ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನದ ಹತ್ತಿರ ಅಪರಿಚಿತ ಶವ ಪತ್ತೆ

                ಮೈಸೂರು ಜನವರಿ 18:- ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕಳೆದ ೨ ವರ್ಷಗಳಿಂದ ಕೆಲಸ ಮಾಡಿಕೊಂಡಿರುತ್ತಾರೆ. ಕಪಿಲಾ ನದಿಯ ಪಕ್ಕದಲ್ಲಿರುವ ಮುಡಿಕಟ್ಟೆ ಬಳಿ ಇರುವ ಸೇತುವೆ ಹತ್ತಿರ ಸುಮಾರು 70 ವರ್ಷದ ಅಪರಿಚಿತ ವ್ಯಕ್ತಿಯು ಅನಾರೋಗ್ಯದಿಂದ ನರಳುತ್ತಿದ್ದನ್ನು ಕಂಡು ಸ್ಥಳೀಯರು ಅಂಬುಲೆನ್ಸ್ ಗೆ ಕರೆ ಮಾಡಿ ಕೆ.ಆರ್.ಆಸ್ಪತ್ರೆಗೆ ದಾಖಲಿಸಿರುತ್ತಾರೆ ಚಿಕಿತ್ಸೆ ಫಲಕಾರಿಯಾಗದೆ 2022 ರ ಜನವರಿ 14 ರಂದು ಬೆಳಿಗ್ಗೆ ಮೈಸೂರು ನಗರದ ಕೆ.ಆರ್.ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ.

                 ಮೃತರ ಪಾರ್ಥಿವ ಶರೀರವವನ್ನು ಕೆ.ಆರ್.ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ಪೊಲೀಸ್ ಠಾಣೆಯಲ್ಲಿ ಕಲಂ-124ರ ಸಿಆರ್‌ಪಿಸಿ ಅನ್ವಯ ಪ್ರಕರಣ ದಾಖಲಾಗಿದೆ.

                ಮೃತರ ಚಹರೆ ಇಂತಿದೆ: ಮೃತ ವ್ಯಕ್ತಿಯು 5.5 ಅಡಿ ಎತ್ತರವಿದ್ದು, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಬಣ್ಣ, ಬೊಕ್ಕತಲೆ ಹಾಗೂ ಸಣಕಲು ದೇಹ ಹೊಂದಿರುತ್ತಾರೆ. ಬಿಳಿಗಡ್ಡ ಮೀಸೆ ಬಿಟ್ಟಿರುತ್ತಾರೆ. ಮಾಸಲು ಬಣ್ಣದ ಬಿಳಿ ತುಂಬುತೋಳಿನ ಶರ್ಟ್ ಧರಿಸಿರುತ್ತಾರೆ. ಶರ್ಟ್ ಮೇಲೆ ಬ್ರೌನ್ ಕಲರಿನ ಅರ್ಧ ತೋಳಿನ ಸ್ವೆಟರ್ ಧರಿಸಿರುತ್ತಾರೆ.        

ವಾರಸುದಾರರಿದ್ದಲ್ಲಿ ನಂಜನಗೂಡು ಪೊಲೀಸ್ ಠಾಣೆಯ ಎಸ್.ಪಿ. ಸಾಹೇಬರ ದೂರವಾಣಿ ಸಂಖ್ಯೆ 0821-2522240, ಮೈಸೂರು ಜಿಲ್ಲಾ ನಿಸ್ತಂತು ಕೊಠಡಿ ದೂರವಾಣಿ ಸಂಖ್ಯೆ ೦೮೨೧-೨೪೪೪೮೦೦ ಅಥವಾ ನಂಜನಗೂಡು ಪಟ್ಟಣ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ ೦೮೨೨೧-೨೨೮೩೮೩ಮೂಲಕ ಸಂಪರ್ಕಿಸುವAತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

                ಹೆಚ್ಚಿನ ಮಾಹಿತಿಗಾಗಿ  nanjangudtownmys@ksp.gov.in    ಅನ್ನು ಸಂಪರ್ಕಿಸುವಂತೆ ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯ ಆರಕ್ಷಕ ಉಪ-ನಿರೀಕ್ಷಕರು ನಂಜನಗೂಡು, ಮೈಸೂರು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾg