ಚಿರತೆ ದತ್ತು ಪಡೆದ ಚಿತ್ರ ನಟಿ

ಕಿರುತೆರೆ ಹಾಗು ಬೆಳ್ಳಿತೆರೆ ನಟಿ ಯವರು ತಮ್ಮ ಪತಿಯೊಂದಿಗೆ ತಮ್ಮ ಹುಟ್ಟೂರಾದ ಮೈಸೂರಿನ ಚಾಮರಾಜೇಂದ್ರ ಮೃಗಾಲಯಕ್ಕೆ 57,000₹ ಗಳನ್ನು ನೀಡಿ ಅವರ ಪುತ್ರ ವೇದಾಂತ್ ಶ್ರೀನಿಧಿಯ ಇಚ್ಚೆಯ ಮೇರೆಗೆ ಭೂಮಿಯಲ್ಲಿ ಅತಿ ವೇಗದ ಪ್ರಾಣಿ ಹಾಗು ಅಳಿವಿನಂಚಿನಲ್ಲಿರುವ “ಚಿರತೆ” ಯನ್ನು ಹಾಗು ಮಗಳ ಇಚ್ಚೆಯಂತೆ  ಅಳಿವಿನಂಚಿನಲ್ಲಿರುವ ರಿಂಗ್-ಟೈಲ್ಡ್ ಲಾಮುರ್ ಅನ್ನು ದತ್ತು ಪಡೆಯುವ ಮೂಲಕ ವನ್ಯ ಜೀವಿಗಳ ಸಂರಕ್ಷಣೆಗೆ ಕೈ ಜೋಡಿಸಿದ್ದಾರೆ.

ಕರ್ನಾಟಕ ಮೃಗಾಲಯದ ಅಧ್ಯಕ್ಷರಾದ ಎಲ್ ಆರ್ ಮಹದೇವ್ ಸ್ವಾಮಿಯವರು ಯುವಪೀಳಿಗೆಯ ಈ ಕಾಳಜಿಯನ್ನು ಶ್ಲಾಘಿಸಿದ್ದಾರೆ

ಅಲ್ಲದೆ ನಟಿ ಯಮುನಾ ಶ್ರೀನಿಧಿ ಅವರು ಮೃಗಾಲಯದಲ್ಲಿನ ಸಿಬ್ಬಂದಿ ವರ್ಗಕ್ಕೆ ದಿನಸಿ ಕಿಟ್ ಗಳನ್ನು ವಿತರಿಸಿ ಮಾನವೀಯತೆಯನ್ನು ಮೆರೆದಿದ್ದಾರೆ

Leave a Reply

Your email address will not be published. Required fields are marked *