ಖೇಲ್ ರತ್ನ ಅವಾರ್ಡ್ಗೆ ಮೇಜರ್ ಧ್ಯಾನ್ ಚಂದ್ ಅವರ ಹೆಸರನ್ನು ಏಕೆ ಇಡಲಾಯಿತು ….?

ಹಿಟ್ಲರ್​​ನ ಮೋಟು ಮೀಸೆ ಮಣ್ಣಾಗುವಂತೆ ‘ಭಾರತ ಮಾರಾಟಕ್ಕೆ ಇಲ್ಲ’ ಎಂದ ಧ್ಯಾನ್​ ಚಂದ್ .                                            

  ಅದು 1936ರ ಕಾಲ. ಜರ್ಮನಿಯ ನಾಜಿಗಳು ಬೇಸಿಗೆ ಒಲಿಂಪಿಕ್ಸ್​​ ಕ್ರೀಡಾಕೂಟವನ್ನು (Summer Olympics) ಅದ್ದೂರಿಯಾಗಿ ನಡೆಸಿಕೊಟ್ಟಿದ್ದರು. ಆ ಕ್ರೀಡಾಕೂಟದಲ್ಲಿ ಮೇಜರ್​ ಧ್ಯಾನ್​​ ಚಂದ್ ನಾಯಕತ್ವದಲ್ಲಿ ಭಾರತದ ಹಾಕಿ ತಂಡ ಫೈನಲ್​ಗೆ ಲಗ್ಗೆಯಿಟ್ಟಿತ್ತು. ಅದಕ್ಕೂ ಮುನ್ನ ಸೆಮಿಫೈನಲ್​​ನಲ್ಲಿ ಫ್ರಾನ್ಸ್​ ವಿರುದ್ಧ ಒಂದಲ್ಲ ಎರಡಲ್ಲ ಹತ್ತು ಗೋಲ್​ಗಳನ್ನು ಭಾರತೀಯ ಹಾಕಿ ಪಟುಗಳು ಬಾರಿಸಿದ್ದರು. ಆದರೆ ಎದುರಾಳಿ ತಂಡಕ್ಕೆ ಒಂದು ಗೋಲನ್ನೂ ಹೊಡೆಯಲು ಅವಕಾಶ ನೀಡದೇ ಹೋದರು. ತನ್ಮೂಲಕ ಭಾರತ ತಂಡ 10-0 ವಿಕ್ಟರಿಯೊಂದಿಗೆ ಫೈನಲ್​ಗೆ ರಹದಾರಿ ಪಡೆದಿತ್ತು. ಆ ಪಂದ್ಯದಲ್ಲಿ ಧ್ಯಾನ್​​ ಚಂದ್ ಒಬ್ಬರೇ ನಾಲ್ಕು ಗೋಲು ಬಾರಿಸಿದ್ದರು.

ಆದರೆ ಫೈನಲ್​ನಲ್ಲಿ ಎದುರಿಗೆ ಇದ್ದಿದ್ದು ಒಲಿಂಪಿಕ್ಸ್ (Berlin Olympics 1936)​​ ಆತಿಥ್ಯ ರಾಷ್ಟ್ರವಾದ ಜರ್ಮನಿ. ಆಗಸ್ಟ್​ 15ರಂದು ಬರ್ಲಿನ್​ನಲ್ಲಿ ಫೈನಲ್​​ ಪಂದ್ಯ ಆಯೋಜಿಸಲಾಗಿತ್ತು. 40 ಸಾವಿರ ಜರ್ಮನ್ನರು ಫೈನಲ್​ ನೋಡಲು ಟಿಕೆಟ್​ ತೆಗೆದುಕೊಂಡು ಒಳಪ್ರವೇಶಿಸಿದ್ದರು. ಇವರೆದುರು ಹೇಗಪ್ಪಾ ಆಡುವುದು? ಎಂದು ಭಾರತದ ಹಾಕಿ ಪಟುಗಳು ಒಳಗೊಳಗೇ ಭೀತಿಗೊಳಗಾಗಿದ್ದರು. ಅವರನ್ನು ಮತ್ತಷ್ಟು ಆತಂಕ, ಭಯಕ್ಕೆ ಈಡುಮಾಡಿದ ಸಂಗತಿಯೆಂದರೆ ಅಡಾಲ್ಫ್​ ಹಿಟ್ಲರ್​​ ಎಂಬ ಸರ್ವಾಧಿಕಾರಿ ತನ್ನ ಮೋಟು ಮೀಸೆಯೊಂದಿಗೆ ಬಂದು ಫೈನಲ್ ಪಂದ್ಯ ವೀಕ್ಷಿಸುತ್ತಾನೆ ಎಂಬುದು.

ದಾದಾ ಧ್ಯಾನ್​ ಚಂದ್ ಹಾಕಿ ಆಟ ಆಗ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕಾಲ:

ಆದರೆ ಈ ಕಡೆಗೆ ಬ್ಯಾಟಲ್​ ಫ್ರಂಟ್​ನಲ್ಲಿ ಇದ್ದಿದ್ದು ಇದೇ ಧ್ಯಾನ್​ ಚಂದ್ ಎಂಬ ಅಸಾಧಾರಣ ಕೀಡಾಪಟು. ಆತ ತನ್ನ ಖ್ಯಾತಿಗೆ ತಕ್ಕಂತೆ ಮೈದಾನದಲ್ಲಿ ವಿಜೃಂಭಿಸಿಬಿಟ್ಟ. ಅಡಾಲ್ಫ್​ ಹಿಟ್ಲರ್ ಪಂದ್ಯ ವೀಕ್ಷಿಸುತ್ತಿದ್ದಾನೆ ಎಂಬುದನ್ನು ಮರೆತು ತನ್ನ ಎಂದಿನ ಆಟ ಆಡತೊಡಗಿದ. ಮುಂದೆ ಆತನ ಆಟ ಚಿನ್ನದಂತಹ ಇತಿಹಾಸದ ಪುಟಕ್ಕೆ ಸೇರಿತು. ಭಾರತ ತಂಡವು ಜರ್ಮನ್​ ತಂಡವನ್ನು ಹಣ್ಣುಗಾಯಿ ನೀರುಗಾಯಿ ಮಾಡಿ ಚಿನ್ನದ ಪದಕ ಗೆದ್ದಾಗಿತ್ತು.

ಸೆಮಿಫೈನಲ್​ನಲ್ಲಿ ನಾಲ್ಕು ಗೋಲು ಬಾರಿಸಿದ್ದ ದಾದಾ ಧ್ಯಾನ್​ ಚಂದ್ ಫೈನಲ್​ನಲ್ಲಿ ಸಿಕ್ಸರ್​ ಬಾರಿಸಿದ್ದರು! ಅಂದರೆ ಭಾರತ ತಂಡ ಒಟ್ಟು 8 ಗೋಲು ಬಾರಿಸಿದ್ದರೆ 6 ಗೋಲುಗಳು ಧ್ಯಾನ್​ ಚಂದ್ ಹಾಕಿ ಸ್ಟಿಕ್​​ನಿಂದ ಸಿಡಿದಿತ್ತು. ಅದನ್ನು ಸಾಕ್ಷಾತ್​ ಪರಾಂಬರಿಸಿದ್ದ ಅಡಾಲ್ಫ್​ ಹಿಟ್ಲರ್ ಎಂಬ ಮೋಟು ಮೀಸೆಯ ಮಾಮ ಪಂದ್ಯ ಮುಗಿದ ಮೇಲೆ, ಭಾರತದ ತಂಡದ ನಾಯಕನ ಕೊರಳಿಗೆ ಗೆಲುವಿನ ಮಾಲೆ ತೊಡಿಸುವಾಗ, ‘ಮಿಸ್ಟರ್​ ಧ್ಯಾನ್​ ಚಂದ್​! ಜರ್ಮನಿ ಸೇನೆಯಲ್ಲಿ ನಿನಗೆ ಉದ್ಯೋಗ ನೀಡುವೆ. ಜಾಯಿನ್ ಆಗಿಬಿಡು’ ಎಂದು ಧಿಮಾಕಿನಿಂದ ಕೇಳುತ್ತಾನೆ.

ಅದಕ್ಕೆ ಜೀನವದಲ್ಲಿ ಮೊದಲ ಬಾರಿಗೆ ಹಿಟ್ಲರ್​​ನ ಮೀಸೆ ಮಣ್ಣಾಗುವಂತೆ ಧ್ಯಾನ್​ ಚಂದ್ ದಿಟ್ಟ ಪ್ರತ್ಯುತ್ತರ ನೀಡಿದ್ದರು. ಭಾರತ ಮಾತೆಯ ಗಾಢ ಧ್ಯಾನದಲ್ಲಿರುವಂತೆ​ ಕಣ್ಣು ಮುಚ್ಚಿದ ಧ್ಯಾನ್​ ಚಂದ್ ತಣ್ಣಗೆ, ಆದರೆ ಕಂಚಿನ ಕಂಠದಲ್ಲಿ ‘‘ಭಾರತ ಮಾರಾಟಕ್ಕೆ ಇಲ್ಲ’’ India is not for sale ಎಂದು ಉತ್ತರಿಸಿದ್ದರು. ಮುಂದೆ ಧ್ಯಾನ್​ ಚಂದ್ ಅವರೇ ತಾವು ಹಿಟ್ಲರ್​​ಗೆ ಇಂತಹ ದಿಟ್ಟ ಉತ್ತರ ನೀಡಿದ್ದಾಗಿ ಭಾರತಕ್ಕೆ ಬಂದ ಮೇಲೆ ಅನೇಕ ಬಾರಿ ಹೇಳಿದ್ದರು.

ಈ ಮಧ್ಯೆ, ಕ್ರೀಡಾಂಗಣದಲ್ಲಿ ಜಮಾಯಿಸಿದ್ದ ನಲವತ್ತು ಸಾವಿರ ನಾಜಿಗಳು ಧ್ಯಾನ್​ ಚಂದ್ ಉತ್ತರ ಕೇಳಿ, ಆತನ ಎದೆಗೆ ಹಿಟ್ಲರ್​ ಗುಂಡು ಹೊಡೆಯುವುದು ಗ್ಯಾರೆಂಟಿ ಎಂದು ಅಂದುಕೊಳ್ಳುತ್ತಿರುವಾಗ.. ಒಂದು ಹೆಜ್ಜೆ ಹಿಂದಕ್ಕೆ ಹೋದ ಹಿಟ್ಲರ್,​ ಧ್ಯಾನ್​ ಚಂದ್​ಗೆ ಮಿಲಿಟರಿ ಸೆಲ್ಯೂಟ್​ ಹೊಡೆಯುತ್ತಾ ನಿನ್ನ ದೇಶಾಭಿಮಾನಕ್ಕೆ ಇಡೀ ಜರ್ಮನ್ ಸೆಲ್ಯೂಟ್​ ಹೊಡೆಯುತ್ತದೆ ಎಂದು ಹೇಳುತ್ತಾ ಧ್ಯಾನ್​ ಚಂದ್​ಗೆ ಹಾಕಿ ಮಾಂತ್ರಿಕ (Wizard of Hockey) ಎಂಬ ಬಿರುದನ್ನು ನೀಡುತ್ತಾನೆ. ನಿನ್ನಂತಹ ಆಟಗಾರರು ಶತಮಾನಕ್ಕೆ ಒಬ್ಬರಂತೆ ಹುಟ್ಟುತ್ತಾರೆ ಎಂದು ಹೆಮ್ಮೆಯಿಂದ ಕೊಂಡಾಡುತ್ತಾನೆ. ಇದಿಷ್ಟೂ ಭಾರತೀಯ ಹಾಕಿ ಇತಿಹಾಸದ ಚಿನ್ನದ ಪುಟಗಳಲ್ಲಿ ದಾಖಲಾಗಿದೆ…..!!!!!!

Leave a Reply

Your email address will not be published. Required fields are marked *