ಲಿಂಗಾಯತರಲ್ಲಿ ಪರ್ಯಾಯ ನಾಯಕರಿಲ್ಲ ಎಂಬುದು ಸುಳ್ಳು ಮಾಜಿ ಸಚಿವ ಎಂ. ಬಿ. ಪಾಟೀಲ್

ಇದೊಮದು ಖಾಸಗಿ ಬೇಟಿ ಪೂರ್ವಶ್ರಮದ ತಾಯಿ ನಿಧನರಾದ ಹಿನ್ನೆಲೆಯಲ್ಲಿ ಸಾಂತ್ವನ ಹೇಳಲು ಬಂದಿರುವೆ. ರಾಜಕೀಯ ಭೇಟಿ ಅಲ್ಲ. 

ಮುಂದಿನ ಸಿಎಂ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್, ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರು ನಿರ್ದೇಶನ ನೀಡಿದ್ದಾರೆಮ ಯಾರೂ ಕೂಡ ಚರ್ಚೆ ಮಾಡಬಾರದೆಂದು ನಿರ್ದೇಶನ ನೀಡಿದ್ದಾರೆ. ಹಾಗಾಗಿ ನಾನು ಚರ್ಚೆ ಮಾಡುವುದಿಲ್ಲ. 

ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿಯಿದೆ. ಕಾಂಗ್ರೆಸ್ ಪಕ್ಷ ಮುಂದಿನ ಚುನಾವಣೆಯಲ್ಲಿ ೧೫೦ ಸೀಟು ಗೆದ್ದು ಅಧಿಕಾರಕ್ಕೆ ಬರಬೇಕು ಎಂಬುದೇ ಉದ್ದೇಶ. ಅಭಿಮಾನಿಗಳು ಪ್ರೀತಿಯಿಂದ ಹೇಳಿರುವುದು ಕಂಟ್ರೋಲ್ ಮಾಡಲು ಹೇಳಿದೆ. ಬಣ ರಾಜಕೀಯ ಇಲ್ಲ. ನಮ್ಮಲ್ಲಿ ಮೂಲ ಮತ್ತು ವಲಸಿಗ ಅನ್ನೋ ಪ್ರಶ್ನೆ ಇಲ್ಲ. ಕಾಂಗ್ರೆಸ್ಸಿಗೆ ಬಂದ ಮೇಲೆ ಎಲ್ಲರೂ ಒಂದೇ. ಎಲ್ಲ ನಾಯಕರು ಒಗ್ಗಟ್ಟಿನಿಂದ ಇದ್ದಾರೆ. ನಮ್ಮ ಮುಂದಿನ ಸವಾಲು ೧೫೦ ಸೀಟು ಗೆಲ್ಲುವುದು ನಮ್ಮ ಗುರಿಯಾಗಿದೆ. 

ಚುನಾವಣೆಗೂ ಮುನ್ನ ನಾಯಕತ್ವ ಘೋಷಣೆ ಮಾಡುವುದಿಲ್ಲ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತೇವೆ. ಏಕವ್ಯಕ್ತಿ ಮುಂದಿಟ್ಟುಕೊಂಡು ಚುನಾವಣೆಗೆ ಹೋಗುವುದಿಲ್ಲ. ದಾಮೂಹಿಕ ನಾಯಕತ್ವದಲ್ಲೇ ಹೋಗವುದು. ಇಡೀ ದೇಶದಲ್ಲಿ ಒಬ್ಬರನ್ನು ಇಟ್ಟುಕೊಂಡು ಹೋಗುತ್ತೇವೆ

ಚುನಾವಣೆ ಬಳಿಕ ಶಾಸಕಾಂಗ ಪಕ್ಷದ ಸಭೆ ಕರೆಯುತ್ತಾರೆ. ಶಾಸಕರು ಅಭಿಪ್ರಾಯ ಹೇಳುತ್ತಾರೆ. ಹೈಕಮಾಂಡ್ ವಿವೇಚನೆಯಿಂದ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡುತ್ತಾರೆ. 

ನೀವು ಸಿಎಂ ರೇಸ್ ನಲ್ಲಿದ್ಸೀರಾ? ಆಸೆ ಎಲ್ಲರಿಗೂ ಇರುತ್ತದೆ. ಆದರೆ ದುರಾಸೆ ಇರಬಾರದು. ಮೊದಲು ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಕಾಂಗ್ರೆಸ್ ಪಕ್ಷದಲ್ಲಿ ಸಾಕಷ್ಟು ಮಂದಿ ಸಮರ್ಥ ನಾಯಕರಿದ್ದಾರೆ. ಜನ ಬೆಂಬಲ ಮತ್ತು ಶಾಸಕರ ಬೆಂಬಲ ಇರುವವರು ಆಯ್ಕೆಯಾಗುತ್ತಾರೆ. ವೀರಶೈವರಲ್ಲಿ ಬೇರೆ ಯಡಿಯೂರಪ್ಪನ ಬಿಟ್ಟರೆ ಬೇರೆ ನಾಯಕರಿಲ್ಲ. ಯಡಿಯೂರಪ್ಪ ಲಿಂಗಾಯತರ ನಾಯಕ. ಅದರಲ್ಲಿ ಎರಡು ಮಾತಿಲ್ಲ. ಈಗಲೂ ಸಿಎಂ ಆಗಿದ್ದಾರೆ. ಎರಡನೇ ಹಂತದ ಸಾಕಷ್ಟು ವೀರಶೈವ ನಾಯಕರಿದ್ದಾರೆ. ಜಗದೀಶ್ ಶೆಟ್ಟರು, ವಿ.ಸೋಮಣ್ಣ, ಬಸನಗೌಡ ಪಾಟೀಲ್ ಯತ್ನಾಳ್, ಉಮೇಶ್ ಕತ್ತಿ, ಚಂದ್ರಕಾಂತ್ ಬೆಲ್ಲದ್, ಶರಣ ಪ್ರಕಾಶ ಪಾಟೀಲ್, ಬಸವರಾಜ್ ಬೊಮ್ಮಾಯಿ, ಎಸ್.ಆರ್.ಪಾಟೀಲ್ ಅನೇಕ ನಾಯಕರಿದ್ದಾರೆ. 

ಕೊರೊನಾ ಸಂಕಷ್ಟ ಸಮಯದಲ್ಲಿ ನಾಯಕತ್ವ ಬದಲಾವಣೆ, ವಲಸೆ ರಾಜಕಾರಣ ಬೇಕಿರಲಿಲ್ಲ. ಕೊತೊನಾದಿಂದ ಲಕ್ಷಾಂತರ ಜನರು ಪ್ರಾಣ ಕಳೆದುಕೊಂಡಿದ್ದಾರೆ. ತೊಂದರೆಗೀಡಾಗಿದ್ದಾರೆ. ೩ನೇ ಅಲೆ ತಡೆಯಲು ಸಮರ್ಥವಾಗಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು, ಮಕ್ಕಳಿಗೆ ಪರಿಣಾಮ ಬೀರುತ್ತೆ ಹೇಳುತ್ತಿದ್ದಾರೆ. ಆದರೆ ಮಕ್ಕಳಳ್ಇ ರೋಗ ನಿರೋಧಕ ಶಕ್ತಿ ಹೆಚ್ಚಿರುವುದರಿಂದ ಏನೂ ತೊಂದರೆ ಆಗುವುದಿಲ್ಲ. 

ವಿಜಯಪುರ ನನ್ನದೇ ಆಸ್ಪತ್ರೆಯಲ್ಲಿ ೬೦ ಮಕ್ಕಳ ಹಾಸಿಗೆಗಳಿದ್ದವು. ಈಗ ೧೫೦ಕ್ಕೆ ಹೆಚ್ಚಿಸಲಾಗಿದೆ. ೩೦೦ ವೆಂಟಿಲೇಟರ್, ಐಸಿಯು ವೆಡ್ ಮಾಡಿದ್ದೇವೆ. ರಾಜ್ಯ ಸರ್ಕಾರ ನಿಗದಿಪಡಿಸಿದಗಿಂತ ಕಡಿಮೆ ದರದಲ್ಲಿ ಚಿಕಿತ್ಸೆ ಕೊಡುತ್ತಿದ್ದೇವೆ. ಉದಾಃ ೧೪ ಸಾವಿರ ರೂ. ಇದ್ದರೆ ೭ ಸಾವಿರ ರೂ. ೧೦ ಸಾವಿರ ರೂ. ಇದ್ದರೆ ೩ ಸಾವಿರ ಪಡೆಯುತ್ತಿದ್ದೇವೆ. ಈ ಸಮಯದಲ್ಲಿ ಮಾನವೀಯತೆ ಮುಖ್ಯವಾಗಿದೆ. 

ಮಾಜಿ ಶಾಸಕರಾದ ವಾಸು, ಕಳಲೆ ಕೇಶವಮೂರ್ತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್, ಉಪಾಧ್ಯಕ್ಷ ಹೆಡತಲೆ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್, ತಾಪಂ ಮಾಜಿ ಸದಸ್ಯ ಪದ್ಮನಾಭ, ಉತ್ತನಹಳ್ಳಿ ಶಿವಣ್ಣ, ಶ್ರೀಧರ್ ಗೌಡ, ಹೇಮಂತ್, ಎನ್.ಆರ್.ಎಂ.ಮಂಜು, ಕನಕಮೂರ್ತಿ ಭಾಗವಹಿಸಿದ್ದರು. 

Leave a Reply

Your email address will not be published. Required fields are marked *