ರಿಯಾಲಿಟಿ ಶೋನಲ್ಲಿ ಜಡ್ಜ ಅಗಿದ್ದ ಚಿತ್ರರಂಗದ ಹಿರಿಯ ನಟಿ ತಾರಾ ದುಖಃ ವ್ಯಕ್ತಪಡಿಸಿದ್ದಾರೆ: ತಾರಾ ಕಂಬನಿ
ನಿನ್ನೆ ಭೀಕರ ರಸ್ತೆ ಅಪಘಾತದಲ್ಲಿ ನನ್ನಮ್ಮ ಸೂಪರ್ ಸ್ಟಾರ್ ಸ್ಪರ್ಧಿ ಸಮನ್ವಿ ಕಾರ್ಯಕ್ರಮದ ಜಡ್ಜ ಅಗಿದ್ದ ಚಿತ್ರರಂಗದ ಹಿರಿಯ ನಟಿ ತಾರಾ ದುಖಃ ವ್ಯಕ್ತಪಡಿಸಿದ್ದಾರೆ.

ರಿಯಾಲಿಟಿ ಶೋನಲ್ಲಿ ಸಮನ್ವಿ ಅಧ್ಬುತ ಪ್ರತಿಭಾವಂತೆ. ಮಾಡೆಲ್ ರೀತಿಯಲ್ಲಿ ಶೋನಲ್ಲಿ ಕಂಡುಬರುತ್ತಿದ್ದಳು. ಅವಳು ಇಲ್ಲಾ ಎಂಬ ಸುದ್ದಿಯನ್ನು ನನಗೆ ನಂಬುವುದಕ್ಕೇ ಆಗುತ್ತಿಲ್ಲ. ನನ್ನ ಮನಸ್ಸಿಗೆ ತುಂಬಾ ನೋವಾಗುತ್ತಿದೆ ಎಂದು ನಟಿ ತಾರ ವಿಷಾದಿಸಿದ್ದಾರೆ.
ನಾನು ಇಂದು ಬೆಂಗಳೂರಿನಲ್ಲಿಲ್ಲ, ಹೊರಗಡೆ ಇದ್ದೇನೆ. ನನಗೆ ಒಂದೇ ಸಮನೆ ನನಗೆ ಫೋನ್ ಕರೆಗಳು ಬರುತ್ತಿದ್ದವು. ಏನು ಅಂತ ವಿಚಾರಿಸಿದಾಗ ಸಮನ್ವಿ ಇಲ್ಲ ಅಂತ ಹೇಳಿದರು. ತಾಯಿ-ಮಕ್ಕಳು ನಮ್ಮ ಕುಟುಂಬದ ಸದಸ್ಯರೇ ಆಗಿದ್ದರು.
ಸಮನ್ವಿ ತಾಯಿ ಅಮೃತಾ ನಾಯ್ಡು ಈಗ ತುಂಬು ಗರ್ಭಿಣಿಯಾಗಿದ್ದಾರೆ. ರಿಯಾಲಿಟಿ ಶೋನಲ್ಲಿ ಅವಳಿಂದ ಹೆಚ್ಚು ಡ್ಯಾನ್ಸ್ ಮಾಡಿಸಲು ಆಗುತ್ತಿರಲಿಲ್ಲಾ . ಆಕೆಗೆ ನಾವು ತುಂಬಾ ಒತ್ತಡ ಹಾಕಿದಂತಾಗುತ್ತದೆ ಎಂಬದಕ್ಕೋಸ್ಕರ ಶೋನಿಂದ ಎಲಿಮಿನೇಷನ್ ಮಾಡಿದ್ದೆವು. ಅದಾದ ಬಳಿಕವೂ ಒಮ್ಮೆ ನನ್ನನ್ನು ಭೇಟಿಯಾಗಬೇಕು ನನ್ನ ಜೊತೆ ಮಾತನಾಡಬೇಕು ಎನ್ನುತ್ತಿದ್ದಳು. ನನಗೆ ನಿಮ್ಮ ಮನೆಯ ವಿಳಾಸ ಕಳುಹಿಸಿ, ನಾನೇ ಕಾರು ಕಳುಹಿಸುತ್ತೇನೆ ಎಂದು ತಿಳಿಸಿದ್ದೆ. ಇಲ್ಲ ಅಮ್ಮ ಇನ್ನೊಮ್ಮೆ ಭೇಟಿಯಾಗುತ್ತೇನೆ ಎಂದಿದ್ದಳು. ಆಗ ಸಮನ್ವಿ ಕೂಡ ನನ್ನ ಜೊತೆ ಮಾತನಾಡಿದ್ದಳು ಎಂದು ನೆನೆಯುತ್ತಾ ತಾರಾ ದುಃಖ ವ್ಯಕ್ತಪಡಿಸಿದ್ದಾರೆ