೇ ಪರದಾಡುವ ಸ್ಥಿತಿ ನಿರ್ಮಾಣವಾಯಿತು. ಆದರೂ ಕಾರ್ಯಕರ್ತರು ಶ್ರಮದಿಂದ 83 ಸಾವಿರ ಓಟ್ ಲಭಿಸಿದೆ. ಸಿದ್ದೇಗೌಡನ ಬದಲು ಮರಿಗೌಡರಿಗೆ ಟಿಕೆಟ್ ನೀಡಿದರೆ ಜಿಟಿಡಿ ವಿರುದ್ದ ಸುಲಭವಾಗಿ ಗೆಲ್ಲುತ್ತಿದ್ದರು. ಮರಿಗೌಡರು ಮುಡಾ ಅಧ್ಯಕ್ಷರಾಗಿ ಸಮರ್ಥವಾಗಿ ನಿಭಾಯಿಸಿದ್ದಾರೆ. ನಿಮ್ಮ ಬಗ್ಗೆ ಎಲ್ಲವೂ ತಿಳಿದ್ದಿದೆ. ಬನ್ನಿ ನಿಮ್ಮ ತೋಟದ ಮನೆಯಲ್ಲಿ ಕುಳಿತು ಚರ್ಚೆ ಮಾಡೋಣ ಎಂದು ಬಹಿರಂಗ ಸವಾಲೆಸೆದರು.


ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿರುದ್ದ ಲೋಕಾಯುಕ್ತ ಸಂಸ್ಥೆ ತನಿಖೆಗೆ ಅನುಮತಿಗೆ ಕೋರಿದೆ. ಭ್ರಷ್ಟಾಚಾರ ನಿಮ್ಮ ರಕ್ತದಲ್ಲಿದೆ ನೀವು ಸಿದ್ದರಾಮಯ್ಯ ಅವರ ವಿರುದ್ದ ಮಾತನಾಡುವ ನೈತಿಕತೆ ಇಲ್ಲ ಎಂದು ವಾಗ್ದಾಳಿ ನಡೆಸಿ, ಮುಡಾ ಆಯುಕ್ತರಾದ ಡಿ.ಬಿ.ನಟೇಶ್ ಮತ್ತು ದಿನೇಶ್ ಅವರನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು.
ಮುಡಾದಲ್ಲಿ ನಡೆದಿರುವ ಎಲ್ಲಾ ಹಗರಣಗಳಿಗೆ ಬಿ.ವೈ.ವಿಜಯೇಂದ್ರ ಅವರ ಕಿಚನ್ ಕಿಚನ್ ಟೀಂ ಸದಸ್ಯರಾದ ಮೃಗಾಲಯ ಮಾಜಿ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ಪುಸ್ತಕ ಪ್ರಾಧಿಕಾರ ಮಾಜಿ ಅಧ್ಯಕ್ಷ ನಂದೀಶ್ ಹಂಚೆ, ಡಿ.ಬಿ.ನಟೇಶ್ ಮತ್ತು ದಿನೇಶ್ ಕರ್ತೃಗಳಾಗಿದ್ದು, ತಮ್ಮ ತಪ್ಪುಗಳು ಹೊರಗೆ ಬರಬಾರದೆಂದು ಸಿದ್ದರಾಮಯ್ಯ ಅವರ ಪತ್ನಿಗೂ ವಿಚಾರವನ್ನು ಮುಂದಿಟ್ಟಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಯೋಗೇಶ್ ಉಪ್ಪಾರ್, ಮೋಗಣ್ಣಚಾರ್, ಲೋಕೇಶ್ ಮಾದಾಪುರ, ರವಿನಂದನ್, ರಾಜೇಶ್ ಉಪಸ್ಥಿತರಿದ್ದರು.