ಬೆಂಗಳೂರು: ಆರೋಗ್ಯದ ಸಮಸ್ಯೆ ಕಾಣಿಸಿಕೊಂಡಾಗ ಕೆಲವು ಮಾತ್ರೆಗಳು ಸೇರಿದಂತೆ ಹಲವು ರೀತಿಯ ಔಷಧಿಗಳನ್ನು ಸೇವಿಸುವುದು ಬಹುತೇಕರಿಗೆ ರೂಢಿಯಾಗಿದೆ. ಆದರೆ ಈ ನಡುವೆಕರ್ನಾಟಕ ಔಷಧ ಪರೀಕ್ಷಾ ಪ್ರಯೋಗಾಲಯದ ಸರ್ಕಾರಿ ವಿಶ್ಲೇಷಕರು ಹಲವು ಔಷಧಿ ಮತ್ತು ಕಾಂತಿ ವರ್ಧಕ ಗಳು ಗುಣಮಟ್ಟದಿಂದ ಕೂಡಿಲ್ಲ ಎಂಬುದನ್ನು ಬಹಿರಂಗ ಪಡಿಸಿದ ಹಿನ್ನಲೆಯಲ್ಲಿ ಅವುಗಳನ್ನು ಮಾರಾಟ ಮಾಡದಂತೆ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.

ರೋಗಿಗಳು ಯಾರೇ ಆಗಲಿ ನಿಮಗೆ ವೈದ್ಯರು ನೀಡುವ ಮಾತ್ರೆಗಳು ಯಾವುದೇ ಇರಲಿ ಅದನ್ನು ಒಮ್ಮೆ ಗೂಗಲ್ ನಲ್ಲಿ ಪರಿಶೀಲಿಸಿದರೆ ಅದರ ಉಪಯೋಗ ಮತ್ತು ಅದರಿಂದ ವ್ಯತಿರಿಕ್ತ ಪರಿಣಾಮ ಇದೆಯಾ ಎಂಬುದು ಅರಿವಿಗೆ ಬಂದು ಬಿಡುತ್ತದೆ. ಅಷ್ಟೇ ಅಲ್ಲ ಇದೀಗ ನಿಷೇಧ ಮಾಡಿರುವ ಒಂದಷ್ಟು ಮಾತ್ರೆ ಮತ್ತು ಕಾಂತಿ ವರ್ಧಕಗಳ ವಿವರಗಳು ಇಲ್ಲಿವೆ.
ಲೈಫ್‍ಕೇರ್ ಪಾರ್‍ಮುಲೇಷನ್ಸ್ ಪ್ರೈ.ಲಿಮಿಟೆಡ್‍ನ ಗ್ಲಿಮಿಪ್ರೇಮ್- ಎಮ್ 3 (ಗ್ಲಿಮೀಫಿರೈಡ್ ಅಂಡ್ ಮೆಟಪಾರ್‍ಮಿನ್), ಹೈಡ್ರೋಕ್ಲೋರೈಡ್ (ಎಸ್‍ಆರ್) ಟ್ಯಾಬ್ಲೆಟ್, ಬ್ಯಾಚ್ ಸಂ, 1486009 T, D/M: 11/2020 D/E: 10/2022, ಮೆ. ರಿಮೋನ್ ಪಾರ್ಮಾಸಿಟಿಕಲ್ಸ್‍ನ ಓಪ್ಲಕ್ಸಿನ್ & ಓರ್ನಿಡಜೋಲ್ ಟ್ಯಾಬ್ಲೆಟ್ ಐ.ಪಿ (ರೈಪ್ಲಾಕ್ಸ್-ಓ), ಬ್ಯಾಚ್ ಸಂ, RT20398, D/M: Oct/2020 D/E: Sep/2022, ಮೆ ಪಾಕ್‍ಸನ್ಸ್ ಪಾರ್ಮಾಸಿಟಿಕಲ್ಸ್‍ನ ಫ್ರೂಲಿಕ್ಸ್ 10 ಎಮ್ ಜಿ (ಫ್ರೂಸಿಮೈಡ್ ಇನ್‍ಜೆಕ್ಷನ್ ಐ.ಪಿ) ಬ್ಯಾಚ್ ಸಂ, P3L459, D/M :01/2021 D/E: 01/2023, ಮೆ ಪಾಕ್‍ಸನ್ಸ್ ಪಾರ್ಮಾಸಿಟಿಕಲ್ಸ್‍ನ ಫ್ರೂಲಿಕ್ಸ್ 10 ಎಮ್ ಜಿ (ಫ್ರೂಸಿಮೈಡ್ ಇನ್‍ಜೆಕ್ಷನ್ ಐ.ಪಿ) ಬ್ಯಾಚ್ ಸಂ, P3L19481, D/M :01/2020 D/E: 01/2022, ಮಾರ್ಕೆಟೆಡ್ ಬೈ, ಮೆ. ಗ್ರಾಮ್‍ಕಾರ್ಪ್ ಪ್ರೈ ಲಿಮಿಟೆಡ್‍ನ ಅಲ್ಕೋಹಾಲ್ ಬೆಸದಡ್ ಹ್ಯಾಂಡ್ ರಬ್ ಡಿಸ್‍ಇನ್‍ಫೆಕ್ಟಂಟ್ (ಡೊಂಟ್‍ವರಿ ಹ್ಯಾಂಡ್‍ರಬ್) ಬ್ಯಾಚ್ ಸಂ, CSL-HB-032020, D/M : Mar / 2021 D/E: Mar /2022, ಮೆ. ಟ್ಯಾಲೆಂಟ್ ಹೆಲ್ತ್‍ಕೇರ್‍ನ ಲೋರ್ಸಟನ್ ಪೋಟ್ಯಾಷಿಯಂ & ಆಮ್ಲೋಡಿಫೈನ್ ಟ್ಯಾಬ್ಲೆಟ್ ಐಸಿ (ಲೋಸ್ಟಲ್-ಎ) ಬ್ಯಾಚ್ ಸಂ, N2002009, D/M :Feb/2020 D/E: Jan/2023 ಹಾಗೂ ಮೆ. ಮಾರ್ಟಿನ್ & ಬ್ರೌನ್ ಬಯೋ ಸೈನ್ಸ್‍ಸ್‍ನ ಮೆಟ್ರೋನಿಡಜೋನ್ ಟ್ಯಾಬ್ಲೆಟ್ ಐಪಿ (ಮೆಟ್ರೋಲೆಂಟ್-400) ಬ್ಯಾಚ್ ಸಂ, MT 20B04, D/M : 02/2020 D/E: 01/2022 ನ್ನು ನಿಷೇಧಿಸಲಾಗಿದೆ.
ಈ ಮಾತ್ರೆ ಮತ್ತು ಕಾಂತಿ ವರ್ಧಕಗಳನ್ನು ಕರ್ನಾಟಕ ರಾಜ್ಯದ ಔಷಧ ನಿಯಂತ್ರಕರೇ ಗುಣಮಟ್ಟವಲ್ಲದ ಔಷಧಿಗಳಾಗಿದ್ದು, ಔಷಧ ವ್ಯಾಪಾರಿಗಳು, ಸಗಟು ಔಷಧ ಮಾರಾಟಗಾರರು, ವೈದ್ಯರು, ಆಸ್ಪತ್ರೆ ಮತ್ತು ನರ್ಸಿಂಗ್ ಹೋಂನವರು ದಾಸ್ತಾನು ಮಾಡುವುದಾಗಲೀ, ಮಾರಾಟ ಮಾಡುವುದಾಗಲೀ ಅಥವಾ ಉಪಯೋಗಿಸುವುದಾಗಲೀ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ.
ಒಂದು ವೇಳೆ ಯಾರಾದರೂ ಈ ಔಷಧಿಗಳ ದಾಸ್ತಾನನ್ನು ಹೊಂದಿದ್ದಲ್ಲಿ ಕೂಡಲೇ ಸಂಬಂಧಪಟ್ಟ ಕ್ಷೇತ್ರದ ಔಷಧ ಪರಿವೀಕ್ಷಕರು ಅಥವಾ ಸಹಾಯಕ ಔಷಧ ನಿಯಂತ್ರಕರ ಗಮನಕ್ಕೆ ತರುವಂತೆಯೂ ಅಲ್ಲದೆ ಸಾರ್ವಜನಿಕರು ಈ ಔಷಧ, ಕಾಂತಿವರ್ಧಕಗಳನ್ನು ಉಪಯೋಗಿಸದಂತೆ ಸೂಚಿಸಲಾಗಿದೆ. ಆದ್ದರಿಂದ ರೋಗಿಗಳಿಗೆ ಮಾತ್ರೆ ಸೇವಿಸುವ ಮುನ್ನ ಪರಿಶೀಲಿಸುವುದು ಒಳ್ಳೆಯದು.