ಐ ಎಲ್ ವೈ ಎಫ್ ವತಿಯಿಂದ ಮೈಸೂರಿನಲ್ಲಿ ವೀರಶೈವ ಲಿಂಗಾಯತ ಗ್ಲೋಬಲ್ ಬ್ಯುಸಿನೆಸ್ ಸಮಾವೇಶ 2025

ಮೈಸೂರು :- ಲಾಭರಹಿತ ಸಾರ್ವಜನಿಕ ಸಾಮಾಜಿಕ ಟ್ರಸ್ಟ್ ಆದ ಅಂತರರಾಷ್ಟ್ರೀಯ ಲಿಂಗಾಯತ ಯೂತ್ ಫೋರಂ ವತಿಯಿಂದ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಮೂರು ದಿನಗಳ ವೀರಶೈವ ಲಿಂಗಾಯತ ಗ್ಲೋಬಲ್ ಬಿಸಿನೆಸ್ ಕಾಸ್ಟ್ರೇವ್ – 2025 ಅನ್ನು ಜನವರಿ 17 ರಿಂದ 19 ರವರೆಗೆ ಆಯೋಜಿಸಲಾಗಿದೆ.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೀರಶೈವ ಲಿಂಗಾಯತ ಗ್ಲೋಬಲ್ ಬ್ಯುಸಿನೆಸ್ ಕಾನ್‌ಪ್ಲೇವ್‌ನ ಸಂಚಾಲಕರು, ‘ಈ ಸಮಾವೇಶವು ಎಲ್ಲಾ ವೀರಶೈವ ಲಿಂಗಾಯತ ಸಮದಾಯದ ಉದ್ಯಮಿಗಳನ್ನು ವೃತ್ತಿಪರರನ್ನು ಒಂದೇ ವೇದಿಕೆಗೆ ತರುವ ಮತ್ತು ಆರ್ಥಿಕ, ಕೈಗಾರಿಕೆ, ವ್ಯಾಪಾರ ಚಟುವಟಿಕೆಗಳನ್ನು ಉತ್ತಮಗೊಳಿಸುವ ಉದ್ದೇಶವನ್ನು ಹೊಂದಿದೆ. ಮೂರು ದಿನಗಳ ಕಾಲ ಮಹಾರಾಜ ಗೌಂಡ್ಸ್‌ನಲ್ಲಿ ಕಾಸ್ಟೇವ್ ನಡೆಯುತ್ತದೆ. ದೇಶದ ವಿವಿಧ ಭಾಗಗಳಿಂದ ಬರುವ ಹಲವಾರು ಜನರನ್ನು, ವೃತ್ತಿಪರರನ್ನು ಹಾಗೂ ಉದ್ಯಮಿಗಳನ್ನು ಭೇಟಿ ಮಾಡಲು ಸಹಾಯವಾಗುವ ಕಾರ್ಯಕ್ರಮ ಇದು. ಅನೇಕ ಉದ್ಯಮಿಗಳು ಮತ್ತು ಕಲಾವಿದರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಇದು ಅತ್ಯುತ್ತಮ ವೇದಿಕೆಯೂ ಹೌದು. ಕಾನ್‌ ಪ್ಲೇವ್‌ನಲ್ಲಿ ಮೂರು ದಿನವೂ ಸಂಜೆ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ವಿವಿಧ ಮಳಿಗೆಗಳು, ಚರ್ಚಾ ಕಾರ್ಯಕ್ರಮಗಳು ಮತ್ತು ಇತರ ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ ಎಂದು ಹೇಳಿದರು.

ಮೈಸೂರಿನಲ್ಲಿ ಏಕೆ?:

ಮೈಸೂರು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮಾತ್ರವಲ್ಲದೆ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಕರ್ನಾಟಕದ ನಗರಗಳಲ್ಲಿ ಒಂದಾಗಿದೆ. ಹಿಂದೆಂದೂ ಕಾಣದ ರೀತಿಯಲ್ಲಿ ಮೈಸೂರು ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿ ಹೊಂದುತ್ತಿದೆ. ಈ ಸಮಾದೇಶವು ಜಾಗತಿಕ ಹಂತದಲ್ಲಿ ನಗರದ ಸಾಮರ್ಥ್ಯವನ್ನು ಪ್ರದರ್ಶಿಸುವ ಗುರಿಯನ್ನು ಹೊಂದಿದೆ. ಮೈಸೂರಿನತ್ತ ಹೂಡಿಕೆದಾರರನ್ನು ಆಕರ್ಷಿಸುವುದು, ವ್ಯಾಪಾರ-ವಹಿವಾಟು ಹೆಚ್ಚಾಗುವಂತೆ ಮಾಡುವುದು ಹಾಗೂ ನಗರದ ಒಟ್ಟಾರೆ ಉನ್ನತೀಕರಣ ಈ ಸಮಾವೇಶದ ಮುಖ್ಯ ಉದ್ದೇಶ. ಈ ಸಮಾವೇಶವು ಮುಖ್ಯವಾಗಿ ಮಹಿಳಾ ಉದ್ಯಮಶೀಲತೆ, ಮೈಕ್ರೋ ಎಂಟ‌ರ್ ಪ್ರೈಸಸ್ (ಸಣ್ಣ ಕೈಗಾರಿಕೆಗಳು) ಮತ್ತು ಮೈಸೂರಿನ ಸಾಂಸ್ಕೃತಿಕತೆಯ ಮೇಲೆ ಕೇಂದ್ರೀಕೃತವಾಗಿರುತ್ತದೆ.

ಸಮಾದೇಶದ ಮುಖ್ಯಾಂಶಗಳು ಹೀಗಿವೆ:

  1. ಕರ್ನಾಟಕ ಸರ್ಕಾರವು ಕಲ್ಪಿಸಿರುವ ಕ್ಲಸ್ಟರ್ ಆಧಾರಿತ ವಿಧಾನವನ್ನು ಕೈಗಾರಿಕೋದ್ಯಮಿಗಳು, ಉದ್ಯಮಿಗಳು ಹಾಗೂ ಕೃಷಿ ಸಮುದಾಯಗಳ ಪೈಕಿ ಪ್ರಚಲಿತಗೊಳಿಸುವುದು.
  2. ಸ್ಟಾರ್ಟ್ ಆಪ್‌ಗಳ ಬಲಪಡಿಸುವಿಕೆ, ಜಿಲ್ಲಾ ಮಟ್ಟದಲ್ಲಿ ಮಹಿಳಾ ಉದ್ಯಮಶೀಲತೆ ಹಾಗೂ ಯುವ ಉದ್ಯಮಶೀಲತೆ ಹೆಚ್ಚಿಸುವ ನಿಟ್ಟಿನಲ್ಲಿ ಮಾರ್ಗದರ್ಶನ.
  3. ವಿವಿಧ ಉತ್ಪನ್ನಗಳು ಹಾಗೂ ಸೇವೆಗಳನ್ನು ಮಳಿಗೆಗಳಲ್ಲಿ ಪ್ರದರ್ಶಿಸುವ ಮೂಲಕ ಹಾಗೂ ವಿವಿಧ ಕಾರ್ಯಕ್ರಮಗಳ ಮೂಲಕ ಮೈಸೂರಿನ ಸಾಮರ್ಥ್ಯವನ್ನು ಪ್ರದರ್ಶಿಸುವುದು.
  4. ಅನುಭವಿ ಉದ್ಯಮಿಗಳು, ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ಉದ್ಯಮಿಗಳು, ಅಧಿಕಾರಿಗಳು ಮತ್ತಿತತರನ್ನು ಒಳಗೊಂಡ ಉಪಯುಕ್ತ ಚರ್ಚೆಗಳು.
  5. ವೀರಶೈವ ಲಿಂಗಾಯತ ಸಮುದಾಯದ ಶಕ್ತಿ ಹಾಗೂ ಮೈಸೂರಿನ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರದರ್ಶಿಸುವುದು.
  6. ಜಗತ್ತಿನಾದ್ಯಂತ ಇರುವ ಇತರ ವೀರಶೈವ ಲಿಂಗಾಯತ ಸಂಘಗಳ ಮೂಲಕ ಜಾಗತಿಕ ಪ್ರೇಕ್ಷಕರನ್ನು ತಲುಪುವುದು.
  1. 2013 ರಲ್ಲಿ ಪ್ರಾರಂಭವಾದ iLYF, 2023 ರಲ್ಲಿ ತನ್ನ 10 ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದೆ. ಸಮಾನ ಮನಸ್ಯ ಪ್ರಗತಿಪರ ಯುವ ಉದ್ಯಮಿಗಳಿಗೆ iLYF ಬಹಳ ವರ್ಷಗಳಿಂದ ವೃತ್ತಿಪರ ತರಬೇತಿ ನೀಡುತ್ತಾ ಜ್ಞಾನ ಮತ್ತು ಸಂಪನ್ಮೂಲಗಳನ್ನು ಹಂಚಿಕೆ ಮಾಡುತ್ತಿದೆ. ಈಗ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮತ್ತು ಬಸವ ಸಮಿತಿಯ ಬೆಂಬಲದೊಂದಿಗೆ ಈ ಸಮಾವೇಶವನ್ನು ಆಯೋಜಿಸುತ್ತಿದೆ. iLYF ಅನ್ನು ರಾಜಕೀಯ ರಹಿತ ಹಾಗೂ ಧಾರ್ಮಿಕ ರಹಿತ ಚಟುವಟಿಕೆಗಳಿಗೆಂದೇ ರೂಪಿಸಲಾಗಿದೆ. ಇದರ ಮುಖ್ಯ ಉದ್ದೇಶವು ಉದ್ಯಮಶೀಲತೆಯ ನೀತಿಯನ್ನು ಬೆಳೆಸುವುದು, ಯುವಕರ ಸಾಮಾಜಿಕ-ಆರ್ಥಿಕ ಸಬಲೀಕರಣವನ್ನು ಪೋಷಿಸುವುದು ಮತ್ತು ರಾಷ್ಟ್ರ ನಿರ್ಮಾಣದ ಉದ್ದೇಶದೊಂದಿಗೆ ವಿವಿಧ ಸಾಮಾಜಿಕ ಚಟುವಟಿಕೆಗಳನ್ನು ಮಾಡುವುದು.
  2. 2023ರಲ್ಲಿ ಮೊದಲ ಬಾರಿಗೆ ಗ್ಲೋಬಲ್ ಬ್ಯುಸಿನೆಸ್ ಕಾನ್‌ಪ್ಲೇವ್ ಅನ್ನು ಬೆಂಗಳೂರಿನಲ್ಲಿ ಹಾಗೂ 2024ರಲ್ಲಿ ಹುಬ್ಬಳ್ಳಿಯಲ್ಲಿ ಯಶಸ್ವಿಯಾಗಿ ನಡೆಸಲಾಗಿತ್ತು.
  3. ವಾಣಿಜ್ಯೋದ್ಯಮಿಗಳು, ಅಧಿಕಾರಿಗಳು, ಯುವ ಹಾಗೂ ಮಹಿಳಾ ಉದ್ಯಮಿಗಳು, ಸಾಂಸ್ಕೃತಿಕ ಪ್ರತಿಭೆಗಳು, ವೀರಶೈವ ಲಿಂಗಾಯತ ಸಮುದಾಯದ ಸದಸ್ಯರು, ಮಾಧ್ಯಮ ಮಿತ್ರರು ಹಾಗೂ ಮೈಸೂರಿಗರೆಲ್ಲರನ್ನೂ ಸಮಾವೇಶಕ್ಕೆ iLYF ಹೃತ್ತೂರ್ವಕವಾಗಿ ಸ್ವಾಗತಿಸುತ್ತದೆ ಎಂದು ಕಾರ್ಯಕ್ರಮದ ಸಂಯೋಜಕರು ತಿಳಿಸಿದರು.
  4. ಪತ್ರಿಕಾಗೋಷ್ಠಿಯಲ್ಲಿ ILYF ಸಂಸ್ಥಾಪಕರಾದ ಸಂತೋಷ ಕೆಂಚಾಂಬ, ಅವಿನಾಶ್ ಪಾಲೇಗಾರ್, iLYF ಮೈಸೂರು ಅಧ್ಯಕ್ಷರಾದ ಮಹದೇವ ಪ್ರಸಾದ್, ಮಾಜಿ ಅಧ್ಯಕ್ಷರಾದ ಬಿ.ಎಸ್.ಪ್ರಶಾಂತ್ ಮತ್ತಿತರರು ಉಪಸ್ಥಿತರಿದ್ದರು.