ಉತ್ತಮ ಟೆಲಿಕಾಂ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ವಿಐ ಸೇವಾ ಕಂಪನಿ

ಜಿಯೋದಂತಹ ಇತರೆ ಟೆಲಿಕಾಂ ಕಂಪನಿಗಳಿಗೆ ಸ್ಪರ್ಧೆಯೊಡ್ಡಲು ಹಾಗೂ ಮುಖ್ಯವಾಗಿ ಗ್ರಾಮಾಂತರ ಪ್ರದೇಶದ ಗ್ರಾಹಕರಿಗೆ ಉತ್ತಮ ಟೆಲಿಕಾಂ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ವಿಐ ಸೇವಾ ಕಂಪನಿ ಬಳಕೆದಾರರ ಡೇಟಾ ವೇತ ಮತ್ತು ಸೇವಾ ವ್ಯಾಪ್ತಿ ಹೆಚ್ಚಳಕ್ಕಾಗಿ ನೆಟ್‌ವರ್ಕ್ ಮೂಲ ಸೌಕರ್ಯ ವೃದ್ಧಿಸುವ ಕ್ರಮ ಕೈಗೊಂಡಿದೆ ಎಂದು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅಭಿಜಿತ್ ಕಿಶೋರ್ ತಿಳಿಸಿದರು.

ನಗರದ ಖಾಸಗಿ ಹೋಟೆಲೊಂದರಲ್ಲಿ ಸುದ್ದಿಗಾರರೊಡನೆ ಮಾತನಾಡಿ, ಈ ನಿಟ್ಟಿನಲ್ಲಿ ವಿಐ ಎಟಿಇ ೨೧೦೦ ಎಂಎಚ್‌ಝಡ್ ಬ್ಯಾಂಡ್ ಸಾಮರ್ಥ್ಯವನ್ನು ಐದು ಎಂಎಚ್‌ಝಡ್‌ನಿAದ ೧೦ ಎಂಎಚ್‌ಝಡ್‌ಗೆ ವಿಸ್ತರಿಸಿದೆ. ಇದರಿಂದಾಗಿ ನಗರ ಹಾಗೂ ಸುತ್ತಮುತ್ತಲಿನ ಗ್ರಾಮಾಂತರ ಪ್ರದೇಶದ ಗ್ರಾಹಕರಿಗೆ ತ್ವರಿತ ಗತಿಯ ಸಂಪರ್ಕ ಜಾಲ ಮತ್ತು ಸುಧಾರಿತ ಅಂತರ್ಜಾಲ ಜಾಲಾಡುವ ಅನುಕೂಲ ದೊರೆತಿದೆ ಎಂದರು.

4ಜಿ ಸೇವಾ ವ್ಯಾಪ್ತಿ ವಿಸ್ತರಿಸುವ ಮೂಲಕ ಮತ್ತು ಡೇಟಾ ವೇಗವನ್ನು ಹೆಚ್ಚಿಸುವ ಮೂಲಕ ನಮ್ಮ ಗ್ರಾಹಕರಿಗೆ ಅತ್ಯುತ್ತಮ ನೆಟ್‌ವರ್ಕ್ ಸೌಲಭ್ಯ  ನೀಡುವುದು ನಮ್ಮ ಉದ್ದೇಶವಾಗಿದೆ. ಗ್ರಾಹಕರು ಉತ್ತಮ ಆಯ್ಕೆಗಳನ್ನು ಬಯಸಿದಂತೆ, ವಿಭಿನ್ನ ಸೌಲಭ್ಯ ಒದಗಿಸಲು ಡಿಜಿಟಲ್ ಪೂರಕ ವ್ಯವಸ್ಥೆಯನ್ನು ನಿರ್ಮಿಸಿದ್ದೇವೆ ಗೇಮಿಂಗ್, ಮನರಂಜನೆ, ಕೌಡ್ ಗೇಮಿಂಗ್, ನಾಗರಿಕ ಸೇವೆಗಳ ಬಿಲ್ ಪಾವತಿ ಸೇರಿದಂತೆ ಗ್ರಾಹಕರಿಗೆ ಉಪಯುಕ್ತಕರವಾದ ವಿವಿಧ ಸೌಲಭ್ಯಗಳನ್ನು ಒದಗಿಸುವ ಮೂಲಕ ವಿಅಪ್ಲಿಕೇಷನ್ (ಆ?ಯಪ್) ಬಹು-ಉಪಯುಕ್ತ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.

ವಿದ್ಯುತ್, ನೀರು, ಎಲ್‌ಪಿಜಿ ಫಾಸ್ಮಾಗ್ ರೀಚಾರ್ಜ್ಗಳು ಮತ್ತು ಇನ್ನಷ್ಟು.ಅನಿಯಮಿತ ರಾತ್ರಿ ಸಮಯದ (ಬೆಳಿಗ್ಗೆ ೧೨ ರಿಂದ ೬ ಗಂಟೆಯವರೆಗೆ) ಡೇಟಾ, ಅನಿಯಮಿತ ಕರೆ, ಡೇಟಾ ರೋಲ್ ಓವರ್ ಮತ್ತು ಉಚಿತ ಒಟಿಟಿ ಚಂದಾದಾರಿಕೆ ಸ್ಟಿçÃಮಿಂಗ್ ಪ್ರಯೋಜನ ಒದಗಿಸಲಾಗಿದೆ.

ಇದರೊಡನೆ ಉತ್ತಮ ರಿಚಾರ್ಜ್ ಹಾಗೂ ಇನ್ನಿತರ ಪೋಸ್ಟ್ಪೇಯ್ಡ್ ಸೌಲಭ್ಯಗಳಿದ್ದು, ಇಲ್ಲಿನ ಗ್ರಾಹಕರು ಜಾಗತಿಕ ಮಟ್ಟದ ಪ್ರಯೋಜನ ಪಡೆಯಬಹುದಾಗಿದೆ ಎಂದು ತಿಳಿಸಿದರು.