ಬೆಂಗಳೂರು: ಟೋಕಿಯೋ ಒಲಂಪಿಕ್ಸ್ ನಲ್ಲಿ ಸಾಧನೆ ಗೈಯ್ಯುವ ಕ್ರೀಡಾ ಸಾಧಕರನ್ನು ಪ್ರೋತ್ಸಾಹಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಚಿನ್ನದ ಪದಕ ಪಡೆಯುವ ಕ್ರೀಡಾಪಟುವಿಗೆ 5 ಕೋಟಿ ರೂ. ಪ್ರೋತ್ಸಾಹ ಧನ ನೀಡುವುದಾಗಿ ಘೋಷಣೆ ಮಾಡಲಾಗಿದೆ.
ಈ ವಿಷಯವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸರ್ಕಾರದ ಎರಡು ವರ್ಷದ ಸಾಧನಾ ಸಮಾವೇಶದಲ್ಲಿ ಈ ವಿಷಯವನ್ನು ಘೋಷಿಸಿದ್ದಾರೆ. ಬೆಳ್ಳಿ ಪದಕ ಪಡೆಯುವವರಿಗೆ 3 ಕೋಟಿ, ಕಂಚು ಪಡೆದವರಿಗೆ 2 ಕೋಟಿ ನೀಡಲಾಗುವುದು ಎಂದು ಹೇಳಿದರು.
ಒಂದು ವೇಳೆ ಹೊರ ರಾಜ್ಯದವರು ಪದಕ ಪಡೆದರೆ ಅವರನ್ನು ಕೂಡ ಪ್ರೋತ್ಸಾಹಿಸುವ ಸಲುವಾಗಿ ಚಿನ್ನ ಪಡೆದವರಿಗೆ 15 ಲಕ್ಷ, ಬೆಳ್ಳಿ 10 ಮತ್ತು ಕಂಚು ಪದಕ ಪಡೆದವರಿಗೆ 5 ಲಕ್ಷ ರೂ. ಪ್ರೋತ್ಸಾಹ ಧನವನ್ನು ಕರ್ನಾಟಕದ ಕೊಡುಗೆಯಾಗಿ ನೀಡುವುದಾಗಿ ತಿಳಿಸಿದರು.