
ಡ್ರಗ್ಸ್ ಹಣದಲ್ಲಿ ಸರ್ಕಾರ ಬೀಳಿಸಿದೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಆರೋಪ ವಿಚಾರಕ್ಕೆ ಮೈಸೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿರುಗೇಟು ಕೊಟ್ಟಿದ್ದಾರೆ.
ಡ್ರಗ್ ಹಣದಲ್ಲಿ ಸರ್ಕಾರ ಬೀಳಿಸುವ ಸ್ಥಿತಿ ಬಿಜೆಪಿಗೆ ಬಂದಿಲ್ಲ. ಕುಮಾರಸ್ವಾಮಿ ಈಗ ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾಗಿದೆ. ಆಗ ಅವರೇ ಅಧಿಕಾರದಲ್ಲಿದ್ದರು. ಇದನ್ನು ಮಟ್ಟ ಹಾಕಬಹುದಾಗಿತ್ತು. ಆಗ ಸುಮ್ಮನೆ ಇದ್ದು ಈಗ ಮಾತನಾಡಿದರೆ ಹೇಗೆ…? ಎಂದು ಪ್ರಶ್ನಿಸಿದ ಎಸ್.ಟಿ.ಸೋಮಶೇಖರ್ ಎಲ್ಲ ಆರೋಪವನ್ನ ನಿರಾಕರಿಸಿದರು.