ವರದಿ : ಇರ್ಫಾನ್ ಯಳಂದೂರು
ರೈತರಿಗೆ ಅನುಕೂಲವಾಗುವ ಉದ್ದೇಶದಿಂದ ಯಾವ ಯಾವ ಭಾಗದ ಮಣ್ಣಿನಲ್ಲಿ ಯಾವ ಯಾವ ಬೆಳೆ ಬೆಳೆಯಬೇಕು ಎಂದು ತಾಲೂಕಿನ ಗುಂಬಳ್ಳಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆದ ರೈತ ಸಂಪರ್ಕ ಕೇಂದ್ರದ ಬಲವರ್ಧನೆ ಕಾರ್ಯಕ್ರಮದಲ್ಲಿ ತಿಳಿಸಿಕೊಡಲಾಯಿತು. ಕೆ ವಿ ಕೆ ಕೃಷಿ ವಿಜ್ಞಾನ ಕೇಂದ್ರದ ಹರದನಹಳ್ಳಿ ಡಾಕ್ಟರ್ ರಜತ್ ಮಾತನಾಡಿ, ಯಾವ ಭಾಗದಲ್ಲಿ ಯಾವ ಬೆಳೆ ಬೆಳೆಯಬೇಕು ಎಂಬುದನ್ನು ಮಣ್ಣಿನ ಗುಣಮಟ್ಟವನ್ನು ಪರಿಶೀಲಿಸಿ ನಂತರ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಿ ಅವರಿಂದ ಮಾಹಿತಿ ಪಡೆದು ಅಂತಹ ಬೆಳೆಗಳನ್ನು ಬೆಳೆದರೆ ಒಳ್ಳೆ ಇಳುವರಿ ಬರಲಿದೆ ಬರಲಿದೆ. ಯಾವ ಕಾಲಕ್ಕೆ ಯಾವ ಬಿತ್ತನೆ ಮಾಡಬೇಕು ಅಂತ ಬೆಳೆಗಳನ್ನು ಮಾತ್ರ ಬೆಳೆಯಬೇಕು. ಹೆಚ್ಚಾಗಿ ನೀರಿನ ಒತ್ತಡ ಇರುವಂತಹ ಕಡೆ ಕಬ್ಬು ಮತ್ತು ಭತ್ತ ಬೆಳೆಯಬೇಕು. ಮಳೆ ಆಶ್ರಯದಲ್ಲಿ ರಾಗಿ, ಮುಸುಕಿನ ಜೋಳದ ಬೆಳೆ ಬೆಳೆಯಬೇಕು. ಮಳೆಯಾಶ್ರಯದಲ್ಲಿ ರೈತರು ಹೆಚ್ಚಾಗಿ ಮುಸುಕಿನಜೋಳ ಬೆಳೆಯುವುದರಿಂದ ಇತ್ತೀಚಿಗೆ ಮುಸುಕಿನ ಜೋಳದ ಬೆಳೆಗೆ ಸೈನಿಕ ಹುಳ ದಾಳಿ ಮಾಡುತ್ತಿರುವುದರಿಂದ ಅದನ್ನು ತಡೆಗಟ್ಟುವ ಉದ್ದೇಶದಿಂದ 100ಗ್ರಾಂ ಬೆಂಜವೇಟ್ ಔಷಧವನ್ನು ಒಂದು ಎಕರೆಗೆ ಎರಡರಿಂದ ಮೂರು ಬಾರಿ ಸಿಂಪಡಿಸಿದರೆ ಸೈನಿಕ ಹುಳು ಬಾಧೆಯನ್ನು ತಡೆಗಟ್ಟಬಹುದೆಂದು ತಿಳಿಸಿದರು.
ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ಸೋಮಣ್ಣ ಮಾತನಾಡಿ, ರೈತರಿಗೆ ಅನುಕೂಲವಾಗುವ ಉದ್ದೇಶದಿಂದ ಕೆರೆಗಳ ಹೂಳು ತೆಗೆಸುವುದರ ಜೊತೆಗೆ ಮುಚ್ಚಿಹೋಗಿರುವ ಸಂಪರ್ಕ ಕಾಲುವೆಗಳನ್ನು ದುರಸ್ತಿ ಗೊಳಿಸಿದರು ರೈತರಿಗೆ ಅನುಕೂಲವಾಗಲಿದೆ. ಮುಚ್ಚಿ ಹೋಗಿರುವುದರ ಬಗ್ಗೆ ನಮಗೆ ಮಾಹಿತಿ ನೀಡಿದರೆ ದುರಸ್ತಿ ಮಾಡಲು ಕ್ರಮ ಕೈಗೊಳ್ಳುತ್ತೇನೆ ಎಂದರು.
ಕೃಷಿ ಅಧಿಕಾರಿ ವೆಂಕಟರಂಗಶೆಟ್ಟಿ, ಸಹಾಯಕ ಕೃಷಿ ನಿರ್ದೇಶಕ ಅಮೃತೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾಂತಮ್ಮ ಸೇರಿದಂತೆ ಇತರರು ಹಾಜರಿದ್ದರು.